ಮೈಸೂರು ರೇಪ್ ಪ್ರಕರಣ ಚರ್ಚೆ ವೇಳೆ ಸದನದಲ್ಲಿ ಬಿಚ್ಚಿಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಪಂಚೆ; ಮುಂದೇನಾಯ್ತು?

ಸಿದ್ದರಾಮಯ್ಯ ಅವರ ಪಂಚೆ ಜಾರಿದ್ದನ್ನು ಗಮನಿಸಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹತ್ತಿರ ಬಂದು ಕಿವಿಯಲ್ಲಿ ಹೇಳಿದ್ದಾರೆ. ನಂತರ ಕುಳಿತುಕೊಂಡು ಸಿದ್ದರಾಮಯ್ಯ ಪಂಚೆ ಕಟ್ಟಿಕೊಂಡಿದ್ದಾರೆ.

ಬೆಂಗಳೂರು: ಮೈಸೂರು ರೇಪ್ ಪ್ರಕರಣ ಚರ್ಚೆ ವೇಳೆ ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಂಚೆ ಜಾರಿದೆ. ಸಿದ್ದರಾಮಯ್ಯ ಅವರ ಪಂಚೆ ಜಾರಿದ್ದನ್ನು ಗಮನಿಸಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹತ್ತಿರ ಬಂದು ಕಿವಿಯಲ್ಲಿ ಹೇಳಿದ್ದಾರೆ. ನಂತರ ಕುಳಿತುಕೊಂಡು ಸಿದ್ದರಾಮಯ್ಯ ಪಂಚೆ ಕಟ್ಟಿಕೊಂಡಿದ್ದಾರೆ. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪಾ ಪಂಚೆ ಬಿಚ್ಚಿ ಹೋಗಿದೆ. ಸರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನೆಲ್ಲಾ ಗಮನಿಸಿದ ರಮೇಶ್ ಕುಮಾರ್ ನಮ್ಮ ಅಧ್ಯಕ್ಷರು ಪಂಚೆ ಬಿಚ್ಚಿದ್ದನ್ನು ಕಿವಿಯಲ್ಲಿ ಬಂದು ಹೇಳಿದರೆ, ಇವರು ಅದನ್ನು ಊರಿಗೆಲ್ಲಾ ಹೇಳಿದರು ಎಂದು ತಮಾಷೆಯಾಗಿ ಕಾಲೆಳೆದರು.

ಮೊದಲು ಪಂಚೆ ಕಟ್ಟಿದರೆ ಬಿಚ್ಚಿಕೊಳ್ಳುತ್ತಿರಲಿಲ್ಲ. ಈಗ ಕೊರೊನಾ ಬಂದ ಬಳಿಕ ಬೊಜ್ಜು ಜಾಸ್ತಿ ಬಂದಿದೆ, ಪಂಚೆ ಬಿಚ್ಚಿಕೊಳ್ಳುತ್ತದೆ. ಅದಕ್ಕೆ ಯಾವಾಗಲೂ ಜುಬ್ಬಾ ಹಾಕಿಕೊಳ್ಳೋದು. ಬಹಳಷ್ಟು ಮಂದಿ ನಿಲುವಂಗಿ ಹಾಕಿಕೊಳ್ಳುತ್ತಾರೆ. ಇದರಿಂದ ಪಂಚೆನೂ ಬೇಕಿಲ್ಲ, ಪ್ಯಾಂಟ್ ಕೂಡ ಬೇಕಿಲ್ಲ ಎಂದು ಪಂಚೆಯ ಬಗ್ಗೆ ಸಿದ್ದರಾಮಯ್ಯ ತಮ್ಮ ವಿಶೇಷ ವಿಶ್ಲೇಷಣೆ ನೀಡಿ, ಪ್ರಸಂಗ ಕೊನೆಗಾಣಿಸಿದರು.

ಇದನ್ನೂ ಓದಿ:

ಅನುದಾನ ತಾರತಮ್ಯ ವಿರೋಧಿಸಿ ಸದನದಲ್ಲಿ ಜೆಡಿಎಸ್ ಸದಸ್ಯರ ಪ್ರತಿಭಟನೆ; ರೇವಣ್ಣ ವಿರುದ್ಧ ಸ್ಪೀಕರ್ ಕಾಗೇರಿ ಕೆಂಡಾಮಂಡಲ

ವಿಧಾನಸಭೆಯಲ್ಲಿ ಚಾಣಕ್ಯ ವಿವಿ ವಿಧೇಯಕ ಅಂಗೀಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ

Click on your DTH Provider to Add TV9 Kannada