ಶಾಪಗ್ರಸ್ತೆ ಅಹಲ್ಯಾದೇವಿ ರಾಮನ ಪಾದಸ್ಪರ್ಶದಿಂದ ವಿಮೋಚನೆಗೊಂಡು ಮಾರಮ್ಮಳಾಗಿ ಪೂಜಿಸಲ್ಪಡುತ್ತಿರುವ ದೇವಸ್ಥಾನವಿದು!

ಗೌತಮ ಮಹರ್ಷಿಯವರ ಪತ್ನಿಯಾಗಿದ್ದ ಅಹಲ್ಯಾದೇವಿ ಬಹಳ ರೂಪವಂತೆ. ಗೋಹತ್ಯೆ ಪಾಪ ಪರಿಹಾರಕ್ಕಾಗಿ ಮಹರ್ಷಿಗಳು ಕಾವೇರಿ ನದಿತಟದಲ್ಲಿ ತಪಸ್ಸಿಗೆ ಕೂತಾಗ, ಇಂದ್ರನ ಕಣ್ಣು ಅಹಲ್ಯಾದೇವಿಯ ಮೇಲೆ ಬೀಳುತ್ತದೆ. ಆಕೆಯನ್ನು ಒಲಿಸಿಕೊಳ್ಳಲು ಇಂದ್ರ ಮಹರ್ಷಿಗಳ ಆಶ್ರಮದ ಕಡೆ ಬರುತ್ತಾನೆ.

ಮೈಸೂರಿಗೆ ಹತ್ತಿರವಿರುವ ಶ್ರೀರಂಗಪಟ್ಟಣದಲ್ಲಿ ಅಹಲ್ಯಾದೇವಿ ಮಾರಮ್ಮನ ದೇವಸ್ಥಾನವಿದೆ. ಇದು ದೊಡ್ಡ ದೇವಸ್ಥಾನವೇನೂ ಅಲ್ಲ. ಆದರೆ, ಹುಣ್ಣಿಮೆ ಮತ್ತು ಅಮವಾಸ್ಯೆಗಳಂದು ಹರಕೆ ಹೊತ್ತ ಅನೇಕ ಭಕ್ತರು ಪಾಪ ನಿವೇದನೆ ಮತ್ತು ಪಾಪ ಪರಿಹಾರಕ್ಕಾಗಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಸುಂದರ ಮತ್ತು ಹಚ್ಚ ಹಸುರಿನಿಂದ ಕಂಗೊಳಿಸುವ ಮತ್ತು ಮನಸ್ಸಿಗೆ ಮುದ ನೀಡುವ ಪ್ರಕೃತಿ ತಾಣದಲ್ಲಿ ಅಹಲ್ಯಾದೇವಿ ಮಾರಮ್ಮನ ಗುಡಿ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಹತ್ತಿರದಲ್ಲಿ ಒಂದು ಕಲ್ಯಾಣಿ ಇದೆ. ಕಷ್ಟ ಪರಿಹಾರಕ್ಕಾಗಿಯೂ ಭಕ್ತರು ಅಹಲ್ಯಾದೇವಿ ಮಾರಮ್ಮನ ಮೊರೆ ಹೋಗುತ್ತಾರೆ.

ಆದರೆ, ಸೋಜಿಗದ ಸಂಗತಿಯೆಂದರೆ ಅಹಲ್ಯಾದೇವಿ ಮಾರಮ್ಮ ಯಾರು, ಆಕೆಯನ್ನು ಈ ಸ್ಥಳದಲ್ಲಿ ಯಾಕೆ ಪ್ರತಿಷ್ಠಾಪಿಸಲಾಗಿದೆ ಎಂದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ದಂತಕತೆಯೊಂದರ ಪ್ರಕಾರ ಅಹಲ್ಯಾದೇವಿ ಋಷಿ ಪತ್ನಿ. ಗೌತಮ ಮಹರ್ಷಿಯವರ ಪತ್ನಿಯಾಗಿದ್ದ ಅಹಲ್ಯಾದೇವಿ ಬಹಳ ರೂಪವಂತೆ. ಗೋಹತ್ಯೆ ಪಾಪ ಪರಿಹಾರಕ್ಕಾಗಿ ಮಹರ್ಷಿಗಳು ಕಾವೇರಿ ನದಿತಟದಲ್ಲಿ ತಪಸ್ಸಿಗೆ ಕೂತಾಗ, ಇಂದ್ರನ ಕಣ್ಣು ಅಹಲ್ಯಾದೇವಿಯ ಮೇಲೆ ಬೀಳುತ್ತದೆ. ಆಕೆಯನ್ನು ಒಲಿಸಿಕೊಳ್ಳಲು ಇಂದ್ರ ಮಹರ್ಷಿಗಳ ಆಶ್ರಮದ ಕಡೆ ಬರುತ್ತಾನೆ.

ಮಹರ್ಷಿಗಳು ಸ್ನಾನಕ್ಕೆಂದು ನದಿತೀರಕ್ಕೆ ಹೋದಾಗ ಅದೇ ತಕ್ಕ ಸಮಯವೆಂದು ಭಾವಿಸಿ ಇಂದ್ರ ಋಷಿ ಕುಟೀರದೊಳಗೆ ಪ್ರವೇಶಿಸುತ್ತಾನೆ. ಆಗಲೇ ಸ್ನಾನ ಮುಗಿಸಿಕೊಂಡು ಕುಟೀರಕ್ಕೆ ವಾಪಸ್ಸಾಗುವ ಮುನಿಗಳು ಇಂದ್ರನನ್ನು ಅಲ್ಲಿ ಕಂಡು ನಖಶಿಖಾಂತ ಕೋಪಗೊಂಡು ತಮ್ಮ ಪತ್ನಿಗೆ ಕಲ್ಲಾಗು ಎಂದು ಶಪಿಸುತ್ತಾರೆ.

ಹಾಗೆ ಕಲ್ಲಾಗಿಹೋದ ಆಹಲ್ಯಾದೇವಿಯ ಶಾಪ ವಿಮೋಚನೆ ಶ್ರೀರಾಮನ ಪಾದಸ್ಪರ್ಶದದಿಂದ ಆಗುತ್ತದೆ. ಅಲ್ಲಿಂದ ಆಕೆ ಮಾರಮ್ಮಳಾಗಿ ಅಲ್ಲಿ ನೆಲೆಸಿದ್ದಾಳೆಂದು ಹೇಳಲಾಗುತ್ತದೆ. ಈ ದೇವಸ್ಥಾನಕ್ಕಿರುವ ಪೌರಾಣಿಕ ಹಿನ್ನೆಲೆ ಇದೇ.

ಇದನ್ನೂ ಓದಿ:  ಕಲಬುರಗಿಯಲ್ಲಿ ಪ್ರಿಯಕರನಿಗೆ ಗೂಸಾ ನೀಡಿದ ಪ್ರೇಯಸಿ; ವಿಡಿಯೋ ಇದೆ

Click on your DTH Provider to Add TV9 Kannada