ಕಲಬುರಗಿಯಲ್ಲಿ ಪ್ರಿಯಕರನಿಗೆ ಗೂಸಾ ನೀಡಿದ ಪ್ರೇಯಸಿ; ವಿಡಿಯೋ ಇದೆ
5 ವರ್ಷಗಳಿಂದ ಇರ್ಫಾನ್ ಮತ್ತು ರಹೀನಾ ಬಾನು ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಅಕ್ರಮ ಸಂಬಂಧ ಇದೆ ಅಂತ ಇರ್ಫಾನ್, ರಹೀನಾ ಬಾನು ಅನ್ನು ಬೆಂಗಳೂರಿನಲ್ಲೆ ಬಿಟ್ಟು ಊರಿಗೆ ಬಂದಿದ್ದ.
ಕಲಬುರಗಿ: ಪ್ರಿಯಕರನಿಗೆ ಪ್ರೇಯಸಿ ಗೂಸಾ ಕೊಟ್ಟ ಘಟನೆ ಕಲಬುರಗಿ ಗ್ರಾಮಾಂತರ ಠಾಣೆ ಮುಂದೆ ನಡೆದಿದೆ. ಬೆಂಗಳೂರಿನಿಂದ ಪ್ರಿಯಕರನನ್ನ ಹುಡುಕಿಕೊಂಡು ಬಂದು ಪ್ರೇಯಸಿ ಗೂಸಾ ನೀಡಿದ್ದಾಳೆ. ಇರ್ಫಾನ್ಗೆ ಪ್ರೇಯಸಿ ಗೂಸಾ ನೀಡಿದ್ದಾಳೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. 5 ವರ್ಷಗಳಿಂದ ಇರ್ಫಾನ್ ಮತ್ತು ರಹೀನಾ ಬಾನು ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಅಕ್ರಮ ಸಂಬಂಧ ಇದೆ ಅಂತ ಇರ್ಫಾನ್, ರಹೀನಾ ಬಾನು ಅನ್ನು ಬೆಂಗಳೂರಿನಲ್ಲೆ ಬಿಟ್ಟು ಊರಿಗೆ ಬಂದಿದ್ದ. ಇರ್ಫಾನ್ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿಯಾಗಿದ್ದಾನೆ. ಇರ್ಫಾನ್ಗಾಗಿ ಬೆಂಗಳೂರಿಂದ ಬಂದಿದ್ದ ರಹೀನಾ ಬಾನು, ಮದುವೆ ಮಾಡಿಕೊಳ್ಳುವಂತೆ ಪಟ್ಟುಹಿಡಿದಿದ್ದಳು. ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆ ಪೊಲೀಸ್ ಠಾಣೆ ಮುಂದೆಯೇ ಪ್ರಿಯಕರನಿಗೆ ಹೊಡೆದಿದ್ದಾಳೆ.
Published on: Sep 19, 2021 05:14 PM
Latest Videos