ಈ ಸಂದರ್ಭ ಕ್ಷಮೆ ಕೇಳುವಂತೆ ಹೆಚ್.ಡಿ. ರೇವಣ್ಣಗೆ ಬಿಜೆಪಿ ಆಗ್ರಹ ವ್ಯಕ್ತಪಡಿಸಿದೆ. ಸ್ಪೀಕರ್ ಪೀಠಕ್ಕೆ ಅಗೌರವ ತರುವ ರೀತಿ ಮಾತನಾಡಿಲ್ಲ. ನಾನು ಅಗೌರವ ತರುವ ರೀತಿ ಮಾತನಾಡಿಲ್ಲ ಎಂದು ರೇವಣ್ಣ ತಿಳಿಸಿದ್ದಾರೆ.
ಆನ್ಲೈನ್ ಜೂಜಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವಿಧಾನಸಭೆಯಲ್ಲಿ ಪೊಲೀಸ್ ತಿದ್ದುಪಡಿ ವಿಧೇಯಕ ಮಂಡಿಸಿದ್ದಾರೆ. ಬದಲಾಗುತ್ತಿರುವ ಸವಾಲುಗಳನ್ನು ನಿರ್ವಹಿಸಲು ಇಂಥ ಕಾನೂನು ಅಗತ್ಯವಿತ್ತು ಎಂದು ಸಚಿವರು ವಿವರಸಿದ್ದಾರೆ.
ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ವಿದೇಶಗಳಲ್ಲಿ ಸರ್ವರ್ ಇರಿಸಿಕೊಂಡು ಬೆಂಗಳೂರಿನಲ್ಲಿ ವ್ಯವಹಾರ ನಡೆಸುವ ದುಷ್ಟಕೂಟಗಳನ್ನು ಹೇಗೆ ಮಟ್ಟ ಹಾಕುತ್ತೀರಿ? ತಾಂತ್ರಿಕ ಸುಧಾರಣೆಗಳು ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.ರಾಯಚೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳ ಹಲವೆಡೆ ಜೂಜುಕೇಂದ್ರಗಳನ್ನು ಮುಚ್ಚಿಸಿದ್ದೇವೆ. ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ತಲೆಬಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಚಾಣಕ್ಯ ವಿವಿ ವಿಧೇಯಕಕ್ಕೆ ಅಂಗೀಕಾರ: ಇಂಥ ಇನ್ನೂ 10 ವಿವಿಗಳು ಬಂದ್ರೂ ಸೌಲಭ್ಯ ಕೊಡ್ತೇವೆ ಎಂದ ಸಿಎಂ
ಇದನ್ನೂ ಓದಿ: ರೋಡ್ ಹಂಪ್‌ಗಳ ಬಗ್ಗೆ ಸದನದಲ್ಲಿ ವ್ಯಗ್ರರಾದ ಶಾಸಕ ರಮೇಶ್ ಕುಮಾರ್; ಬೇಜವಾಬ್ದಾರಿ ಅಧಿಕಾರಿಗಳ ಸಸ್ಪೆಂಡ್ ಮಾಡಿ ಅಂದರು