ವಿಧಾನ ಪರಿಷತ್: ನಾನು ಮೂರು ಸಚಿವರ ಮಧ್ಯೆ ಇಕ್ಕಳದಂತೆ ಸಿಕ್ಕಿಹಾಕಿಕೊಂಡಿದ್ದೇನೆ- ವಸತಿ ಸಚಿವ ಸೋಮಣ್ಣ ಅಳಲು
Karnataka Legislative session: ವಸತಿ ಇಲಾಖೆ ಕೆಲಸ ಮಾಡಬೇಕು ಅಂದ್ರೆ ಅದು ಈಸಿಯಲ್ಲ. ಬೇರೆ ಬೇರೆ ಇಲಾಖೆಗಳ ಅನುಮತಿ ಪಡೆದುಕೊಳ್ಳಬೇಕು ನಾವು. ಇವರೆಲ್ಲರ ಮಧ್ಯೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ ನನಗೆ ಎಂದು ಹುಸಿ ಅಸಹಾಯಕತೆ ವ್ಯಕ್ತಪಡಿಸುತ್ತಾ ಸೋಮಣ್ಣ ನಗೆ ಬೀರಿದರು.

ಬೆಂಗಳೂರು: ರಾಜ್ಯ ವಿಧಾನಮಂಡಲ ಕಲಾಪ ಇಂದು ಬೆಳಗ್ಗೆ ಆರಂಭವಾಗಿದೆ. ವಸತಿ ಇಲಾಖೆ ಸಮಸ್ಯೆಗಳ ಬಗ್ಗೆ ವಸತಿ ಸಚಿವ ವಿ ಸೋಮಣ್ಣ ಮೇಲ್ಮನೆಯಲ್ಲಿ ಉತ್ತರ ನೀಡುತ್ತಾ, ತಮ್ಮ ಇಲಾಖೆಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸದಸ್ಯರ ಗಮನ ಸೆಳೆದರು. ನಾನು ಮೂರು ಸಚಿವರ ಮಧ್ಯೆ ಇಕ್ಕಳದಂತೆ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಹುಸಿ ಅಸಹಾಯಕತೆ ವ್ಯಕ್ತಪಡಿಸಿದ ವಸತಿ ಸಚಿವ ಸೋಮಣ್ಣ ಅವರು ಆದಾಗ್ಯೂ ವಸತಿ ಇಲಾಖೆ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಪಣ ತೊಟ್ಟಿದ್ದೇನೆ ಎಂದರು. ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದ್ದ ಹನುಮಂತ ನಿರಾಣಿ ಬಾಗಲಕೋಟೆ ಜಿಲ್ಲೆಯಲ್ಲಿ ವಾಜಪೇಯಿ ವಸತಿ ಯೋಜನೆ ಅನುಷ್ಠಾನ ಸಂಬಂಧ ಪ್ರಶ್ನೆ ಕೇಳಿದ್ದರು.
ವಸತಿ ಇಲಾಖೆ ಕೆಲಸ ಮಾಡಬೇಕು ಅಂದ್ರೆ ಅದು ಈಸಿಯಲ್ಲ. ಬೇರೆ ಬೇರೆ ಇಲಾಖೆಗಳ ಅನುಮತಿ ಪಡೆದುಕೊಳ್ಳಬೇಕು ನಾವು. ಒಂದು ಕಡೆ ಕಂದಾಯ ಮಂತ್ರಿ, ಇನ್ನೊಂದು ಕಡೆ ಆರ್.ಡಿ.ಪಿ.ಆರ್ ಮಂತ್ರಿ, ಮತ್ತೊಂದು ಕಡೆ ಅರ್ಬನ್ ಡೆವಲಪ್ಮೆಂಟ್ ಮಂತ್ರಿ ಇದರ ಹೊರತಾಗಿ ಮತ್ತೊಂದು ಕಡೆ ಜಿಲ್ಲಾಧಿಕಾರಿಗಳೂ ಇದ್ದಾರೆ. ಇವರೆಲ್ಲರ ಮಧ್ಯೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ ನನಗೆ ಎಂದು ಹುಸಿ ಅಸಹಾಯಕತೆ ವ್ಯಕ್ತಪಡಿಸುತ್ತಾ ಸೋಮಣ್ಣ ನಗೆ ಬೀರಿದರು.
ವಸತಿ ಇಲಾಖೆ ಯೋಜನೆಗೆ ಸಂಬಂಧಿಸಿ ಪರಿಷತ್ ನಲ್ಲಿ ಗದ್ದಲ
3 ವರ್ಷದಿಂದ ಹೊಸ ಮನೆಗಳನ್ನು ಹಂಚಿಕೆ ಮಾಡಿಲ್ಲ. ಚರ್ಚೆಗೆ ಅವಕಾಶ ನೀಡಬೇಕೆಂದು JDS ಸದಸ್ಯರು ಗದ್ದಲ ಮಾಡಿದರು. ಆಗ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆಗೆ ಅವಕಾಶ ನೀಡಲ್ಲ ಎಂದು ಪರಿಷತ್ ಸಭಾಪತಿ ಸ್ಥಾನದಲ್ಲಿದ್ದ ಪ್ರಾಣೇಶ್ ಹೇಳಿದರು. ಆದರೆ ಇದು ಇಡೀ ರಾಜ್ಯದ ಸಮಸ್ಯೆ ಇದು, ಮೂರು ವರ್ಷಗಳಿಂದ ಯಾಕೆ ಹೊಸ ವಸತಿ ಯೋಜನೆ ನೀಡಿಲ್ಲ, ಚರ್ಚೆಗೆ ಅವಕಾಶ ಕೊಡಲೇಬೇಕು ಅಂತಾ JDS ಸದಸ್ಯರು ಬಿಗಿಪಟ್ಟು ಹಿಡಿದರು.
ಇದನ್ನು ಓದಿ: 750 ಗ್ರಾಮ ಪಂಚಾಯತ್ಗಳಲ್ಲಿ ವಸತಿ ಯೋಜನೆ; ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲು ಸೂಚನೆ
ಇದನ್ನು ಓದಿ: ಇವರಿಬ್ಬರು ನಮ್ಮ ಇಲಾಖೆಯ ತಿಮಿಂಗಿಲಗಳು; ಇನ್ನಾದ್ರೂ ಒಳ್ಳೆಯದು ಮಾಡ್ರೊ: ಅಧಿಕಾರಿಗಳಿಗೆ ವಿ ಸೋಮಣ್ಣ ಕ್ಲಾಸ್
Karnataka Assembly Session 22-09-2021 | ವಿಧಾನಸಭೆ ಕಲಾಪ ನೇರ ಪ್ರಸಾರ | TV9 Kannada Digital Live
(Karnataka Legislative session: Housing minister v somanna talks about housing department problems)
Published On - 11:51 am, Wed, 22 September 21




