ಇವರಿಬ್ಬರು ನಮ್ಮ ಇಲಾಖೆಯ ತಿಮಿಂಗಿಲಗಳು; ಇನ್ನಾದ್ರೂ ಒಳ್ಳೆಯದು ಮಾಡ್ರೊ: ಅಧಿಕಾರಿಗಳಿಗೆ ವಿ ಸೋಮಣ್ಣ ಕ್ಲಾಸ್
V Somanna: ವಸತಿ, ಕೊಳಚೆ ಪ್ರದೇಶಾಭಿವೃದ್ಧಿ ಇಲಾಖೆ ಎಇಇ ಕಪನಿಗೌಡ ಹಾಗೂ ವಸತಿ ಇಲಾಖೆ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಡವರಿಗೆ ಒಳ್ಳೆಯದ್ದು ಮಾಡಿ ಎಂದು ಕಪನಿಗೌಡಗೆ ಸಚಿವ ಸೋಮಣ್ಣ ಕಿವಿಮಾತು ಹೇಳಿದ್ದಾರೆ.
ದಾವಣಗೆರೆ: ಕರ್ನಾಟಕದ 750 ಗ್ರಾಮ ಪಂಚಾಯತಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆ ರೂಪಿಸಿದ್ದಾರೆ. ಯೋಜನೆ ಜಾರಿಯಲ್ಲಿ ವಸತಿ ಇಲಾಖೆಯ ಜವಾಬ್ದಾರಿಯಿದೆ. ರಾಜ್ಯದಲ್ಲಿ ಜನರು ಸೂರಿಲ್ಲವೆಂದು ಪರದಾಡುವಂತಾಗಬಾರದು ಎಂದು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು (ಆಗಸ್ಟ್ 21) ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಸತಿ ಖಾತೆ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ. ಒಬ್ಬರೇ ಒಬ್ಬರು ಸೂರು ಇಲ್ಲಾ ಎಂದು ಪರದಾಡುವಂತೆ ಆಗಬಾರದು. ವಸತಿ ಇಲಾಖೆ ಅಧೀನದಲ್ಲಿ ಈಗ 5,800 ಎಕರೆ ಜಮೀನಿದೆ. ಸೈಟ್ ಮಾಡಿ ಅರ್ಹರಿಗೆ ಹಂಚಿಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ರಾಜ್ಯದ ವಿವಿಧ ಪ್ರದೇಶದಲ್ಲಿ ಸುಮಾರು 1.96 ಲಕ್ಷ ಮನೆಗಳನ್ನ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಲಾಗಿದೆ. ಈ ವಿಚಾರವಾಗಿ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿದೆ. ಜೊತೆಗೆ ಕೆಲವರ ಮೇಲೆ ಕ್ರಿಮಿನಲ್ ಕೇಸ್ ಕೂಡಾ ಮಾಡುವ ಚಿಂತನೆ ಇತ್ತು. ಈ ನಿಜಾಂಶ ಹೊರ ಬರುತ್ತಿದೆ. ಈಗ ಮತ್ತೆ ರಾಜ್ಯದಲ್ಲಿ ವಸತಿ ಇಲಾಖೆಯ ಅಧೀನದಲ್ಲಿ ಐದು ಸಾವಿರದಾ ಎಂಟು ನೂರು ಎಕರೆ ಜಮೀನು ಇದೆ. ಇದರಲ್ಲಿ ಸೈಟ್ ಮಾಡಿ ಅರ್ಹ ಫಲಾನುಭವಿಗೆ ಹಂಚಿಕೆ ಮಾಡುವ ಕಾರ್ಯ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ವಸತಿ ಇಲಾಖೆ ಅಧಿಕಾರಿಗಳಿಗೆ ಸಚಿವ ವಿ. ಸೋಮಣ್ಣ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆದಿದೆ. ದಾವಣಗೆರೆ ಡಿಸಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಲೇ ನಿಮ್ಮ ಮನೆ ಕಾಯೋಗಾ, ಎಷ್ಟ ಬೇಕು ಅಷ್ಟು ಮಾಡಿದ್ದೀರಾ. ಇನ್ನಾದ್ರು ಸ್ವಲ್ಪ ಬಡವರಿಗೆ ಒಳ್ಳೆಯದ್ದು ಮಾಡ್ರಲಾ’ ಎಂದು ಕುಟುಕಿದ್ದಾರೆ.
ಇವರಿಬ್ಬರಿದ್ದಾರೆ ನಮ್ಮ ಇಲಾಖೆಯಲ್ಲಿ ತಿಮಿಂಗಲಗಳು. ಒಬ್ಬ ಕಪನಿಗೌಡ, ಇನ್ನೊಬ್ಬ ಪದ್ಮನಾಭ ಅಂತಿದ್ದಾನೆ ತಿಮಿಂಗಲ. ಮೈಸೂರಿನಲ್ಲಿ ಕಿತಾಪತಿ ಮಾಡಿದ್ದಕ್ಕೆ ದಾವಣಗೆರೆಗೆ ಕಳಿಸಿದ್ದೆ. ಇಲ್ಲೂ ಕಪನಿಗೌಡ ಅದೇ ಕತೆ ಮುಂದುವರಿಸಿದ್ದಾನೆ ಎಂದು ಕಿಡಿಕಾರಿದ್ದಾರೆ. ವಸತಿ, ಕೊಳಚೆ ಪ್ರದೇಶಾಭಿವೃದ್ಧಿ ಇಲಾಖೆ ಎಇಇ ಕಪನಿಗೌಡ ಹಾಗೂ ವಸತಿ ಇಲಾಖೆ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೊನ್ನೆ ಕೊರೊನಾ ಬಂದು ಎಂತೆಂತ ಜನ ಹೋದ್ರು. ಬಡವರಿಗೆ ಒಳ್ಳೆಯದ್ದು ಮಾಡಿ ಎಂದು ಕಪನಿಗೌಡಗೆ ಸಚಿವ ಸೋಮಣ್ಣ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಪ್ರೀತಂಗೌಡ ಒಮ್ಮೆ ಶಾಸಕರಾದ ತಕ್ಷಣವೇ ದೇವರಲ್ಲ, ನಾನು ಕೂಡ ದೇವೇಗೌಡರ ಮನೆಗೆ ಹೋಗಿದ್ದೆ: ಸಚಿವ ಸೋಮಣ್ಣ
ಡಿಸೆಂಬರ್ ಅಧಿವೇಶನ ಸುವರ್ಣಸೌಧದಲ್ಲಿ ನಡೆಸುವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published On - 6:02 pm, Sat, 21 August 21