ನಟ ಅರ್ಷದ್ ವಾರ್ಸಿ ಫೋಟೋ ಪೋಸ್ಟ್ ಮಾಡಿದ WWE ಸೂಪರ್ ಸ್ಟಾರ್ ಜಾನ್ ಸೀನಾ; ಕಾರಣವೇನು?
ಜಾನ್ ಸೀನಾ ಈ ರೀತಿ ಭಾರತೀಯರ ಫೋಟೋ ಹಾಕಿದ್ದು ಇದೇ ಮೊದಲಲ್ಲ. ಸುಶಾಂತ್ ಸಿಂಗ್ ರಜಪೂತ್, ಸಿದ್ಧಾರ್ಥ್ ಶುಕ್ಲಾ ಮೃತಪಟ್ಟಾಗ, ಅವರು ಶ್ರದ್ಧಾಂಜಲಿ ಅರ್ಪಿಸಿದ್ದರು.
WWE ಸೂಪರ್ ಸ್ಟಾರ್ ಜಾನ್ ಸೀನಾ ತುಂಬಾನೇ ಫೇಮಸ್. ವಿಶ್ವಾದ್ಯಂತ ಅವರಿಗೆ ಫ್ಯಾನ್ಸ್ ಇದ್ದಾರೆ. ದಶಕಗಳ ಕಾಲ WWEನಲ್ಲಿರುವ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಾಂತರ ಜನ ಹಿಂಬಾಲಕರಿದ್ದಾರೆ. ಭಾರತದಲ್ಲೂ WWE ನೋಡುವವರ ಸಂಖ್ಯೆ ಕಡಿಮೆ ಏನಿಲ್ಲ. ಈ ಎಲ್ಲ ಕಾರಣಕ್ಕೆ ಜಾನ್ ಸೀನಾ ಅವರು ಭಾರತೀಯರಿಗೂ ಇಷ್ಟವಾಗುತ್ತಾರೆ. ಅಚ್ಚರಿ ಎಂದರೆ, ಭಾರತದ ಮೇಲೂ ಅವರಿಗೆ ಪ್ರೀತಿ ಇದೆ. ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಈಗ, ಅವರು ಬಾಲಿವುಡ್ ನಟ ಅರ್ಷದ್ ವಾರ್ಸಿ ಬಾಡಿ ಟ್ರಾನ್ಸ್ಫಾರ್ಮೇಷನ್ ಫೋಟೋ ಪೋಸ್ಟ್ ಮಾಡಿದ್ದಾರೆ.
ಜಾನ್ ಸೀನಾ ಈ ರೀತಿ ಭಾರತೀಯರ ಫೋಟೋ ಹಾಕಿದ್ದು ಇದೇ ಮೊದಲಲ್ಲ. ಸುಶಾಂತ್ ಸಿಂಗ್ ರಜಪೂತ್, ಸಿದ್ಧಾರ್ಥ್ ಶುಕ್ಲಾ ಮೃತಪಟ್ಟಾಗ, ಅವರು ಶ್ರದ್ಧಾಂಜಲಿ ಅರ್ಪಿಸಿದ್ದರು. ನಟಿ ಐಶ್ವರ್ಯಾ ರೈ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋಟೋ ಕೂಡ ಪೋಸ್ಟ್ ಮಾಡಿದ್ದರು ಜಾನ್ ಸೀನಾ. ಇದಕ್ಕೂ ಅವರು ಯಾವುದೇ ವಿವರಣೆ ಬರೆದಿಲ್ಲ.
ಇದನ್ನೂ ಓದಿ: ಸಿದ್ದಾರ್ಥ್ ಶುಕ್ಲಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ WWE ಸೂಪರ್ ಸ್ಟಾರ್ ಜಾನ್ ಸೀನಾ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

