ಬೀದರ್​: ಚಳಕಾಪುರದ ಆಂಜನೇಯ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನೆರವೇರಿಸಲ್ಪಡುತ್ತದೆ

ಚಳಕಾಪುರನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಆಂಜನೇಯನ ವಿಗ್ರಹಕ್ಕೆ ಬೆಳಗ್ಗೆ ಹಾಲು, ಮಧ್ಯಾಹ್ನ ಗಂಧ ಮತ್ತು ಸಾಯಂಕಾಲ ಪಂಚಾಮೃತ ಅಭಿಷೇಕ ನಡೆಯುತ್ತದೆ.

ಭಾರತದ ಎಲ್ಲ ಪ್ರದೇಶಗಳಲ್ಲಿ ಆಂಜನೇಯನ ದೇವಸ್ಥಾನಗಳು ವಿಶಿಷ್ಟ ಎನಿಸುತ್ತವೆ. ಶ್ರೀರಾಮಚಂದ್ರನ ಪರಮಭಕ್ತ ಹಣುಮಂತನಿಗೆ ಸಾಮಾನ್ಯವಾಗಿ ಶನಿವಾರಗಳಂದು ವಿಶೇಷ ಪೂಜೆ ಸಲ್ಲುತ್ತದೆ. ಪ್ರತಿಯೊಂದು ಹನಮಾನ್ ಮಂದಿರದಲ್ಲಿ ಶನಿವಾರ ಯಥೇಚ್ಛವಾಗಿ ಭಕ್ತರನ್ನು ಕಾಣಬಹದು. ಉತ್ತರ ಕರ್ನಾಟಕದಲ್ಲಿ ಯುವತಿಯರು ಶನಿವಾರದಂದೇ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ಅವರನ್ನು ಮೆಚ್ಚಿಸಲು ಯುವಕರೂ ಅಂದು ದೇವಾಸ್ಥಾನಕ್ಕೆ ಹೋಗುತ್ತಾರೆ ಅನ್ನೋದು ಈ ಭಾಗದ ಜನ ಸಾಮಾನ್ಯವಾಗಿ ಆಡಿಕೊಳ್ಳುವ ಮಾತು. ಬಿಡಿ, ಅದು ಬೇರೆ ವಿಷಯ.

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಆಂಜನೇಯನ ವಿಗ್ರಹಕ್ಕೆ ಬೆಳಗ್ಗೆ ಹಾಲು, ಮಧ್ಯಾಹ್ನ ಗಂಧ ಮತ್ತು ಸಾಯಂಕಾಲ ಪಂಚಾಮೃತ ಅಭಿಷೇಕ ನಡೆಯುತ್ತದೆ. ಎಲ್ಲ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆದರೆ ಚಳಕಾಪುರ ಆಂಜನೇಯ ದೇವಸ್ಥಾನದಲ್ಲಿ ಎರಡು ಬಾರಿ ನಡೆಯುತ್ತದೆ. ನವನ ಹುಣ್ಣಿನಮೆಯಂದು ಒಮ್ಮೆ ನಡೆದರೆ ದೀಪಾವಳಿ ಹುಣ್ಣಿಮೆಗೆ ಎರಡನೇ ಬಾರಿ ನಡೆಯುತ್ತದೆ.

ಈ ದೇವಸ್ಥಾನಕ್ಕೆ 2,000 ಸಾವಿರ ವರ್ಷಗಳ ಇತಿಹಾಸವಿದೆ. ತ್ರೇತಾಯುಗದಲ್ಲಿ ರಾಮಭಕ್ತೆಯಾಗಿದ್ದ ಚಳಕಾದೇವಿಗಾಗಿ ಚಳಕಾಸುರ ಒಂದೇ ರಾತ್ರಿಯಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದನಂತೆ. ಗುಡಿ ನಿರ್ಮಾಣವಾದ ಐದು ಗಂಟೆಗಳ ಬಳಿಕ ಆಂಜನೇಯ ಇಲ್ಲಿ ಉದ್ಭವಗೊಂಡನೆಂಬ ಐತಿಹ್ಯವಿದೆ.

ಸಾವಿರಾರು ಭಕ್ತರು ಸಂಕಲ್ಪ ಸಿದ್ಧಿಗಾಗಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.

ಇದನ್ನೂ ಓದಿ:  ಸಾವಿಗೂ ಮುನ್ನ ವಿಡಿಯೋ ಮಾಡಿದ್ದ ಮಹಾಂತ ನರೇಂದ್ರ ಗಿರಿ; ಶಿಷ್ಯನನ್ನು ಹರಿದ್ವಾರದಲ್ಲಿ ವಶಕ್ಕೆ ಪಡೆದ ಪೊಲೀಸರು  

Click on your DTH Provider to Add TV9 Kannada