ಇಲೆಕ್ಟ್ರಿಕ್ ಸ್ಕೂಟರ್ ಸೆಗ್ಮೆಂಟ್ಗೆ ಒಕಾಯ ಎರಡು ಪಕ್ಕಾ ಮೇಕ್ ಇನ್ ಇಂಡಿಯ ಸ್ಕೂಟರ್ಗಳನ್ನು ಲಾಂಚ್ ಮಾಡುತ್ತಿದೆ
ಫ್ರೀಡಂ ಎಲ್ಐ-2 ಒಮ್ಮೆ ಚಾರ್ಜ್ ಮಾಡಿದರೆ 70-80 ಕಿಲೋಮೀಟರ್ ಕ್ರಮಿಸಬಹುದು ಮತ್ತು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4-5 ಗಂಟೆ ಹಿಡಿಯುತ್ತದೆ.
ಇಲೆಕ್ಟ್ರಿಕ್ ಸ್ಕೂಟರ್ ಸೆಗ್ಮೆಂಟ್ಗೆ ಒಕಾಯ ಪ್ರವೇಶಿಸಿದ್ದು ಜುಲೈನಲ್ಲಿ. ಎರಡು ತಿಂಗಳ ನಂತರ ಅದು ತನ್ನ ಎರಡು ಪಕ್ಕಾ ಮೇಕ್ ಇನ್ ಇಂಡಿಯಾ ಇಲೆಕ್ಟ್ರಿಕ್ ಸ್ಕೂಟರ್ ಗಳನ್ನು ಲಾಂಚ್ ಮಾಡುತ್ತಿದೆ- ಫ್ರೀಡಂ ಎಲ್ಐ-2 ಮತ್ತು ಫ್ರೀಡಮ್ ಎಲ್ಎ-2. ಇಲೆಕ್ಟ್ರಿಕ್ ಸ್ಕೂಟರ್ ಗಳ ಪೈಪೋಟಿ ಜೋರಾಗಿ ಇಂದಿನ ದಿನಗಳಲ್ಲಿ ಒಕಾಯಾ ಓಲಾ ಎಸ್ 1 ಮತ್ತು ಬಜಾಜ್ ಚೇತಕ್ ಮತ್ತು ಇನ್ನೂ ಹಲಾವಾರು ಬ್ರ್ಯಾಂಡ್ಗಳೊಂದಿಗೆ ಸ್ಪರ್ಧೆ ಬೀಳಲಿದೆ.
ಹಾಗೆ ನೋಡಿದರೆ, ಒಕಾಯ ಸಂಸ್ಥೆಯ ಫ್ರೀಡಂ ಎಲ್ಐ-2 ಬೆಲೆ ರೀಸನೇಬಲ್ ಆಗಿದೆ ಅಂತ ಹೇಳಹುದು. ಅವುಗಳ ಎಕ್ಸ್ ಶೋರೂಮ್ ಬೆಲೆ 69,999 ರೂ, ಅಗಿದ್ದು 12 ಬಣ್ಣಗಳಲ್ಲಿ ವಾಹನ ಲಭ್ಯವಿದೆ. ಸ್ಕೂಟರ್‌ಗಳ ವಿಶೇಷತೆಗಳ ಬಗ್ಗೆ ಮಾತಾಡುವುದಾದರೆ; ಅವು 250 ಡಬ್ಲ್ಯು ಬಿ ಎಲ್ ಡಿಸಿ ಹಬ್ ಮೋಟಾರನ್ನು ಒಳಗೊಂಡಿವೆ ಮತ್ತು ಇದು 48ವಿ 30 ಎಎಚ್ ಬ್ಯಾಟರಿಯಿಂದ ಚಾಲಿತವಾಗಿದೆ.
ಫ್ರೀಡಂ ಎಲ್ಐ-2 ಒಮ್ಮೆ ಚಾರ್ಜ್ ಮಾಡಿದರೆ 70-80 ಕಿಲೋಮೀಟರ್ ಕ್ರಮಿಸಬಹುದು ಮತ್ತು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4-5 ಗಂಟೆ ಹಿಡಿಯುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ 25 ಕಿಮೀ/ಗಂಟೆ ಮತ್ತು ಇದರ ಇತರ ವೈಶಿಷ್ಟ್ಯತೆಗಳು ಡಿಜಿಟಲ್ ಡಿಸ್ಪ್ಲೇ, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಮೊನೊಸ್ಕೋಪಿಕ್ ರಿಯರ್ ಸಸ್ಪೆನ್ಷನ್, ಎಲ್ ಈ ಡಿ ಹೆಡ್‌ಲ್ಯಾಂಪ್, ಎಲ್ ಈ ಡಿ ಡಿಆರ್ಎಲ್, ರಿಮೋಟ್ ಲಾಕ್/ಅನ್‌ಲಾಕ್ ಮತ್ತು ವೀಲ್ ಲಾಕ್ ಆಗಿವೆ.
ಒಕಾಯ ಫ್ರೀಡಮ್ LA-2 250 ಡಬ್ಲ್ಯು ಬಿಎಲ್ಡಿಸಿ ಹಬ್ ಮೋಟಾರ್ ಮತ್ತು 48ವಿ 28ಎಎಚ್ ವಿಎಲ್ ಆರ್ ಎ (C20) ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಇದು ಒಂದು ಚಾರ್ಜ್‌ನಲ್ಲಿ 50-60 ಕಿಲೋಮೀಟರ್ ವರೆಗೆ ಚಲಿಸುತ್ತದೆ. ಇದರ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಇದು 8-10 ಗಂಟೆ ಬೇಕಾಗುತ್ತವೆ.
ಎಲೆಕ್ಟ್ರಿಕ್ ಸ್ಕೂಟರ್ ಡಿಜಿಟಲ್ ಡಿಸ್ಪ್ಲೇ, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಮೊನೊಸ್ಕೋಪಿಕ್ ರಿಯರ್ ಸಸ್ಪೆನ್ಷನ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಡಿಆರ್ ಎಲ್, ರಿಮೋಟ್ ಲಾಕ್/ಅನ್ ಲಾಕ್ ಮತ್ತು ವೀಲ್ ಲಾಕ್ ಜೊತೆಗೆ ಡಿಸ್ಕ್ ಫ್ರಂಟ್ ಬ್ರೇಕ್ ಮತ್ತು ಡ್ರಮ್ ರಿಯರ್ ಬ್ರೇಕ್ ಮೊದಲಾದ ವೈಶಿಷ್ಟ್ಯತೆಗಳನ್ನು ಇದು ಹೊಂದಿದೆ.
ಇದನ್ನೂ ಓದಿ: ಸಾವಿಗೂ ಮುನ್ನ ವಿಡಿಯೋ ಮಾಡಿದ್ದ ಮಹಾಂತ ನರೇಂದ್ರ ಗಿರಿ; ಶಿಷ್ಯನನ್ನು ಹರಿದ್ವಾರದಲ್ಲಿ ವಶಕ್ಕೆ ಪಡೆದ ಪೊಲೀಸರು