ರಕ್ತದೊತ್ತಡ ಮತ್ತು ದೇಹದಲ್ಲಿ ಆಮ್ಲಜನಕ ಪ್ರಮಾಣ ಮತ್ತು ಹೃದಯ ಬಡಿತವನ್ನು ಮಾನಿಟರ್ ಮಾಡುತ್ತದೆ ಜೆಬ್ರಾನಿಕ್ಸ್ ಸ್ಮಾರ್ಟ್ ವಾಚ್!

ರಕ್ತದೊತ್ತಡ ಮತ್ತು ದೇಹದಲ್ಲಿ ಆಮ್ಲಜನಕ ಪ್ರಮಾಣ ಮತ್ತು ಹೃದಯ ಬಡಿತವನ್ನು ಮಾನಿಟರ್ ಮಾಡುತ್ತದೆ ಜೆಬ್ರಾನಿಕ್ಸ್ ಸ್ಮಾರ್ಟ್ ವಾಚ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 22, 2021 | 7:17 PM

ಸ್ಮಾರ್ಟ್ ವಾಚ್ ಬಳಸಿ ಜೋಡಿ ಫೋನ್‌ನಲ್ಲಿ ಸಂಗೀತ ಹಾಗೂ ಕ್ಯಾಮರಾವನ್ನು ಬಳಕೆದಾರರು ನಿಯಂತ್ರಿಸಬಹುದು. ಇದು ಇತ್ತೀಚಿನ ಕರೆಗಳು, SMS ಮತ್ತು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅಧಿಸೂಚನೆಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ.

ನೀವು ಫಿಟ್ನೆಸ್ ಫ್ರೀಕ್ ಆಗಿದ್ದು, ರಕ್ತದೊತ್ತಡ, ದೇಹದಲ್ಲಿ ಆಮ್ಲಜನಕ ಪ್ರಮಾಣ ಮತ್ತು ಹೃದಯ ಬಡಿತ ಮೊದಲಾದವುಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದರೆ ಜೆಬ್ರಾನಿಕ್ಸ್ ಜೆಬ್-ಎಫ್ಐಟಿ 220ಸಿಎಚ್ ಸ್ಮಾರ್ಟ್ ವಾಚ್ ನಿಮಗೆಂದೇ ತಯಾರಿಸಿದಂತಿದೆ. ಈ ವಾಚ್ ಭಾರತದಲ್ಲಿ ಲಾಂಚ್ ಆಗಿದ್ದು 4.4 ಸೆಮೀ ಡಿಸ್ಪ್ಲೇನೊಂದಿಗೆ ಬರುತ್ತದೆ. ಗಡಿಯಾರ ಕಟ್ಟಿಕೊಂಡರೆ ನಿಮ್ಮ ಅಂಗೈಯಿಂದಲೇ ಡಯಲ್ ಮಾಡಬಹುದು ಮತ್ತು ಕರೆಗಳನ್ನು ಸ್ವೀಕರಿಸಬಹುದು. ಕಾಲ್​ಗಳ ಚಟುವಟಿಕೆ ನಿರ್ವಹಿಸಲು ವಾಚ್​ನಲ್ಲಿ ಇನ್​ಬಿಲ್ಟ್​​  ಸ್ಪೀಕರ್ ಇದೆ ಮತ್ತು ಜೊತೆಗೆ ಮೈಕ್ ಕೂಡ ಇದೆ. ಜೆಬ್ರಾನಿಕ್ಸ್ ಜೆಬ್ಎಫ್ಐಟಿ 220ಸಿಎಚ್ ಸ್ಮಾರ್ಟ್ ವಾಚ್​ನಲ್ಲಿ ಹಲವಾರು ಆರೋಗ್ಯ ಸಂಬಂಧಿ ಪೀಚರ್ಗಳಿವೆ. ರತ್ತದಲ್ಲಿ ಆಕ್ಸಿಜನ್ ಪ್ರಮಾಣ (SpO2), ಬ್ಲಡ್ ಪ್ರೆಶರ್ ಮಾನಿಟರ್ ಮತ್ತು ಹೃದಯ ಬಡಿತ ಮಾನಿಟರ್ ಮಾಡುವ ಫೀಚರ್​ಗಳು ಇದರಲ್ಲಿವೆ. ಫಿಟ್ನೆಸ್ ಗೆ ಸಂಬಂಧಿಸಿದ ಫೀಚರ್​ಗಳಾದ ಪಿಡೋಮೀಟರ್, ಕ್ಯಾಲೊರಿ ಕೌಂಟರ್, ಡಿಸ್ಟನ್ಸ್ ಟ್ರ್ಯಾಕರ್, ಸೆಡೆಂಟ್ರಿ ರಿಮೈಂಡರ್ ಮತ್ತು ಸ್ಲೀಪ್ ಮಾನಿಟರ್ ಇದರಲ್ಲಿವೆ.

ಜೆಬ್ರಾನಿಕ್ಸ್ ಜೆಬ್-ಎಫ್ಐಟಿ 220ಸಿಎಚ್ ಸ್ಮಾರ್ಟ್ ವಾಚ್ ಖರೀದಿಸುವ ಇಚ್ಚೆ ನಿಮಗಿದ್ದರೆ, ಕಂಪನಿಯ ಅಧಿಕೃತ ವೆಬ್ಸೈಟ್​ನಲ್ಲಿ ಅದರ ಬೆಲೆ ರೂ. 7,499 ಅಗಿದೆ. ಆದರೆ ಅಮೇಜಾನ್ನಲ್ಲಿ ಅದು ರೂ. 3,999ಕ್ಕೆ ಲಭ್ಯವಿದೆ. ಜೆಬ್ರಾನಿಕ್ಸ್ ಜೆಬ್-ಎಫ್ಐಟಿ 220ಸಿಎಚ್ ಸ್ಮಾರ್ಟ್ ವಾಚ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ- ಕಪ್ಪು, ನೀಲಿ, ಸ್ವರ್ಣ ಮತ್ತು ಮೆಟಾಲಿಕ್ ಸಿಲ್ವರ್.

ಜೆಬ್ರಾನಿಕ್ಸ್ ಜೆಬ್-ಎಫ್ಐಟಿ 220ಸಿಎಚ್ ಒಂದು ಆಯತಾಕಾರದ 1.75 ಇಂಚಿನ 2.5ಡಿ ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಹೊಂದಿದೆ ಮತ್ತು 100 ಕ್ಕೂ ಹೆಚ್ಚು ಕಸ್ಟೊಮೈಸ್ ಮಾಡಬಹುದಾದ ವಾಚ್ ಫೇಸ್ಗಳನ್ನು ಬೆಂಬಲಿಸುತ್ತದೆ. ಕರೆ ಮಾಡುವ ಕೆಲಸಕ್ಕಾಗಿ ಇದು ಅಂತರ್ನಿರ್ಮಿತ ಸ್ಪೀಕರ್ ಮತ್ತು ಮೈಕ್ ಅನ್ನು ಹೊಂದಿದೆ ಮತ್ತು ಕರೆ ತಿರಸ್ಕರಿಸುವ ವೈಶಿಷ್ಟ್ಯದ ಜೊತೆಗೆ ಕಾಲರ್ ಐಡಿಯನ್ನು ಸಹ ಹೊಂದಿದೆ.

ಸ್ಮಾರ್ಟ್ ವಾಚ್ ಬಳಸಿ ಜೋಡಿ ಫೋನ್‌ನಲ್ಲಿ ಸಂಗೀತ ಹಾಗೂ ಕ್ಯಾಮರಾವನ್ನು ಬಳಕೆದಾರರು ನಿಯಂತ್ರಿಸಬಹುದು. ಇದು ಇತ್ತೀಚಿನ ಕರೆಗಳು, SMS ಮತ್ತು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅಧಿಸೂಚನೆಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ. ಹೆಚ್ಚುವರಿಯಾಗಿ, ಇದು ಸೆಡೆಂಟ್ರಿ ರಿಮೈಂಡರ್ ಮತ್ತು ಅಲಾರಾಂ ಕ್ಲಾಕ್ ಒಳಗೊಂಡಿದೆ.

ಸ್ಮಾರ್ಟ್ ಬ್ಯಾಂಡ್ ಅನ್ನು ಗೂಗಲ್ ಪ್ಲೇನಲ್ಲಿ ಲಭ್ಯವಿರುವ ಜೆಡ್ಇಬಿ-ಎಫ್ಐಟಿ 20 ಸರಣಿ ಅಪ್ಲಿಕೇಶನ್‌ನೊಂದಿಗೆ ಜೋಡಿಸಬಹುದು.

ಇದನ್ನೂ ಓದಿ:  Viral Video: ಸೀರೆಯುಟ್ಟ ಮಹಿಳೆಗೆ ದೆಹಲಿಯ ರೆಸ್ಟೋರೆಂಟ್​ನಲ್ಲಿ ನೋ ಎಂಟ್ರಿ; ವೈರಲ್ ವಿಡಿಯೋಗೆ ಭಾರೀ ವಿರೋಧ