Viral Video: ಸೀರೆಯುಟ್ಟ ಮಹಿಳೆಗೆ ದೆಹಲಿಯ ರೆಸ್ಟೋರೆಂಟ್​ನಲ್ಲಿ ನೋ ಎಂಟ್ರಿ; ವೈರಲ್ ವಿಡಿಯೋಗೆ ಭಾರೀ ವಿರೋಧ

Trending Video | ಸೀರೆಯುಟ್ಟಿದ್ದಾರೆ ಎಂಬ ಒಂದೇ ಕಾರಣಕ್ಕೆ ಮಹಿಳೆಗೆ ರೆಸ್ಟೋರೆಂಟ್​ನೊಳಗೆ ಎಂಟ್ರಿಯಾಗಲು ಬಿಡದಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆಗೂ ಕಾರಣವಾಗಿದೆ.

Viral Video: ಸೀರೆಯುಟ್ಟ ಮಹಿಳೆಗೆ ದೆಹಲಿಯ ರೆಸ್ಟೋರೆಂಟ್​ನಲ್ಲಿ ನೋ ಎಂಟ್ರಿ; ವೈರಲ್ ವಿಡಿಯೋಗೆ ಭಾರೀ ವಿರೋಧ
ರೆಸ್ಟೋರೆಂಟ್​ನ ವಿಡಿಯೋ


ಭಾರತದ ಮಹಿಳೆಯ ಸಾಂಪ್ರದಾಯಿಕ ಉಡುಗೆಯಾದ ಸೀರೆಗೆ ಮರುಳಾಗದವರೇ ಇಲ್ಲ. ಬೇರೆ ದೇಶಗಳಲ್ಲೂ ಸೀರೆಯನ್ನು ಆಧುನಿಕ ಫ್ಯಾಷನ್​ ಆಗಿ ಬಳಸಲಾಗುತ್ತಿದೆ. ಸೀರೆಯನ್ನು ದೇಸಿ ಸ್ಟೈಲ್​ನಲ್ಲಿ ಬೇಕಾದರೂ ಉಡಬಹುದು, ಮಾಡರ್ನ್ ಆಗಿಯೂ ಧರಿಸಬಹುದು. ಅನಾದಿ ಕಾಲದಿಂದಲೂ ಸೀರೆಯನ್ನು ಭಾರತೀಯರು ಸಾಂಪ್ರದಾಯಿಕವಾಗಿ ಉಡುತ್ತಿದ್ದಾರೆ. ಆದರೆ, ಸೀರೆಯುಟ್ಟ ಮಹಿಳೆಯೊಬ್ಬರಿಗೆ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶ ನಿರಾಕರಿಸಿದ ಘಟನೆಯೊಂದು ನಡೆದಿದೆ. ಸೀರೆಯುಟ್ಟಿದ್ದಾರೆ ಎಂಬ ಒಂದೇ ಕಾರಣಕ್ಕೆ ಮಹಿಳೆಗೆ ರೆಸ್ಟೋರೆಂಟ್​ನೊಳಗೆ ಎಂಟ್ರಿಯಾಗಲು ಬಿಡದಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆಗೂ ಕಾರಣವಾಗಿದೆ.

ಹಾಗಂತ ಇದು ನಡೆದಿರುವುದು ಬೇರಾವುದೋ ದೇಶದಲ್ಲಲ್ಲ. ಬೇರೆ ದೇಶದ ಮಾಲ್, ವಿಮಾನ ನಿಲ್ದಾಣದಲ್ಲಿ ಕೆಲವೆಡೆ ಸೀರೆಯುಟ್ಟವರನ್ನು ತಪಾಸಣೆ ಮಾಡಿದ ಘಟನೆಗಳು ಈ ಹಿಂದೆ ನಡೆದಿವೆ. ಸೀರೆಯೊಳಗೆ ಏನಾದರೂ ವಸ್ತುವನ್ನು ಕದ್ದು ಸಾಗಿಸಬಹುದು ಎಂಬ ಅನುಮಾನ ಈ ನಡೆಗೆ ಕಾರಣ. ಆದರೆ, ಈ ಬಾರಿ ದಕ್ಷಿಣ ದೆಹಲಿಯ ರೆಸ್ಟೋರೆಂಟ್​ನಲ್ಲಿ ಸೀರೆಯುಟ್ಟ ಮಹಿಳೆಗೆ ನೋ ಎಂಟ್ರಿ ಎನ್ನುವ ಮೂಲಕ ಸಿಬ್ಬಂದಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದೆಹಲಿಯ ಅನ್ಸಾಲ್ ಪ್ಲಾಜಾದಲ್ಲಿರುವ ರೆಸ್ಟೋರೆಂಟ್- ಬಾರ್ ಒಂದಕ್ಕೆ ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿದೆ. ಸ್ಮಾರ್ಟ್ ಕ್ಯಾಷುವಲ್ ಡ್ರೆಸ್​ಕೋಡ್ ಅನ್ನು ಅನುಸರಿಸಿಲ್ಲ ಎಂಬ ಕಾರಣಕ್ಕೆ ಸೀರೆಯುಟ್ಟ ಮಹಿಳೆಗೆ ಆ ರೆಸ್ಟೋರೆಂಟ್ ಒಳಗೆ ಹೋಗಲು ಅವಕಾಶ ಕೊಟ್ಟಿಲ್ಲ. ಸೀರೆ ಸ್ಮಾರ್ಟ್​ ಔಟ್​ಫಿಟ್ ಅಲ್ಲ ಎಂದಿರುವ ರೆಸ್ಟೋರೆಂಟ್ ಸಿಬ್ಬಂದಿಯ ವಿಡಿಯೋ ವೈರಲ್ ಆಗಿದ್ದು, ಹಲವರು ಈ ವರ್ತನೆಗೆ ಕಿಡಿ ಕಾರಿದ್ದಾರೆ.

ಭಾರತದಲ್ಲಿಯೇ ಸೀರೆಗೆ ಮಾನ್ಯತೆ ಇಲ್ಲವೆಂದರೆ ಹೇಗೆ? ಎಂದು ಹಲವು ಮಹಿಳೆಯರು ಇನ್​ಸ್ಟಾಗ್ರಾಂನಲ್ಲಿ ಆಕ್ಷೇಪ ಹೊರಹಾಕಿದ್ದಾರೆ. ಟ್ವಿಟ್ಟರ್​ನಲ್ಲೂ ಈ ವಿಡಿಯೋ ವೈರಲ್ ಆಗಿದೆ. ಸೀರೆಯುಟ್ಟ ಮಹಿಳೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘ನನಗೆ ಸೀರೆಯೆಂದರೆ ಇಷ್ಟ. ಹೀಗಾಗಿ, ಸೀರೆಯುಟ್ಟು ರೆಸ್ಟೋರೆಂಟ್​ಗೆ ಹೋಗಿದ್ದೆ. ಇಲ್ಲಿಯವರೆಗೂ ನಾನು ಸೀರೆ ಬಹಳ ಗೌರವಪೂರ್ವಕವಾದ, ಡೀಸೆಂಟ್ ಆದ ಉಡುಗೆ ಎಂದುಕೊಂಡಿದ್ದೆ. ಆದರೆ, ರೆಸ್ಟೋರೆಂಟ್ ಸಿಬ್ಬಂದಿ ನನ್ನ ಕಣ್ಣು ತೆರೆಸಿದರು ಎಂದು ಆಕೆ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: Viral Video: ಬೇಕರಿ ತಿಂಡಿ ಪ್ರಿಯರೇ ಎಚ್ಚರ; ಈ ಶಾಕಿಂಗ್ ವಿಡಿಯೋ ನೋಡಿದರೆ ರಸ್ಕ್ ಮುಟ್ಟೋಕೂ ಅಸಹ್ಯ ಪಡ್ತೀರ!

Shocking Video: ಫಾಸ್ಟ್​ಫುಡ್​ ತಯಾರಿಸಲು ತಡವಾಗಿದೆ ಎಂದು ವಾದಕ್ಕಿಳಿದ ಗ್ರಾಹಕ; ಸಿಟ್ಟಿನಲ್ಲಿ ಕತ್ತರಿ ಹಿಡಿದು ಬಿಸಾಡಿದ ಹೋಟೆಲ್​ ಸಿಬ್ಬಂದಿ

(Viral Video Delhi restaurant denies entry to woman wearing saree women says assault on Indian Culture)

Click on your DTH Provider to Add TV9 Kannada