Viral Video: ಎರಡು ವಿಮಾನಗಳು ಪರಸ್ಪರ ಡಿಕ್ಕಿ, ಪ್ರಯಾಣಿಕರ ಜತೆ ಕೆಳಕ್ಕೆ ಹಾರಿದ ಪೈಲಟ್; ಹಳೇ ವಿಡಿಯೋ ಮತ್ತೆ ವೈರಲ್​​

Shocking Video: ಪೈಲಟ್ ಹಾರುವಾಗ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ದೊಡ್ಡದಾದ ಶಬ್ದ ಕೇಳಿಸಿತು. ಪರಸ್ಪರ ಡಿಕ್ಕಿಯಾದ ಪರಿಣಾಮ ಒಂದು ವಿಮಾನವು ನೆಲಕ್ಕುರುಳಿತು.

Viral Video: ಎರಡು ವಿಮಾನಗಳು ಪರಸ್ಪರ ಡಿಕ್ಕಿ, ಪ್ರಯಾಣಿಕರ ಜತೆ ಕೆಳಕ್ಕೆ ಹಾರಿದ ಪೈಲಟ್; ಹಳೇ ವಿಡಿಯೋ ಮತ್ತೆ ವೈರಲ್​​
Follow us
TV9 Web
| Updated By: Digi Tech Desk

Updated on:Sep 23, 2021 | 12:24 PM

2013ರಲ್ಲಿ ಟ್ವಿಟರ್​ನಲ್ಲಿ ಫುಲ್ ವೈರಲ್ ಆಗಿದ್ದ ಭಯಾನಕ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗಿದೆ. ಎರಡು ವಿಮಾನಗಳು ಹಾರಾಡುತ್ತಿರುವಾಗ ಪರಸ್ಪರ ಡಿಕ್ಕಿಯಾಗುವ ಸೂಚನೆ ಸಿಗುತ್ತಿದ್ದಂತೆಯೇ ಪೈಲಟ್ ಮತ್ತು ಪ್ರಯಾಣಿಕರು ಧುಮುಕುಕೊಡೆಯ ಸಹಾಯದಿಂದ ವಿಮಾನದಿಂದ ಕೆಳಗೆ ಹಾರಿದ್ದರು. ಭಯಾನಕ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿದಾಡುತ್ತಿದೆ. 2013 ನವೆಂಬರ್​ನಲ್ಲಿ ಈ ಘಟನೆ ಸಂಭವಿಸಿದೆ. ಸ್ಕೈಡೈವಿಂಗ್ ತರಬೇತುದಾರ ಮೈಕ್ ರಾಬಿನ್ಸನ್ ಪ್ರಕಾರ, ಎರಡು ಮಿಮಾನಗಳು ಹತ್ತಿರದಲ್ಲಿದ್ದವು, ಇನ್ನೇನು ವಿಮಾನಗಳು ಡಿಕ್ಕಿಯಾಗುವ ಸಾಧ್ಯತೆಗಳು ಅರಿವಿಗೆ ಬರುತ್ತಿದ್ದಂತೆಯೇ ಧುಮುಕುಕೊಡೆಯೊಂದಿಗೆ ಪ್ರಯಾಣಿಕರು ಸೇರಿ ಪೈಲಟ್, ವಿಮಾನದಿಂದ ಹೊರಗೆ ಜಿಗಿದರು. ಬಳಿಕ ವಿಮಾನಗಳು ಒಂದಕ್ಕೊಂದು ಡಿಕ್ಕಿಯಾಗಿ ಬೆಂಕಿ ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ವೆರ್ನ್ ಜಾನ್ಸನ್ ಹೇಳಿಕೆ ಪ್ರಕಾರ, ಪೈಲಟ್ ಹಾರುವಾಗ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ದೊಡ್ಡದಾದ ಶಬ್ದ ಕೇಳಿಸಿತು. ಪರಸ್ಪರ ಡಿಕ್ಕಿಯಾದ ಪರಿಣಾಮ ಒಂದು ವಿಮಾನವು ನೆಲಕ್ಕುರುಳಿತು. ಅದೃಷ್ಟವಶಾತ್ ವಿಮಾನದಿಂದ ಕೆಳಗೆ ಧುಮುಕಿದ್ದರಿಂದ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಹಳೇಯ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ಟ್ವಿಟರ್​ನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಈ ದೃಶ್ಯವನ್ನು ಮತ್ತೆ ಹಂಚಿಕೊಳ್ಳಲಾಗಿದೆ. ವಿಡಿಯೋ ಸುಮಾರು 3.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ಈ ದೃಶ್ಯ ತುಂಬಾ ಭಯಾನಕವಾಗಿದೆ. ಇಂತಹ ಭಯಾನಕ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ನಂಬಲೇ ಅಸಾಧ್ಯ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ ಎಂದು ಓರ್ವರು ಹೇಳಿದ್ದಾರೆ. ವಿಮಾನದ ರೆಕ್ಕೆ ತುಂಡಾಗಿ ಕೆಳಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ:

Viral Video: ಅಜ್ಜಿಯ ಅಭಿನಯಕ್ಕೆ ನೆಟ್ಟಿಗರೆಲ್ಲಾ ಫಿದಾ! ವಿಡಿಯೋ ವೈರಲ್

Shocking Video: ಕುದಿಯುತ್ತಿರುವ ನೀರಿನಲ್ಲಿ ಕುಳಿತು ಧ್ಯಾನಸ್ಥನಾದ ಬಾಲಕ; ಶುರುವಾಯ್ತು ಚರ್ಚೆ

(Pilots passengers jump to safety as planes old video goes viral)

Published On - 12:14 pm, Thu, 23 September 21