ಮಹಾಭಾರತ ಶೀರ್ಷಿಕೆ ಗೀತೆಯನ್ನು ರಾಗಬದ್ಧವಾಗಿ ಹಾಡಿದ ಮುಸ್ಲಿಂ ವ್ಯಕ್ತಿ; ಧ್ವನಿ ಮತ್ತು ಸ್ಪಷ್ಟ ಉಚ್ಛಾರಣೆಗೆ ನೆಟ್ಟಿಗರಿಂದ ಶ್ಲಾಘನೆ

Viral Video: ಇದೀಗ ವೈರಲ್ ಆದ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯೋರ್ವರು ಮಹಾಭಾರತದ ಶೀರ್ಷಿಕೆ ಗೀತೆಯನ್ನು ಸುಮಧುರವಾಗಿ ಹಾಡಿದ್ದಾರೆ. ಅವರ ಧ್ವನಿ ಕೇಳಿದ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಮಹಾಭಾರತ ಶೀರ್ಷಿಕೆ ಗೀತೆಯನ್ನು ರಾಗಬದ್ಧವಾಗಿ ಹಾಡಿದ ಮುಸ್ಲಿಂ ವ್ಯಕ್ತಿ; ಧ್ವನಿ ಮತ್ತು ಸ್ಪಷ್ಟ ಉಚ್ಛಾರಣೆಗೆ ನೆಟ್ಟಿಗರಿಂದ ಶ್ಲಾಘನೆ
ಮಹಾಭಾರತ ಶಿರ್ಷಿಕೆ ಗೀತೆಯನ್ನು ರಾಗ ಬದ್ಧವಾಗಿ ಹಾಡಿದ ಮುಸ್ಲಿಂ ವ್ಯಕ್ತಿ; ಧ್ವನಿ ಮತ್ತು ಸ್ಪಷ್ಟ ಉಚ್ಛಾರಣೆಗೆ ನೆಟ್ಟಿಗರಿಂದ ಶ್ಲಾಘನೆ
Follow us
TV9 Web
| Updated By: shruti hegde

Updated on:Sep 22, 2021 | 1:19 PM

ಮನೆಯವರೊಂದಿಗೆ ಕುಳಿತು ರಾಮಾಯಣ, ಮಹಾಭಾರತವನ್ನು ದೂರದರ್ಶನದಲ್ಲಿ ವೀಕ್ಷಿಸುತ್ತೇವೆ. ಪೌರಾಣಿಕ ಕಥೆ ತಿಳಿಯುವುದರ ಜತೆಗೆ ಕಥೆಯ ಕೂತೂಹಲಕರ ಸಂಗತಿಗಳನ್ನು ತಿಳಿಯಲು ಹೆಚ್ಚು ಆಸಕ್ತಿಯಿರುತ್ತದೆ. ಅದರಲ್ಲಿಯೂ ಮಹಾಭಾರತದ ಟೈಟಲ್​ ಟ್ರ್ಯಾಕ್ ಹೆಚ್ಚು​ ಜನಪ್ರಿಯತೆ ಗಳಿಸಿಕೊಂಡಿದೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯೋರ್ವರು ಮಹಾಭಾರತದ ಶೀರ್ಷಿಕೆ ಗೀತೆಯನ್ನು ಸುಮಧುರವಾಗಿ ಹಾಡಿದ್ದಾರೆ. ಅವರ ಧ್ವನಿ ಕೇಳಿದ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಮುಸ್ಲಿಂ ವ್ಯಕ್ತಿಯೋರ್ವರು ಮಹಾಭಾರತ ಟೈಟಲ್ ಟ್ರ್ಯಾಕ್ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಾಭಾರತ ಕಥೆಯ ಪೌರಾಣಿಕ ದೃಶ್ಯದ ಪ್ರಾರಂಭವನ್ನು ಹಾಡಿನ ಮೂಲಕ ತಿಳಿಸಿದ್ದಾರೆ. ಹಾಡನ್ನು ಹಾಡುತ್ತಲೇ, ಶಂಖನಾದವನ್ನೂ ಸಹ ಅವರು ಸ್ವತಃ ಧ್ವನಿಯಿಂದಲೇ ಪ್ರಸ್ತುತಪಡಿಸಿದ್ದಾರೆ.

ಈ ವಿಡಿಯೋವನ್ನು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಡಾ. ಎಸ್ ವೈ ಖುರೇಷಿ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್​ ಫಾರ್ಮ್​ನಲ್ಲಿ ವಿಡಿಯೋ 1 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. 6,900 ಕ್ಕೂ ಹೆಚ್ಚು ಲೈಕ್ಸ್​ಗಳು ಲಭಿಸಿವೆ. ವ್ಯಕ್ತಿಯ ರಾಗ ಬದ್ಧ ಹಾಡನ್ನು ನೆಟ್ಟಿಗರು ಹೆಚ್ಚು ಇಷ್ಟಪಟ್ಟಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಳ್ಳುವ ಮೂಲಕ ಅನಿಸಿಕೆಗಳನ್ನು ತಿಳಿಸಿದ್ದಾರೆ.

ತುಂಬಾ ಚೆನ್ನಾಗಿದೆ, ಅವರ ಧ್ವನಿ ಮಧುರವಾಗಿದೆ ಎಂದು ಓರ್ವರು ಹೇಳಿದ್ದಾರೆ. ಅವರ ಉಚ್ಛಾರಣೆ ಸ್ಪಷ್ಟವಾಗಿದೆ ಎಂದು ಮತ್ತೋರ್ವರು ತಿಳಿಸಿದ್ದಾರೆ. ನನಗೆ ಈ ವಿಡಿಯೋ ತುಂಬಾ ಇಷ್ಟವಾಯಿತು, ಇದು ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತದೆ, ಚಿಕ್ಕಂದಿನಲ್ಲಿ ಸಂಗೀತ ಹಾಡುತ್ತಿದ್ದ ನೆನಪು ಮರುಕಳಿಸುತ್ತಿದೆ ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ತನ್ನ ಇಷ್ಟದ ಹಾಡು ಕೇಳಿದಾಗ ಈ ಪುಟ್ಟ ಮಗುವಿನ ರಿಯಾಕ್ಷನ್‌ ನೋಡಿ

Viral Video: ಅಜ್ಜಿಯ ಅಭಿನಯಕ್ಕೆ ನೆಟ್ಟಿಗರೆಲ್ಲಾ ಫಿದಾ! ವಿಡಿಯೋ ವೈರಲ್

(Muslim man sings Mahabharat title song video viral in social media)

Published On - 1:18 pm, Wed, 22 September 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್