AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಹೊ ಸಂಸ್ಥೆಯ ಸಿಈಓ ಶ್ರೀಧರ್ ವೆಂಬು ಅರಣ್ಯ ಸಿಬ್ಬಂದಿ ಹಿಡಿದ ಕಾಳಿಂಗ ಸರ್ಪವನ್ನು ಮುಟ್ಟಿ ಹೊಹೋ ಅಂದಿದ್ದು!

ಜೊಹೊ ಸಂಸ್ಥೆಯ ಸಿಈಓ ಶ್ರೀಧರ್ ವೆಂಬು ಅವರು ಅರಣ್ಯಾ ಇಲಾಖೆಯ ಸಿಬ್ಬಂದಿಯೊಂದಿಗೆ ಒಂದು ಇಮೇಜ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವಿಶೇಷತೆ ಎಂದರೆ ಅವರೆಲ್ಲ ಸೇರಿ ಸುಮಾರು 12-ಅಡಿ ಉದ್ದದ ಕಾಳಿಂಗ ಸರ್ಪ (king cobra) ಕೈಯಲ್ಲಿ ಎತ್ತಿ ಹಿಡಿದಿರುವುದು!

ಜೊಹೊ ಸಂಸ್ಥೆಯ ಸಿಈಓ ಶ್ರೀಧರ್ ವೆಂಬು ಅರಣ್ಯ ಸಿಬ್ಬಂದಿ ಹಿಡಿದ ಕಾಳಿಂಗ ಸರ್ಪವನ್ನು ಮುಟ್ಟಿ ಹೊಹೋ ಅಂದಿದ್ದು!
ಶ್ರೀಧರ್ ವೆಂಬು ಪೋಸ್ಟ್​ ಮಾಡಿರುವ ಇಮೇಜ್
TV9 Web
| Edited By: |

Updated on: Sep 21, 2021 | 10:50 PM

Share

ವ್ಯಕ್ತಿಯೊಬ್ಬ ಎಷ್ಟೇ ಧೈರ್ಯವಂತನೆಂದು ಹೇಳಿಕೊಂಡರೂ ಹಾವು ಕಂಡಾಕ್ಷಣ ಅಧೀರನಾಗುತ್ತಾನೆ. ಮನುಕುಲಕ್ಕೆ ಈ ಸರೀಸೃಪಗಳು ಹುಟ್ಟಿಸಿರುವ ಭೀತಿಯೇ ಅಂಥದ್ದು. ಹಾಗೆ ನೋಡಿದರೆ ಹಾವನ್ನು ನಿರುಪದ್ರವ ಜೀವಿ ಅನ್ನುತ್ತಾರೆ. ತನ್ನ ಪಾಡಿಗೆ ತಾನು ಬದುಕುವ ಜೀವಿ ಅದು. ತಡವಿದಾಗ ಮಾತ್ರ ಅದಕ್ಕೆ ಕೋಪ ಬಂದು ಅಕ್ರಮಣ ನಡೆಸಲು ಮುಂದಾಗುತ್ತದೆ ಎಂದು ಉರಗ ತಜ್ಞರು ಹೇಳುತ್ತಾರೆ. ಭಾರತದಲ್ಲಿ ನಾವು ಅವುಗಳನ್ನು ಪೂಜಿಸುತ್ತೇವೆ, ಹಬ್ಬ ಆಚರಿಸುತ್ತೇವೆ ಆದರೆ ನಿಜ ಹಾವು ಕಂಡಾಗ ಅದರ ಬಗ್ಗೆ ನಮ್ಮಲ್ಲಿನ ಪೂಜ್ಯ ಭಾವನೆಗಳು ಯು-ಟರ್ನ್ ತೆಗೆದುಕೊಳ್ಳುತ್ತವೆ.

ನಿಮಗೂ ಬಸವಣ್ಣನವರ ವಚನಗಳು ನೆನಪಾಗುತ್ತಿವೆಯೇ?

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ! ಉಂಬ ಜಂಗಮ ಬಂದರೆ ನಡೆ ಎಂಬರು ಉಣ್ಣದ ಲಿಂಗಕ್ಕೆ ಬೋನವ ಹಿಡಿವರಯ್ಯಾ! ನಮ್ಮ ಕೂಡಲಸಂಗಮದೇವನ ಶರಣರ ಕಂಡು ಉದಾಶೀನವ ಮಾಡಿದಡೆ ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ!

ಓಕೆ ವಿಷಯಕ್ಕೆ ಬರೋಣ. ಜೊಹೊ ಕಾರ್ಪೋರೇಷನ್ ಹೆಸರು ನಿಮಗೆ ಗೊತ್ತಿದೆ. ಭಾರತದ ಬಹುರಾಷ್ಟ್ರೀಯ ಟೆಕ್ನಾಲಜಿ ಕಂಪನಿ ಇದಾಗಿದ್ದು ವೆಬ್-ಆಧಾರಿತ ಬಿಸಿನೆಸ್ ಉಪಕರಣಗಳನ್ನು ತಯಾರಿಸುತ್ತದೆ. ಈ ಸಂಸ್ಥೆಯ ಸಿಈಓ ಶ್ರೀಧರ್ ವೆಂಬು ಅವರು ಅರಣ್ಯಾ ಇಲಾಖೆಯ ಸಿಬ್ಬಂದಿಯೊಂದಿಗೆ ಒಂದು ಇಮೇಜ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವಿಶೇಷತೆ ಎಂದರೆ ಅವರೆಲ್ಲ ಸೇರಿ ಸುಮಾರು 12-ಅಡಿ ಉದ್ದದ ಕಾಳಿಂಗ ಸರ್ಪ (king cobra) ಕೈಯಲ್ಲಿ ಎತ್ತಿ ಹಿಡಿದಿರುವುದು!

‘12-ಅಡಿ ಉದ್ದನೆಯ ಕಿಂಗ್ ಕೋಬ್ರಾ ನಮ್ಮ ಆವರಣಕ್ಕೆ ಭೇಟಿ ನೀಡಿದ ಸಂದರ್ಭ,’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.

ಮುಂದುವರಿದು ಹೇಳಿರುವ ಅವರು, ‘ನಮ್ಮ ಪ್ರಶಂಸಾರ್ಹ ಅರಣ್ಯ ಇಲಾಖೆ ಸಿಬ್ಬಂದಿಯು ಅದನ್ನು ಹಿಡಿದು ಹತ್ತಿರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟರು. ಅದನ್ನು ಮುಟ್ಟುವ ಧೈರ್ಯ ನಾನು ಮಾಡಿದೆ. ಇಂದು ನನಗೆ ತುಂಬಾ ಒಳ್ಳೇ ಶಕುನದ ದಿನ!’ ಎಂದಿದ್ದಾರೆ. ಕೊವಿಡ್-19 ಪಿಡುಗು

ಕೊವಿಡ್-19 ಪಿಡುಗು ಭಾರತವನ್ನು ಅಪ್ಪಳಿಸುವ ಮೊದಲು ವೆಂಬು ಅವರು ದಕ್ಷಿಣ ತಮಿಳುನಾಡಿನ ಭಾಗದಲ್ಲಿರುವ ರುದ್ರ ರಮಣೀಯ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ತೆಂಕಸಾಯಿ ಹತ್ತಿರದ ಮಥಲಂಪರೈ ಗ್ರಾಮಕ್ಕೆ ತೆರಳಿದ್ದು ಅಲ್ಲೇ ನೆಲಸಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು ಇದುವರೆಗೆ ಸುಮಾರು 4,000 ಜನ ಅದನ್ನು ಲೈಕ್ ಮಾಡಿದ್ದಾರೆ. ಕೆಲವರು ತಮಗೆ ತಿಳಿದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Viral Video: ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು; ಸಾರ್ವಜನಿಕರಿಗೆ ಪರಿಹಾರ ಸಿಗೋದು ಯಾವಾಗ?