Viral Video: ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು; ಸಾರ್ವಜನಿಕರಿಗೆ ಪರಿಹಾರ ಸಿಗೋದು ಯಾವಾಗ?

Viral Video: ಶಿರಸಿ - ಕುಮಟಾ ರಸ್ತೆಯಲ್ಲಿ ಓಡಾಡೋದೇ ಬೇಡ ಅಂತಿದ್ದಾರೆ ಜನಸಾಮಾನ್ಯರು. ಈ ರಸ್ತೆ ಎಷ್ಟು ಹಾಳಾಗಿ ಹೋಗಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ನಮ್ಮ ಉತ್ತರಕನ್ನಡ ಟ್ರೋಲ್ ಪೇಜ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಸಕತ್ತಾಗಿದೆ ನೋಡಿ.

Viral Video: ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು; ಸಾರ್ವಜನಿಕರಿಗೆ ಪರಿಹಾರ ಸಿಗೋದು ಯಾವಾಗ?
ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು
Follow us
TV9 Web
| Updated By: shruti hegde

Updated on:Sep 21, 2021 | 4:20 PM

ಉತ್ತರ ಕನ್ನಡ ಶಿರಸಿ- ಕುಮಟಾ ರಸ್ತೆ ನೋಡಿದ್ರೆ ನೀವು ಏನಂತಿರೋ ಏನೋ? ಅಲ್ಲಿಯ ಜನರ ಪರದಾಟ ಅಲ್ಲಿಯವರಿಗೇ ಗೊತ್ತು ಎಂಬಂತಾಗಿದೆ. ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿ ವಾಹನ ಚಲಿಸುವುದೆಂದರೆ ಸಾಹಸವೇ ಸರಿ ಎಂಬಂತಾಗಿದೆ. ಮಳೆಗಾಲದ ಸಮಯದಲ್ಲಂತೂ ಕೇಳೋದೇ ಬೇಡ, ಅದರಲ್ಲಿಯೂ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಒಂದು ವರ್ಷ ಪೂರ್ಣಗೊಂಡರೂ ಕೆಲಸ ಮಾತ್ರ ಮುಗಿಯುತ್ತಿಲ್ಲ. ವಾಹನ ಸವಾರರ ಪರಿಸ್ಥಿತಿ ನೋಡಿ, ಈ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗುತ್ತೆ ಅಂತಿವೆ ಟ್ರೋಲ್​ ಪೇಜ್​ಗಳು. ಇದಕ್ಕೆ ಕುಮ್ಮಕ್ಕು ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮಾಷೆಯ ವಿಡಿಯೋವೊಂದು ಹರಿದಾಡುತ್ತಿದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಸಿಗೋ ಹಾಗೆ ಕಾಣಿಸ್ತಿಲ್ಲ. ಟ್ರೋಲ್ ನೋಡಿ ಪರಿಹಾರ ಕಂಡುಕೊಳ್ಳಬೇಕಷ್ಟೇ!

ಶಿರಸಿ – ಕುಮಟಾ ರಸ್ತೆಯಲ್ಲಿ ಓಡಾಡೋದೇ ಬೇಡ ಅಂತಿದ್ದಾರೆ ಜನಸಾಮಾನ್ಯರು. ಈ ರಸ್ತೆ ಎಷ್ಟು ಹಾಳಾಗಿ ಹೋಗಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ನಮ್ಮ ಉತ್ತರಕನ್ನಡ (Namma UK) ಟ್ರೋಲ್ ಪೇಜ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಮಜವಾಗಿದೆ ನೋಡಿ.

ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ರಸ್ತೆ ಮಧ್ಯವೇ ಹೆರಿಗೆ ಆಗುತ್ತೆ ಅಂತಿದ್ದಾರೆ. ಮನೆಯ ಕೆಲಸದವ, ಯಜಮಾನನ ಬಳಿ ಬಂದು ಹೆಂಡತಿ ಗರ್ಭಿಣಿ ಹಾಗಾಗಿ ಹೆರಿಗೆಗೆ ಒಟ್ಟು 40 ಸಾವಿರ ಖರ್ಚಾಗತ್ತಂತೆ, ನೀವೇ ಸಹಾಯ ಮಾಡ್ಬೇಕು ದಣಿ ಅಂತ ಬಂದಿದ್ದಾನೆ. ಮನೆಯ ಯಜಮಾನ, ಒಂದು ರೂಪಾಯಿಯೂ ಖರ್ಚಿಲ್ಲದಂತೆ ಹೆರಿಯಾಗೋ ಹಾಗೆ ಸಲಹೆ ನೀಡಿದ್ದಾನೆ. ಅದೇನೂ ಅಂತಿರಾ? ವಿಡಿಯೋದಲ್ಲೇ ನೋಡಿ..

ಮತ್ತೇನೂ ಇಲ್ಲ, ಆಸ್ಪತ್ರೆಗೆ ದುಡ್ಡು ಸುರಿಯುವ ಅವಶ್ಯಕತೆಯೇ ಇಲ್ಲ, ನಿನ್ನ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಶಿರಸಿ- ಕುಮಟಾ ರಸ್ತೆಯಲ್ಲಿ ಹೋಗು. ರಸ್ತೆ ಮಧ್ಯವೇ  ಹೆಂಡತಿಗೆ ಹೆರಿಗೆ ಆಗ್ಬಿಡತ್ತೆ ಅಂದಿದ್ದಾರೆ ಮನೆ ಯಜಮಾನರು. ಒಟ್ಟಿನಲ್ಲಿ ರಸ್ತೆ ಕಾಮಗಾರಿ ಕೆಲಸ ಮುಗಿಯೋದಿಲ್ಲ, ಸಾರ್ವಜನಿಕರಿಗೆ ಬಹು ಬೇಗ ಪರಿಹಾರ ಸಿಗೋ ಹಾಗೆ ಕಾಣಿಸ್ತಿಲ್ಲ.

ಇದನ್ನೂ ಓದಿ:

Viral Video: ಜೇಡರಹುಳದಂತ ಹುಡುಗಿ ಇವಳು; ಗೋಡೆ ಹತ್ತುವ ವಿಚಿತ್ರ ಭಂಗಿಗೆ ನೆಟ್ಟಿಗರು ಫಿದಾ

Viral Video: ವೈರಲ್ ಆಗಲು ನಡು ರಸ್ತೆಯಲ್ಲಿ ಮೈ ಬಳುಕಿಸಿದ ಯುವತಿ

(Uttara Kannada sirsi kumta road video viral)

Published On - 4:04 pm, Tue, 21 September 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ