ಅಂತರಿಕ್ಷದಲ್ಲಿ ಪೆಟ್ರೋಲ್ ಬಂಕೊಂದು ಅಸ್ತಿತ್ವಕ್ಕೆ ಬಂದು ಮೂರು ತಿಂಗಳು ಕಳೆಯಿತು, ಪ್ರಯೋಗ ಭಾರಿ ಯಶ ಕಂಡಿದೆ!
ಬಾಹ್ಯಾಕಾಶ ವಿಜ್ಞಾನಿಗಳ ಪ್ರಕಾರ ಈ ದಶಕದ ಅಂತ್ಯದ ವೇಳೆಗೆ ಭೂಮಿಯ ಕೆಳಮಟ್ಟದ ಕಕ್ಷೆಯಲ್ಲಿ ಉಪಗ್ರಹಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಲಿದೆ. ಪೆಟ್ರೋಲ್ ಸ್ಟೇಷನ್ ವ್ಯವಸ್ಥೆಯಿಂದಾಗಿ ಬಾಹ್ಯಾಕಾಶ ಯಾತ್ರಿಗಳು ಅಂತರಿಕ್ಷದಲ್ಲಿ ಮತ್ತಷ್ಟು ದೂರ ಮತ್ತು ಇನ್ನೂ ವಿಸ್ತೃತವಾಗಿ ಪಯಣಿಸಲು ಸಾಧ್ಯವಾಗಲಿದೆ.
ಅಂತರಿಕ್ಷದಲ್ಲೊಂದು ಪೆಟ್ರೋಲ್ ಬಂಕ್ ಅಸ್ತಿತ್ವಕ್ಕೆ ಬಂದಿದೆ ಅಂತ ನಾವು ಹೇಳಿದರೆ, ಹೋಗಿ ಸ್ವಾಮಿ, ನಿಮಗೆಲ್ಲೋ ಭ್ರಾಂತು ಅಂತ ನೀವು ಹೀಯಾಳಿಸಿ ಬಿಡುತ್ತೀರಿ, ಹೌದು ತಾನೇ. ಆದರೆ ವಾಸ್ತವದಲ್ಲಿ ಅಂಥದೊಂದು ವ್ಯವಸ್ಥೆ ಆಗಿದೆ ಮಾರಾಯ್ರೇ. ವಿಷಯ ಏನೂಂತ ಗೊತ್ತುಂಟಾ? ಭಾರತ ಸೇರಿದಂತೆ ಬೇರೆ ಬೇರೆ ದೇಶಗಳು ಅನೇಕ ಉಪಗ್ರಹಗಳನ್ನು ಅಂತರಿಕ್ಷೆಗೆ ಹಾರಿಬಿಟ್ಟಿದ್ದಾರಲ್ಲ? ಅವುಗಳಿಗೆ ಇಂಧನ ಬೇಡ್ವಾ?
ವಿವಿಧ ದೇಶಗಳು ಹಾರಿಬಿಟ್ಟಿರುವ 4 ಸಾವಿರಕ್ಕೂ ಹೆಚ್ಚು ಉಪಗ್ರಹಗಳಿಗೆ ನೆಲೆಯಾಗಿರುವ ಬಾಹ್ಯಾಕಾಶದಲ್ಲಿ ಭೂಮಿಯ ಕಕ್ಷೆಯು ಈಗ ‘ಪೆಟ್ರೋಲ್ ಪಂಪ್’ ಅನ್ನು ಸಹ ಹೊಂದಿದೆ.
ಆರ್ಬಿಟ್ ಫ್ಯಾಬ್, ಅಮೆರಿಕ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟ್ಅಪ್, ಜೂನ್ ನಲ್ಲೇ ಭೂಮಿಯ ಕಕ್ಷೆಯಲ್ಲಿ ಇಂಧನ ತುಂಬುವ ಕೇಂದ್ರದ ಮೂಲಮಾದರಿಯನ್ನು ಪ್ರಾರಂಭಿಸಿದೆ. ಸದರಿ ‘ಪೆಟ್ರೋಲ್ ಸ್ಟೇಷನ್’ ಈಗ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಗೊತ್ತಾಗಿದೆ.
ಈ ಯಶಸ್ಸಿನೊಂದಿಗೆ, ಈಗಾಗಲೇ ಹಳತಾಗಿರುವ ಉಪಗ್ರಹಗಳು ಹೊಸ ಜೀವ ಪಡೆಯುವ ನಿರೀಕ್ಷೆಯಿದೆಯೆಂದು ಹೇಳಲಾಗುತ್ತಿದೆ.
ಬಾಹ್ಯಾಕಾಶ ವಿಜ್ಞಾನಿಗಳ ಪ್ರಕಾರ ಈ ದಶಕದ ಅಂತ್ಯದ ವೇಳೆಗೆ ಭೂಮಿಯ ಕೆಳಮಟ್ಟದ ಕಕ್ಷೆಯಲ್ಲಿ ಉಪಗ್ರಹಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಲಿದೆ. ಪೆಟ್ರೋಲ್ ಸ್ಟೇಷನ್ ವ್ಯವಸ್ಥೆಯಿಂದಾಗಿ ಬಾಹ್ಯಾಕಾಶ ಯಾತ್ರಿಗಳು ಅಂತರಿಕ್ಷದಲ್ಲಿ ಮತ್ತಷ್ಟು ದೂರ ಮತ್ತು ಇನ್ನೂ ವಿಸ್ತೃತವಾಗಿ ಪಯಣಿಸಲು ಸಾಧ್ಯವಾಗಲಿದೆ.
ಅಂತರಿಕ್ಷದಲ್ಲಿ ಪೆಟ್ರೋಲ್ ಪಂಪ್ ಸ್ಥಾಪಿಸಿರುವ ಆರ್ಬಿಟ್ ಫ್ಯಾಬ್ ಕಂಪನಿಯು ತನ್ನ ಪ್ರಯತ್ನದಲ್ಲಿ ಭರ್ಜರಿ ಯಶ ಕಂಡ ಬಳಿಕ 10 ಮಿಲಿಯನ್ ಡಾಲರ್ಗಳ ಹಣಕಾಸಿನ ನೆರವು ಹರಿದು ಬಂದಿದೆ.