ಎಐಸಿಸಿ ಶಿವಕುಮಾರ್ ಜೊತೆ ಕಮಿಟ್ಮೆಂಟ್ ಮಾಡಿಕೊಂಡಿದೆ, ಸಿದ್ದರಾಮಯ್ಯ ಸ್ಥಾನ ತೆರವು ಮಾಡಲೇಬೇಕು: ಹೆಚ್ ವಿಶ್ವನಾಥ್
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಪೂರ್ಣಾವಧಿಗೆ ಮುಂದುವರಿಯುತ್ತಾರಾ ಅಥವಾ 30 ತಿಂಗಳು ನಂತರ ಅಧಿಕಾರವನ್ನು ಡಿಸಿಎಂ ಶಿವಕುಮಾರ್ ಅವರಿಗೆ ಬಿಟ್ಟು ಕೊಡುತ್ತಾರಾ ಅಂತ ಕಾಂಗ್ರೆಸ್ ಗಿಂತ ಬಿಜೆಪಿ ನಾಯಕರೇ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ವಿಜಯೇಂದ್ರ, ಅಶೋಕ, ವಿಶ್ವನಾಥ್ ಮತ್ತು ಇನ್ನೂ ಅನೇಕ ನಾಯಕರು ಈ ವಿಷಯದ ಬಗ್ಗೆ ಹೆಚ್ಚು ಕಡಿಮೆ ಪ್ರತಿದಿನ ಮಾತಾಡುತ್ತಿದ್ದಾರೆ.
ಬೆಂಗಳೂರು: ನಗರದ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಮುಂದೆ ನಿಂತು ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಡಿನ್ನರ್ ಮೀಟಿಂಗ್ಗಳಿಗೆ ಸಿದ್ದರಾಮಯ್ಯನೇ ರೂವಾರಿ, ಅವರ ಅಣತಿ ಮೇರೆಗೆ ಮೀಟಿಂಗ್ಗಳು ನಡೆಯುತ್ತಿವೆ ಎಂದರು. ಎಐಸಿಸಿ ಡಿಕೆ ಶಿವಕುಮಾರ್ ಜೊತೆ ಕಮಿಟ್ಮೆಂಟ್ ಮಾಡಿಕೊಂಡಿದೆ, 30 ತಿಂಗಳು ನಂತರ ಅವರು ಸಿಎಂ ಆಗಲೇಬೇಕು, ಕಾಂಗ್ರೆಸ್ಗೆ 135 ಸೀಟು ಸಿಗಬೇಕಾದರೆ ಶಿವಕುಮಾರ್ ಕೊಡುಗೆ ದೊಡ್ಡದು, ಅವರಿಂದಾಗೇ ಒಕ್ಕಲಿಗರ ವೋಟು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕವು ಎಂದು ವಿಶ್ವನಾಥ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಅಹಿಂದ ನಾಯಕರ ಜೊತೆ ಡಿನ್ನರ್ ಮೀಟಿಂಗ್ ಡೌನ್ ಪ್ಲೇ ಮಾಡಿದ ಸತೀಶ್ ಜಾರಕಿಹೊಳಿ
Published on: Jan 07, 2025 06:40 PM
Latest Videos