ಸಚಿವ ಸಂಪುಟದ ಸದಸ್ಯರು ಒಬ್ಬೊಬ್ಬರಾಗಿ ಸಿದ್ದರಾಮಯ್ಯರನ್ನು ಊಟಕ್ಕೆ ಕರೆದು ವಿದಾಯ ಹೇಳುತ್ತಿದ್ದಾರೆ: ಆರ್ ಅಶೋಕ
ಬಿಬಿಎಂಪಿಯ ಬಿಜೆಪಿ ಮೇಯರ್ಗಳ ಅಧಿಕಾರಾವಧಿ ಮುಗಿಯುತ್ತಾ ಬಂದಾಗ ಅವರನ್ನು ಮನೆಗೆ ಊಟಕ್ಕೆ ಕರೆದು ಸತ್ಕರಿಸುತ್ತಿದ್ದ ದಿನಗಳನ್ನು ವಿಪಕ್ಷ ನಾಯಕ ಅರ್ ಅಶೋಕ ನೆನಪಿಸಿಕೊಂಡಿದ್ದಾರೆ. ಕಳೆದ 20 ತಿಂಗಳ ಅವಧಿಯಲ್ಲ್ಲಿ ಸಿದ್ದರಾಮಯ್ಯ ಸುಮಾರು ಒಂದು ಸಾವಿರ ಸಲ ನಾನೇ ಮುಖ್ಯಮಂತ್ರಿ ಅಂತ ಹೇಳಿಕೊಂಡಿದ್ದಾರೆ, ಬೇರೆ ಯಾವುದೇ ಮುಖ್ಯಮಂತ್ರಿ ಹಾಗೆ ಹೇಳಿದ್ದನ್ನು ತನ್ನ ರಾಜಕೀಯ ಬದುಕಿನಲ್ಲಿ ನೋಡಿಲ್ಲ ಎಂದು ಅಶೋಕ ಹೇಳಿದರು.
ಬೆಂಗಳೂರು: ಸಿದ್ದರಾಮಯ್ಯ ಅಧಿಕಾರದಿಂದ ನಿರ್ಗಮಿಸುವುದು ಖಚಿತವಾಗಿದೆ, ಹಾಗಾಗೇ ಅವರ ಸಂಪುಟದ ಹಿರಿಯ ಸಹೋದ್ಯೋಗಿಗಳು ಒಬ್ಬರ ನಂತರ ಮತ್ತೊಬ್ಬರು ಔತಣಕೂಟಗಳನ್ನು ಏರ್ಪಡಿಸಿ ಅವರಿಗೆ ವಿದಾಯ ಕೋರುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ವ್ಯಂಗ್ಯವಾಡಿದ್ದಾರೆ. ಮೊದಲು ಸತೀಶ್ ಜಾರಕಿಹೊಳಿ ಅವರು ಸಿದ್ದರಾಯ್ಯಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದರು, ಈಗ ಜಿ ಪರಮೇಶ್ವರ್ ಅವರು ಊಟಕ್ಕೆ ಕರೆದಿದ್ದಾರೆ, ಮುಂದೆ ಡಿಕೆ ಶಿವಕುಮಾರ್ ಡಿನ್ನರ್ ಆಯೋಜಿಸಿದ ದಿನ ಸಿದ್ದರಾಮಯ್ಯ ಅಧಿಕಾರಾವಧಿ ಮುಗಿದಂತೆ, ಯಾಕೆಂದರೆ ಸಿಎಂ ಸ್ಥಾನವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಅಂತ ಖುದ್ದು ಶಿವಕುಮಾರ್ ಅವರೇ ಹೇಳಿದ್ದಾರೆ ಎಂದು ಅಶೋಕ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಡಿಯೋ ಎಡಿಟ್ ಮಾಡಿ ಹರಿಬಿಟ್ಟ ಆರೋಪ: ಡಿಕೆ ಶಿವಕುಮಾರ್ ಸೇರಿ ಇತರರ ವಿರುದ್ಧ ಆರ್ ಅಶೋಕ್ ದೂರು
Latest Videos