ಯಶ್ ಬರ್ತ್​ಡೇಯಂದು ಮರಣವನ್ನಪ್ಪಿದ ಯುವಕರ ಕುಟುಂಬಗಳ ದುಃಖ ವರ್ಷ ಕಳೆದರೂ ಶಮನಗೊಂಡಿಲ್ಲ

ಯಶ್ ಬರ್ತ್​ಡೇಯಂದು ಮರಣವನ್ನಪ್ಪಿದ ಯುವಕರ ಕುಟುಂಬಗಳ ದುಃಖ ವರ್ಷ ಕಳೆದರೂ ಶಮನಗೊಂಡಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 07, 2025 | 4:06 PM

ದುರಂತ ಸಂಭವಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಪಾಟೀಲ್ ಮೃತರ ಮನಗೆಳಿಗೆ ಭೇಟಿ ನೀಡಿ ಎರಡೆರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದರು. ನಟ ಯಶ್ ಸಹ ಬೆಂಗಳೂರಿಂದ ಸೂರಣಿಗಿಗೆ ಧಾವಿಸಿದ್ದರು. ಮೂರು ಕುಟುಂಬಗಳಿಗೂ ಅವರು ಧನಸಹಾಯ ಮಾಡಿದ ಸಂಗತಿಯನ್ನು ನಾವು ವರದಿ ಮಾಡಿದ್ದೇವೆ. ಅದರೆ ಜೀವದ ಮುಂದೆ ಹಣಕ್ಕೆ ಕಿಮ್ಮತ್ತಿಲ್ಲ.

ಗದಗ: ಕಳೆದ ವರ್ಷ ಚಿತ್ರನಟ ಯಶ್ ಜನ್ಮದಿನದಂದು ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ತಮ್ಮ ನೆಚ್ಚಿನ ನಟನ ಬೃಹತ್ ಕಟೌಟ್ ಕಟ್ಟುವ ಭರದಲ್ಲಿ ವಿದ್ಯುತ್ ಸಜೀವ ತಂತಿಗಳಿಂದ ವಿದ್ಯುತ್ ಪ್ರವಹಿಸಿ ನವೀನ್ ಸೇರಿದಂತೆ ಮೂರು ಜನ ಸಾವನ್ನಪ್ಪಿದ್ದರು. ನವೀನ್ ತಂದೆತಾಯಿಯೊಂದಿಗೆ ನಮ್ಮ ಗದಗ ವರದಿಗಾರ ಮಾತಾಡಿದ್ದಾರೆ. 20-ವರ್ಷದ ಮಗ ಇಟ್ಟುಕೊಂಡಿದ ಅಸೆ ಮತ್ತು ಹೊತ್ತಿದ್ದ ಕನಸುಗಳ ಬಗ್ಗೆ ನವೀನ್ ತಾಯಿ ಮಾತಾಡಿದ್ದಾರೆ. ಒಂದು ಮನೆಕಟ್ಟಿಸಿ ತಂದೆತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಹೊತ್ತಿದ್ದ ತನ್ನ ಮಗ ಮನೆ ಮುಂದಿನ ಕೋಳಿಯಂತೆ ಮರೆಯಾಗಿಬಿಟ್ಟ ಅಂತ ಅವರು ರೋದಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ ಯಶ್​