‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ರಮ್ಯಾ ಅವರ ದೃಶ್ಯಗಳನ್ನು ಬಳಸಿಕೊಂಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಕೇವಲ ಪ್ರೋಮೋಗಾಗಿ ರಮ್ಯಾ ಅನುಮತಿ ನೀಡಿದ್ದರು. ಆದರೆ ಟ್ರೇಲರ್ ಮತ್ತು ಸಿನಿಮಾದಲ್ಲಿ ಕೂಡ ದೃಶ್ಯಗಳನ್ನು ಬಳಸಿದ್ದಕ್ಕಾಗಿ ಚಿತ್ರತಂಡದ ವಿರುದ್ಧ ರಮ್ಯಾ ಕೇಸ್ ಹಾಕಿದ್ದರು. ಅದರ ವಿಚಾರಣೆ ಈಗ ನಡೆಯುತ್ತಿದೆ.
ಅನುಮತಿ ಇಲ್ಲದೇ ರಮ್ಯಾ ಅವರ ದೃಶ್ಯಗಳನ್ನು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆ ರಮ್ಯಾ ಕೇಸ್ ಹಾಕಿದ್ದರು. ಇಂದು (ಜನವರಿ 7) ನ್ಯಾಯಾಲಯಕ್ಕೆ ರಮ್ಯಾ ಹಾಜರಾಗಿದ್ದಾರೆ. ಆದರೆ ಚಿತ್ರತಂಡದವರು ವಿಚಾರಣೆಗೆ ಬಂದಿಲ್ಲ ಎಂಬ ಮಾಹಿತಿ ಇದೆ. ರಮ್ಯಾ ಅವರು ಸಾಕ್ಷಿ ತಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos