ಭಾವುಕರಾಗಿ ಎಸ್ಎಂ ಕೃಷ್ಣ ಅಂತಿಮ ದರ್ಶನ ಪಡೆದ ನಟಿ ರಮ್ಯಾ
Actress Ramya: ಕರ್ನಾಟಕ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಿಧನ ಹೊಂದಿದ್ದು ಅವರು ನಟಿ ರಮ್ಯಾ ಅವರು ಕೃಷ್ಣ ಅವರ ಮನೆಗೆ ಭೇಟಿ ನೀಡಿ ದರ್ಶನ ಪಡೆದರು.
ಮಾಜಿ ಸಿಎಂ, ಕೇಂದ್ರ ಸಚಿವ ಎಸ್ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ಎಸ್ಎಂ ಕೃಷ್ಣ ಅವರು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ರಾಜಕೀಯ ರಂಗದ ಮುತ್ಸದಿ ಆಗಿದ್ದ ಕೃಷ್ಣ ಅವರು ಕರ್ನಾಟಕದ ಪ್ರಗತಿಯ ಮೇಲೆ ಬಹುದೊಡ್ಡ ಪರಿಣಾಮ ಬೀರಿದ್ದರು. ರಾಜಕೀಯ ನಾಯಕರಾಗಿದ್ದ ಕೃಷ್ಣ ಅವರು ಹಲವು ಕ್ಷೇತ್ರದ ಗಣ್ಯರೊಟ್ಟಿಗೆ ಸಂಪರ್ಕ ಹೊಂದಿದ್ದರು. ಹಲವು ಕ್ಷೇತ್ರದ ಗಣ್ಯರು ಕೃಷ್ಣ ಅವರ ಬಗ್ಗೆ ಗೌರವ ಇರಿಸಿಕೊಂಡಿದ್ದರು. ಇದೀಗ ಕೃಷ್ಣ ಅವರು ನಿಧನರಾದ ಬೆನ್ನಲ್ಲೆ ಅವರ ಹಲವು ರಂಗದ ಗಣ್ಯರು ಮುಂಜಾನೆಯೇ ಬಂದು ಅಂತಿಮ ದರ್ಶನ ಪಡೆದರು. ಮಂಡ್ಯ ಮಾಜಿ ಸಂಸದೆ, ನಟಿಯೂ ಆಗಿರುವ ರಮ್ಯಾ ಅವರು ಸಹ ಮುಂಜಾನೆಯೇ ಬಂದು ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಕೃಷ್ಣ ಅವರ ಮನೆಯ ಬಳಿ ಬಂದಾಗ ರಮ್ಯಾ ಬಹಳ ಭಾವುಕರಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು

ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
