Video: ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ
ಮುಂಬೈನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ದೊಡ್ಡ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 49 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಬೈನ ನಾಗರಿಕ ಸಾರಿಗೆ ಸಂಸ್ಥೆ ಬೆಸ್ಟ್ (ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್) ಬಸ್ ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದು ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಮುಂಬೈನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ದೊಡ್ಡ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 49 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಬೈನ ನಾಗರಿಕ ಸಾರಿಗೆ ಸಂಸ್ಥೆ ಬೆಸ್ಟ್ ಬಸ್ ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದು ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಕುರ್ಲಾದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಎಲ್ ವಾರ್ಡ್ ಬಳಿ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದ ನಂತರ ಬಸ್ ಚಾಲಕನನ್ನು ಬಂಧಿಸಲಾಗಿದೆ. ಬಸ್, ಪಾದಚಾರಿಗಳಿಗೆ, ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ ಬುದ್ಧ ಕಾಲೊನಿಯೊಳಗಿನ ವಸತಿ ಕಟ್ಟಡದೊಳಗೆ ಪ್ರವೇಶಿಸಿತ್ತು.
ಕುರ್ಲಾದಿಂದ ಅಂಧೇರಿಗೆ ಹೋಗುವ ಮಾರ್ಗ 332 ರಲ್ಲಿ ಬಸ್ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. MH01-EM-8228 ನೋಂದಣಿ ಸಂಖ್ಯೆಯ ಬಸ್ ಕುರ್ಲಾ ರೈಲು ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿವೆ. 12 ಮೀಟರ್ ಉದ್ದದ ಈ ಎಲೆಕ್ಟ್ರಿಕ್ ಬಸ್ ಅನ್ನು ಹೈದರಾಬಾದ್ ಮೂಲದ ‘ಒಲೆಕ್ಟ್ರಾ ಗ್ರೀನ್‌ಟೆಕ್’ ತಯಾರಿಸಿದೆ ಮತ್ತು ಬೆಸ್ಟ್‌ನಿಂದ ಗುತ್ತಿಗೆಗೆ ತೆಗೆದುಕೊಳ್ಳಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಅಂತಹ ಬಸ್‌ಗಳ ಚಾಲಕರನ್ನು ಖಾಸಗಿ ನಿರ್ವಾಹಕರು ಒದಗಿಸುತ್ತಾರೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ