Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​​​ಎಂ ಕೃಷ್ಣ ವಿಧಿವಶ; ಕೆಂಪೇಗೌಡ ಹಾಗೂ ಕೆಂಗಲ್ ಹನುಮಂತಯ್ಯನವರ ಹಾಗೆ ಕೃಷ್ಣರನ್ನೂ ಜನ ನೆನಪಿಟ್ಟುಕೊಳ್ಳುತ್ತಾರೆ: ಅಶೋಕ

ಎಸ್​​​ಎಂ ಕೃಷ್ಣ ವಿಧಿವಶ; ಕೆಂಪೇಗೌಡ ಹಾಗೂ ಕೆಂಗಲ್ ಹನುಮಂತಯ್ಯನವರ ಹಾಗೆ ಕೃಷ್ಣರನ್ನೂ ಜನ ನೆನಪಿಟ್ಟುಕೊಳ್ಳುತ್ತಾರೆ: ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 10, 2024 | 10:41 AM

ರಾಜ್ಯದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ ಅವರು ಜನ ಮತ್ತು ದೇಶ ಮೆಚ್ಚುವ ರೀತಿಯಲ್ಲಿ ಸಮರ್ಥ ಆಡಳಿತ ನೀಡಿದ್ದರು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅದ್ಭುತವಾಗಿ ಮಾತಾಡುತ್ತಿದ್ದ ಅವರು ಬಳಸುತ್ತಿದ್ದ ಪದಗಳು ನಿಘಂಟಿನಲ್ಲೂ ಸಿಗುತ್ತಿರಲಿಲ್ಲ ಎಂದು ಅಶೋಕ ಹೇಳಿದರು.

ಬೆಳಗಾವಿ: ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಬೆಂಗಳೂರಲ್ಲಿ ಐಟಿ-ಬಿಟಿ ಕ್ರಾಂತಿಗೆ ಕಾರಣರಾದ ಮತ್ತು ವಿಕಾಸ ಸೌಧವನ್ನು ಕಟ್ಟಿದ ಕೃಷ್ಣ ಅವರನ್ನು ಜನರು ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಮತ್ತು ವಿಧಾನ ಸೌಧವನನ್ನು ಕಟ್ಟಿದ ಕೆಂಗಲ್ ಹನುಮಂತಯ್ಯನವರ ಹಾಗೆಯೇ ನೆನಪಿಟ್ಟುಕೊಳ್ಳಲಿದ್ದಾರೆ, ಅವರೊಂದಿಗೆ ತನಗೆ ಉತ್ತಮ ಒಡನಾಟವಿತ್ತು, ಹುಟ್ಟುಹಬ್ಬ ಮತ್ತು ಇತರ ಕಾರ್ಯಕ್ರಮಗಳಿಗೆ ಅವರ ಮನೆಗೆ ಹಲವಾರು ಸಲ ಭೇಟಿ ನೀಡಿದ್ದೇನೆ, ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗ ಅವರನ್ನು ಬೆಂಗಳೂರುನಿಂದ ದೆಹಲಿಗೆ ತಾನೇ ಕರೆದುಕೊಂಡು ಹೋಗಿದ್ದು ಎಂದು ಹೇಳದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಎಸ್ಎಂ ಕೃಷ್ಣ ಹುಟ್ಟಿ ಬೆಳೆದ, ನೂರಾರು ವರ್ಷಗಳ ಹಳೆಯ ಸೋಮನಹಳ್ಳಿ ಮನೆ ಹೇಗಿದೆ ನೋಡಿ