SM Krishna No More; ನಮ್ಮ ಕುಟುಂಬದಿಂದ ವಿಧಾನಸೌಧದ ಮೆಟ್ಟಿಲು ಹತ್ತಿದ ಮೊದಲ ವ್ಯಕ್ತಿ ಕೃಷ್ಣ: ಮಹೇಶ್, ಸಂಬಂಧಿ

SM Krishna No More; ನಮ್ಮ ಕುಟುಂಬದಿಂದ ವಿಧಾನಸೌಧದ ಮೆಟ್ಟಿಲು ಹತ್ತಿದ ಮೊದಲ ವ್ಯಕ್ತಿ ಕೃಷ್ಣ: ಮಹೇಶ್, ಸಂಬಂಧಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 10, 2024 | 11:31 AM

ಸಂಬಂಧದಲ್ಲಿ ಕೃಷ್ಣ ಅವರಿಗೆ ಮೊಮ್ಮಗನಾಗಿರುವ ಸತೀಶ್ ಪಟೇಲ್ ಹೇಳುವ ಪ್ರಕಾರ ಅಗಲಿದ ನಾಯಕನಿಗೆ ನಾಟಿ ಕೋಳಿಸಾರು ಅಂದರೆ ಬಹಳ ಇಷ್ಟ ಮತ್ತು ಊರಿಗೆ ಬಂದಾಗಲೆಲ್ಲ ಇಲ್ಲಿಂದಲೇ ಸೊಪ್ಪುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು, ಅವರು ಹುಟ್ಟಿ ಬೆಳೆದ ಮನೆಯಲ್ಲಿ ನಾವು ವಾಸವಾಗಿರೋದು ಪುಣ್ಯವಲ್ಲದೆ ಮತ್ತೇನೂ ಅಲ್ಲ ಎಂದು ಅವರು ಹೇಳುತ್ತಾರೆ.

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರ ಸಾವು ಹುಟ್ಟೂರು ಸೋಮನಹಳ್ಳಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ನಮ್ಮ ಮಂಡ್ಯ ಪ್ರತಿನಿಧಿ ಅಗಲಿದ ನಾಯಕನ ಕುಟುಂಬದ ಸದಸ್ಯರನ್ನು ಮಾತಾಡಿಸಿದ್ದಾರೆ. ಕೃಷ್ಣ ಅವರ ಚಿಕ್ಕಪ್ಪನ ಮಗನಾಗಿರುವ ಮಹೇಶ್, ಬೆಳಗ್ಗೆ ಸುಮಾರು 4.45 ಕ್ಕೆ ತಮಗೆ ವಿಷಯ ಗೊತ್ತಾಯಿತು, ತಮ್ಮ ಕುಟುಂಬದಿಂದ ವಿಧಾನ ಸೌಧದ ಮೆಟ್ಟಿಲು ಹತ್ತಿದ ಮೊದಲ ವ್ಯಕ್ತಿ ಅವರು, ಅವರ ಸಾವು ಕುಟುಂಬದವರನ್ನು ಆಘಾತಕ್ಕೀಡು ಮಾಡಿದೆ, ಬೆಂಗಳೂರಲ್ಲಿ ಮನೆಗೆ ಹೋದಾಗ ಅವರು ಮತ್ತು ಪ್ರೇಮಕ್ಕ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ತಮ್ಮ ಮನೆಯ ಕಾರ್ಯಕ್ರಮವೊಂದಕ್ಕೆ ಅವರು ಬಂದಿದ್ದರು ಎಂದು ಹೇಳಿದರು. ಕೃಷ್ಣ ಅವರ ಅಂತ್ಯ ಸಂಸ್ಕಾರ ಇದೇ ಊರಲ್ಲಿ ಮಧ್ಯಾಹ್ನದ ನಂತರ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಸ್​ಎಂ ಕೃಷ್ಣ ಅಂತಿಮ ದರ್ಶನ ವೇಳೆ ಡಿಕೆಶಿ ಭಾವುಕ