ಟ್ರೇಲರ್ ಮೂಲಕವೇ ಗಮನ ಸೆಳೆಯುತ್ತಿದ್ದಾನೆ ವೀಲ್ ಚೇರ್ ರೋಮಿಯೋ !
ಕಳೆದ ವರ್ಷದ ಹಿಂದೆ ಬಿಡುಗಡೆಯಾಗಿದ್ದ ವೀಲ್ ಚೇರ್ ರೋಮಿಯೋ ಸಿನಿಮಾದ ಮೊದಲ ನೋಟ ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿದೆ. ಚಿತ್ರಪ್ರೇಮಿಗಳನ್ನು ಸಿನಿಮಾ ನೋಡುವಂತೆ ಸೀಟಿನ ತುದಿಗೆ ತಂದು ಕೂರಿಸಿದೆ.
ಕನ್ನಡದಲ್ಲಿ ವೀಲ್ ಚೇರ್ ರೋಮಿಯೋ ಎಂಬ ವಿಶೇಷ ಸಿನಿಮಾವೊಂದು ತಯಾರಾಗಿದೆ. ವಿಕಲಚೇತನ ವೇಶ್ಯೆಯ ಪ್ರೀತಿಯಲ್ಲಿ ಬೀಳುವ ಸೂಕ್ಷ್ಮ ಎಳೆಯ ಕಂಟೆಂಟಿನ ಈ ಸಿನಿಮಾ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ. ಅಗಸ್ತ್ಯ ಬ್ಯಾನರ್ ನಡಿಯಲ್ಲಿ ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಸ್ಯಾಂಪಲ್ಸ್ ವೀಲ್ ಚೇರ್ ರೋಮಿಯೋದ ಕ್ವಾಲಿಟಿಯನ್ನು ಬಿಚ್ಚಿಟ್ಟಿದೆ.
ಕಳೆದ ವರ್ಷದ ಹಿಂದೆ ಬಿಡುಗಡೆಯಾಗಿದ್ದ ವೀಲ್ ಚೇರ್ ರೋಮಿಯೋ ಸಿನಿಮಾದ ಮೊದಲ ನೋಟ ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿದೆ. ಚಿತ್ರಪ್ರೇಮಿಗಳನ್ನು ಸಿನಿಮಾ ನೋಡುವಂತೆ ಸೀಟಿನ ತುದಿಗೆ ತಂದು ಕೂರಿಸಿದೆ. ಟ್ರೇಲರ್ ನೋಡಿ ಫಿದಾ ಆಗಿರುವ ಪ್ರೇಕ್ಷಕ ಸಿನಿಮಾಗಾಗಿ ಎದುರು ನೋಡ್ತಿದ್ದಾನೆ. ಇಷ್ಟು ಮಟ್ಟದ ನಿರೀಕ್ಷೆ ಹುಟ್ಟಿಸುವುದು ಅಂದರೆ ಸುಮ್ಮನೇ ಮಾತಲ್ಲ. ಅದರಲ್ಲೂ ಮೊದಲ ಪ್ರಯತ್ನದಲ್ಲಿ ಸಾಧ್ಯವೇ. ಖಂಡಿತ ಸಾಧ್ಯ ಅನ್ನುವುದನ್ನು ನಿರ್ದೇಶಕ ನಟರಾಜ್ ಸಾಬೀತುಪಡಿಸಿದ್ದಾರೆ.
ಖ್ಯಾತ ನಿರ್ದೇಶಕರ ಜೊತೆ ನಿರ್ದೇಶನದ ಕಲಾ ಕೌಶಲ್ಯ ಕಲಿತಿರುವ ನಟರಾಜ್, ಜೂಮ್, ಆರೆಂಜ್, ರೋಮಿಯೋ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಒಟ್ಟಾರೆ 17 ವರ್ಷದ ಸಿನಿಮಾ ಅನುಭವವನ್ನು ಧಾರೆ ಎರೆದು ವೀಲ್ ಚೇರ್ ರೋಮಿಯೋ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕಾಲಿಲ್ಲದೇ ವೀಲ್ ಚೇರ್ ಗೆ ಅಂಟಿಕೊಂಡು ಕುರುವ ನಾಯಕನ ಪಾತ್ರದಲ್ಲಿ ರಾಮ್ ಚೇತನ್ ನಟಿಸಿದ್ದು, ವೇಶ್ಯೆ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲನಾಣಿ ಸೇರಿದಂತೆ ಹಿರಿಯ ಕಲಾವಿದರು ತಮ್ಮ ತಮ್ಮ ಪಾತ್ರ ಪೋಷಿಸಿದ್ದಾರೆ. ಭರತ್ ಬಿ.ಜೆ ಸಂಗೀತದ ಇಂಪು, ಸಂತೋಷ್ ಪಾಂಡಿ ಕ್ಯಾಮೆರಾ ತಂಪು, ಗುರುಕಶ್ಯಪ್ ಸಂಭಾಷಣೆ ಮಜಾ ವೀಲ್ ಚೇರ್ ರೋಮಿಯೋಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.