Darling Krishna, Milana Nagaraj: ಪ್ರೇಮಿಗಳ ದಿನದಂದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಸೆಮಣೆ ಏರಿದ್ದಾರೆ. ಮದುವೆ ಸಂಭ್ರಮದ ಸುಂದರ ಕ್ಷಣಗಳು ಚಿತ್ರ ರೂಪದಲ್ಲಿ ಇಲ್ಲಿವೆ.
TV9 Web Team
Published On -
16:00 PM, 14 Feb 2021
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್
ಮಿಲನಾ ನಾಗರಾಜ್ಗೆ ಕಟ್ಟಿದ ತಾಳಿಗೆ ಪೂಜೆ ಮಾಡುತ್ತಿರುವ ಡಾರ್ಲಿಂಗ್ ಕೃಷ್ಣ. ಜೋಡಿ ಹಕ್ಕಿಗಳಾಗಿದ್ದ ಇವರು ಪ್ರೇಮಿಗಳ ದಿನದಂದು ಹಸೆಮಣೆ ಏರಿ ದಂಪತಿಗಳಾಗಿದ್ದಾರೆ.
ಪ್ರೇಮಿಗಳ ದಿನದಂದು(ಫೆ.14) ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹಸೆಮಣೆ ಏರಿದ್ದಾರೆ. ತಾಳಿಕಟ್ಟುವ ಮೊದಲು ಹಾರವನ್ನು ಹಿಡಿದು ನಿಂತ ದೃಶ್ಯವಿದು. ಮಿಲನಾ ನಾಗರಾಜ್ ಆಸೆಯಂತೆ ಮದುವೆ ತಯಾರಿಗಳು ರೂಪುಗೊಂಡಿದ್ದವು.
ನವ ಜೋಡಿಗಳಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ, ಹಣೆಗೆ ಮುತ್ತಿಟ್ಟು ಪ್ರೀತಿ ತೋರಿದ್ದಾರೆ. ಹಣೆಗೆ ಮುತ್ತಿಡುವ ದೃಶ್ಯ ಅವರಿಬ್ಬರ ನಡುವಿನ ಪ್ರೀತಿಯನ್ನು ತೋರಿಸುತ್ತಿದೆ.
ನವ ಜೋಡಿಗಳು ಮದುವೆಗೆ ಸೇರಿದ್ದ ಹಿರಿಯರು, ಗಣ್ಯರಲ್ಲಿ ಕೈ ಮುಗಿದು ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯ ನಮ್ಮನ್ನು ಹರಸಿ, ಹಾರೈಸಿ, ಆಶೀರ್ವದಿಸಿ ಎಂದು ಕೋರುವಂತಿದೆ.
ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ವಿವಾಹ ಮಂಟಪದ ದೃಶ್ಯವಿದು. ಮಿಲನಾ ನಾಗರಾಜ್ ಆಸೆಯಂತೆ ಸ್ವಿಮ್ಮಿಂಗ್ ಪೂಲ್ ಎದುರು ಮಂಟಪವನ್ನು ತಯಾರಿಸಿ ಸುಂದರವಾಗಿ ಅಲಂಕಾರ ಮಾಡಲಾಗಿದೆ. ಬಣ್ಣಬಣ್ಣದ ಹೂವುಗಳಿಂದ ಮಂಟಪ ಸಿದ್ಧಪಡಿಸಲಾಗಿದೆ.