‘ಹೂ ಅಂತೀಯಾ ಮಾವ..’ ಸಾಂಗ್ ಕೇಳಿದ್ರೆ ರಣವೀರ್ ಸಿಂಗ್ ಮಾಡೋದೇನು? ನಟ ಕೊಟ್ರು ಉತ್ತರ

‘ಹೂ ಅಂತೀಯಾ ಮಾವ..’ ಸಾಂಗ್ ಕೇಳಿದ್ರೆ ರಣವೀರ್ ಸಿಂಗ್ ಮಾಡೋದೇನು? ನಟ ಕೊಟ್ರು ಉತ್ತರ
ರಣವೀರ್-ಸಮಂತಾ

ರಣವೀರ್ ಸಿಂಗ್ ಅವರು ‘ಜಯೇಶ್​ಭಾಯ್ ಜೋರ್ದಾರ್​’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸಂದರ್ಶನದಲ್ಲಿ ಅವರು ‘ಹೂ ಅಂತೀಯಾ ಮಾವ’ ಹಾಡಿನ ಬಗ್ಗೆ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

May 11, 2022 | 10:00 PM

2021ರ ಕೊನೆಯಲ್ಲಿ ಎರಡು ಘಟನೆ ನಡೆಯಿತು. ‘ಪುಷ್ಪ’ ಸಿನಿಮಾ (Pushpa Movie) ಒಳ್ಳೆಯ ಕಲೆಕ್ಷನ್ ಮಾಡಿತು. ಸಮಂತಾ ಹೆಜ್ಜೆ ಹಾಕಿದ ‘ಹೂ ಅಂತಿಯಾ ಮಾವ’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡಿನ ಕೀರ್ತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶದ ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟರ್ ಡೇವಿಡ್ ವಾರ್ನರ್​ (David Warner) ಸೇರಿ ಹಲವು ಮಂದಿ ಈ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಬಾಲಿವುಡ್​ನ ಖ್ಯಾತ ನಟ ರಣವೀರ್ ಸಿಂಗ್ (Ranveer Singh) ಕೂಡ ಈ ಹಾಡಿನ ದೊಡ್ಡ ಫ್ಯಾನ್. ಅವರು ಈ ಬಗ್ಗೆ ಮಾತನಾಡಿದ್ದಾರೆ.

ರಣವೀರ್ ಸಿಂಗ್ ಅವರು ‘ಜಯೇಶ್​ಭಾಯ್ ಜೋರ್ದಾರ್​’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಶಾಲಿನಿ ಪಾಂಡೆ ಈ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಮೇ 13ರಂದು ಸಿನಿಮಾ ತೆರೆಗೆ ಬರುತ್ತಿದೆ. ಇಂಡಿಯಾ ಟುಡೇ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಅವರು ‘ಹೂ ಅಂತೀಯಾ ಮಾವ’ ಹಾಡಿನ ಬಗ್ಗೆ ಮಾತನಾಡಿದ್ದಾರೆ.

‘ನನ್ನ ಫೇವರಿಟ್ ಹಾಡು ಊ ಅಂಟಾವ ಮಾವ. ಈ ಹಾಡನ್ನು ಕೇಳಿದರೆ ನಾನು ಕ್ರೇಜ್​​ಗೆ ಒಳಗಾಗುತ್ತೇನೆ. ನನಗೆ ಹಾಡು ಅರ್ಥವಾಗುವುದಿಲ್ಲ. ಆದರೆ ಮ್ಯೂಸಿಕ್ ನನಗೆ ಹತ್ತಿರವಾಗಿದೆ’ ಎಂದು ಹೇಳಿದ್ದಾರೆ ರಣವೀರ್ ಸಿಂಗ್. ಈ ಹಾಡಿನಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿದ್ದರು. ಈ ಹಾಡಿನಿಂದ ಸಿನಿಮಾಗೆ ಒಳ್ಳೆಯ ಮೈಲೇಜ್ ಸಿಕ್ಕಿತ್ತು.

ಕಿಸ್ಸಿಂಗ್ ಸೀನ್ ಬಗ್ಗೆ ಮಾತನಾಡಿದ್ದ ರಣವೀರ್

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರದ್ದು ಹಿಟ್ ಜೋಡಿ. ಮದುವೆಗೂ ಮೊದಲು ಮೂರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ‘ಗೋಲಿಯೋಂಕಿ ರಾಸ್​ಲೀಲಾ ರಾಮ್​ ಲೀಲಾ’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಸಿನಿಮಾಗಳಲ್ಲಿ ಈ ಜೋಡಿ ನಟಿಸಿದೆ. ಮೊದಲ ಸಿನಿಮಾ ‘ರಾಮ್​ ಲೀಲಾ’ ವೇಳೆ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ಅದರ ತೀವ್ರತೆ ಶೂಟಿಂಗ್ ಸಂದರ್ಭದಲ್ಲಿ ಕಾಣಿಸಿತ್ತು. ಈ ವಿಚಾರವನ್ನು ರಣವೀರ್ ಈಗ ಬಿಚ್ಚಿಟ್ಟಿದ್ದಾರೆ.

‘ರಾಮ್​ ಲೀಲಾ’ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಗಳಿವೆ. ಬೆಡ್​ ಮೇಲೆ ಮಲಗಿ ರಣವೀರ್ ಹಾಗೂ ದೀಪಿಕಾ ಕಿಸ್ ಮಾಡುತ್ತಿರುವ ದೃಶ್ಯವನ್ನು ಸೆರೆ ಹಿಡಿಯಬೇಕಿತ್ತು. ಈ ದೃಶ್ಯವನ್ನು ರಣವೀರ್ ವಿವರಿಸಿದ್ದಾರೆ. ‘ನಾನು ದೀಪಿಕಾ ಕಿಸ್ ಮಾಡುತ್ತಾ ಇದ್ದೆವು. ಶಾಟ್ ಓಕೆ ಆಯಿತು. ಈ ವೇಳೆ ಕಿಟಕಿ ಗಾಜಿಗೆ ಯಾರೋ ಇಟ್ಟಿಗೆ ಎಸೆದಿದ್ದರು. ಕಿಟಕಿ ಒಡೆದು ಹೋಯಿತು. ಆದಾಗ್ಯೂ ನಾವು ಕಿಸ್ ಮಾಡುತ್ತಲೇ ಇದ್ದೆವು. ನನಗೆ ಕಿಸ್ ಮಾಡೋದನ್ನು ನಿಲ್ಲಿಸಲು ಆಗುತ್ತಿರಲಿಲ್ಲ’ ಎಂದಿದ್ದಾರೆ ರಣವೀರ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada