ರಣವೀರ್​ ಸಿಂಗ್​ ಹೀಗೆಲ್ಲ ಚಿತ್ರ-ವಿಚಿತ್ರ ಬಟ್ಟೆ ಹಾಕೋದು ಯಾಕೆ? ಕಡೆಗೂ ಸತ್ಯ ಬಾಯ್ಬಿಟ್ಟ ನಟ

ರಣವೀರ್​ ಸಿಂಗ್​ ಹೀಗೆಲ್ಲ ಚಿತ್ರ-ವಿಚಿತ್ರ ಬಟ್ಟೆ ಹಾಕೋದು ಯಾಕೆ? ಕಡೆಗೂ ಸತ್ಯ ಬಾಯ್ಬಿಟ್ಟ ನಟ
ರಣವೀರ್ ಸಿಂಗ್

Jayeshbhai Jordaar: ರಣವೀರ್​ ಸಿಂಗ್ ಅವರ ಡ್ರೆಸ್ಸಿಂಗ್​ ಸೆನ್ಸ್​ ಬಗ್ಗೆ ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಉತ್ತರ ನೀಡಿದ್ದಾರೆ.

TV9kannada Web Team

| Edited By: Madan Kumar

May 12, 2022 | 9:05 AM

ಬಾಲಿವುಡ್​ನ ಜನಪ್ರಿಯ ನಟ ರಣವೀರ್​ ಸಿಂಗ್​ (Ranveer Singh) Ranveer Singh Movies, Bollywood News,  ಅವರು ಇತರೆ ಹೀರೋಗಳಿಗಿಂತಲೂ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರ ನಡೆ-ನುಡಿ ಮಾತ್ರವಲ್ಲದೇ ಧರಿಸುವ ಬಟ್ಟೆಯಲ್ಲೂ ಭಿನ್ನತೆ ಇದೆ. ಜನರ ಕಣ್ಣಿಗೆ ಅತಿ ವಿಚಿತ್ರವಾಗಿ ಕಾಣುವ ಬಟ್ಟೆಗಳನ್ನು ಧರಿಸುವ ಮೂಲಕ ರಣವೀರ್​ ಸಿಂಗ್​ ಸುದ್ದಿ (Ranveer Singh News) ಆಗುತ್ತಾರೆ. ಪ್ರತಿ ಬಾರಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಅವರ ಕಾಸ್ಟ್ಯೂಮ್ ಗಮನಿಸುತ್ತಾರೆ. ಡ್ರೆಸ್​ ಆಯ್ಕೆಯ ವಿಚಾರದಲ್ಲಿ ರಣವೀರ್ ಸಿಂಗ್​ ಅವರ ಅಭಿರುಚಿ ಯಾಕೆ ಈ ರೀತಿ ಇದೆ ಎಂದು ಜನರು ತಲೆ ಕೆಡಿಸಿಕೊಂಡಿದ್ದಾರೆ. ಈ ಕುರಿತಾಗಿ ಅವರಿಗೆ ಪ್ರಶ್ನೆ ಕೂಡ ಎದುರಾಗಿದೆ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ರಣವೀರ್ ಸಿಂಗ್​ ಉತ್ತರ ನೀಡಿದ್ದಾರೆ. ತಮ್ಮ ರಂಗು ರಂಗಿನ ಬಟ್ಟೆ (Ranveer Singh Dress)​ ಕುರಿತಾಗಿ ಇರುವ ಎಲ್ಲ ಅನುಮಾನಗಳನ್ನೂ ಅವರು ಪರಿಹರಿಸಿದ್ದಾರೆ. ಅಷ್ಟಕ್ಕೂ ಅವರು ಈ ರೀತಿ ಡ್ರೆಸ್​ ಮಾಡಿಕೊಳ್ಳುವುದು ಯಾಕೆ? ಇಲ್ಲಿದೆ ಉತ್ತರ..

ರಣವೀರ್​ ಸಿಂಗ್​ ನಟನೆಯ ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 13ರಂದು ಈ ಸಿನಿಮಾ ರಿಲೀಸ್​ ಆಗುತ್ತಿದೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ಶಾಲಿನಿ ಪಾಂಡೆ ಅವರು ಈ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಪ್ರಚಾರ ಕಾರ್ಯದಲ್ಲಿ ರಣವೀರ್​ ಸಿಂಗ್​ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿದೆ.

ರಣವೀರ್​ ಸಿಂಗ್​ ಅವರು ‘ಟ್ವಿಟರ್​ ಮೂವೀಸ್​’ ಖಾತೆ ಮೂಲಕ ತಮ್ಮ ಸಿನಿಮಾದ ಪ್ರಚಾರ ಮಾಡಿದ್ದಾರೆ. ಈ ರೀತಿ ಮಾಡಿದ ಮೊದಲ ಬಾಲಿವುಡ್​ ನಟ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. #AskRanveer ಎಂದು ಅಭಿಮಾನಿಗಳಿಂದ ಅವರು ಪ್ರಶ್ನೆ ಆಹ್ವಾನಿಸಿದ್ದರು. ಆಗ ಕೆಲವರು ಅವರ​ ಡ್ರೆಸ್ಸಿಂಗ್​ ಸೆನ್ಸ್​ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ರಣವೀರ್​ ಸಿಂಗ್ ಉತ್ತರ ನೀಡಿದ್ದಾರೆ.

‘ನಾನು ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುತ್ತೇನೆ. ಮುಖಭಾವದಲ್ಲಿ ಆಗಿರಬಹುದು ಅಥವಾ ಮಾತಿನಲ್ಲಿ ಆಗಿರಬಹುದು. ಅದೇ ರೀತಿ ಬಟ್ಟೆಗಳ ವಿಚಾರದಲ್ಲೂ ನಾನು ಹೆಚ್ಚು ಎಕ್ಸ್​ಪ್ರೆಸಿವ್​ ವ್ಯಕ್ತಿ. ನಾನು ಭಾವನೆಗಳನ್ನು ತಡೆದು ಇಟ್ಟುಕೊಳ್ಳುವುದಿಲ್ಲ. ಬಹಳ ಕಾಲದ ಹಿಂದೆ ನಾನು ಈ ಗುಣವನ್ನು ಅಳವಡಿಸಿಕೊಂಡೆ. ಜನರು ಏನು ಅಂದುಕೊಳ್ಳುತ್ತಾರೋ ಎಂಬುದರ ಭಯ ಬಿಟ್ಟು, ಅನಿಸಿದ್ದನ್ನು ಹೇಳಲು ಶುರುಮಾಡಿದೆ. ಅದಕ್ಕೂ ಮುನ್ನ ನಾನು ಹೀಗೆ ಇರಲಿಲ್ಲ’ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ.

‘ಹೇಗಿದ್ದರೂ ಜನರು ನಮ್ಮನ್ನು ಜಡ್ಜ್​ ಮಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ನಿಮಗೆ ಏನು ಅನಿಸುತ್ತೋ ಅದನ್ನು ಹೇಳಬೇಕು. ಖುಷಿ ನೀಡುವಂತಹ ಬಟ್ಟೆಯನ್ನೇ ಹಾಕಬೇಕು. ಜನರು ಏನು ಅಂದುಕೊಳ್ಳುತ್ತಾರೋ ಎಂಬ ಭಯದಿಂದ ನಿಮ್ಮನ್ನು ನೀವು ಬಿಡಿಸಿಕೊಳ್ಳಬೇಕು’ ಎಂದು ರಣವೀರ್​ ಸಿಂಗ್​ ಉತ್ತರ ನೀಡಿದ್ದಾರೆ. ಆ ಮೂಲಕ ತಮ್ಮ ಬಟ್ಟೆಗಳ ಆಯ್ಕೆ ಹಿಂದಿನ ಮನಸ್ಥಿತಿ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ.

ಟ್ರೇಲರ್​ ಮೂಲಕ ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಭರವಸೆ ಮೂಡಿಸಿದೆ. ‘83’ ಸಿನಿಮಾದ ಸೋಲಿನ ಬಳಿಕ ರಣವೀರ್​ ಸಿಂಗ್​ ಅವರಿಗೆ ಒಂದು ಗೆಲುವು ಬೇಕಾಗಿದೆ. ಹಾಗಾಗಿ ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada