AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೃಥ್ವಿರಾಜ್​’ ಸಿನಿಮಾ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಆದ ನಟಿ ಮಾನುಷಿ ಚಿಲ್ಲರ್​; ಇಲ್ಲಿವೆ ಫೋಟೋಗಳು  

ಮಾನುಷಿ ಚಿಲ್ಲರ್ ಅವರು ಈಗ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್​’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್​ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on: May 25, 2022 | 6:51 PM

ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಅನೇಕರು ಮಾಡೆಲಿಂಗ್ ಲೋಕದಲ್ಲಿ ಮಿಂಚಿರುತ್ತಾರೆ. ಅಲ್ಲಿ ಖ್ಯಾತಿ ಸಿಗುತ್ತಿದ್ದಂತೆಯೇ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಇದು ಚಿತ್ರರಂಗದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇದಕ್ಕೆ ಮಾನುಷಿ ಚಿಲ್ಲರ್ ಕೂಡ ಹೊರತಾಗಿಲ್ಲ. ಆದರೆ, ಮೊದಲ ಚಿತ್ರವನ್ನು ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಅವರ ನಟನೆಯ ‘ಪೃಥ್ವಿರಾಜ್​’ ಸಿನಿಮಾ ತೆರೆಗೆ ಬರುತ್ತಿದೆ.

1 / 5
ಮಾನುಷಿ ಚಿಲ್ಲರ್ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆದರು. ಇದಾದ ಬಳಿಕ ಅವರು ‘ಮಿಸ್​ ವರ್ಲ್ಡ್​​ 2017’ ಕಿರೀಟವನ್ನು ಮುಡಿಗೇರಿಸಿಕೊಂಡರು. ಆ ಬಳಿಕ ಅವರ ಖ್ಯಾತಿ ಹೆಚ್ಚಿತು. ವಿಶ್ವಮಟ್ಟದಲ್ಲಿ ಮಾನುಷಿ ಗುರುತಿಸಿಕೊಂಡರು. ರಾತ್ರಿ ಬೆಳಗಾಗುವುದರೊಳಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಬಿಟ್ಟರು. ಇನ್​​ಸ್ಟಾಗ್ರಾಮ್​ನಲ್ಲಿ ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸೋಕೆ ಆರಂಭಿಸಿದರು.

2 / 5
ನಿರ್ಮಾಪಕರು ಮಾಡೆಲಿಂಗ್ ಜಗತ್ತಿನ ಮೇಲೆ ಯಾವಾಗಲೂ ಕಣ್ಣು ಇಟ್ಟಿರುತ್ತಾರೆ. ಅದರಲ್ಲೂ ಇಷ್ಟೊಂದು ಖ್ಯಾತಿ ಸಿಕ್ಕರೆ ಚಿತ್ರರಂಗಕ್ಕೆ ಎಂಟ್ರಿ ಸಿಗೋದು ತುಂಬಾನೇ ಸುಲಭ. ಆದರೆ, ಮಾನುಷಿ ಚಿಲ್ಲರ್ ಈ ವಿಚಾರದಲ್ಲಿ ತರಾತುರಿ ಮಾಡಲೇ ಇಲ್ಲ. ‘ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ನಟಿಸುತ್ತೇನೆ’ ಎಂದು ನೇರವಾಗಿಯೇ ಹೇಳಿದರು. ಹೇಳಿದಂತೆ ನಡೆದುಕೊಂಡರು.

3 / 5
ಮಾನುಷಿ ಚಿಲ್ಲರ್ ಅವರು ಈಗ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್​’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್​ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಇಷ್ಟು ದೊಡ್ಡ ಪ್ರೊಡಕ್ಷನ್ ಹೌಸ್​ನಿಂದ ಪರಿಚಯಗೊಳ್ಳುತ್ತಿರುವುದಕ್ಕೆ ಅವರಿಗೆ ನಿಜಕ್ಕೂ ಖುಷಿಯಿದೆ. ಮೊದಲ ಸಿನಿಮಾದಲ್ಲೇ ಅಕ್ಷಯ್ ಕುಮಾರ್ ಜತೆ ನಟಿಸುವ ಅವಕಾಶ ಮಾನುಷಿಗೆ ಸಿಕ್ಕಿದೆ.

4 / 5
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ತೆರೆಗೆ ಬಂದು ಈಗಾಗಲೇ ಸುಮಾರು ಎರಡು ವರ್ಷ ಕಳೆದಿರುತ್ತಿತ್ತು. 2020ರ ದೀಪಾವಳಿಯಲ್ಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ತೆರೆಗೆ ಬರೋದು ತಡವಾಗಿದೆ. ಜೂನ್​ 3ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ಅಕ್ಷಯ್ ಹಾಗೂ ಮಾನುಷಿ ಬ್ಯುಸಿ ಆಗಿದ್ದಾರೆ.

5 / 5
Follow us
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು

ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ

ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್

ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ

ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು

ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು

ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್

ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್

ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ