AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯನ್ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೇಲ್​ ಸಾವು; ವಕೀಲರಿಂದ ಮಾಹಿತಿ

ಎನ್​ಸಿಬಿ ಅಧಿಕಾರಿಗಳು ಸುಮಾರು 10 ಖಾಲಿ ಪೇಪರ್​ಗಳಿಗೆ ನನ್ನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಸುಮಾರು 25 ಕೋಟಿ ರೂಪಾಯಿ ವಸೂಲಿ ಮಾಡಿದ ಬಗ್ಗೆ ನಡೆದ ದೂರವಾಣಿ ಸಂಭಾಷಣೆಯನ್ನೂ ನಾನು ಕೇಳಿದ್ದೇನೆ ಎಂದು ಪ್ರಭಾಕರ್ ಸೇಲ್​ ಹೇಳಿದ್ದರು.

ಆರ್ಯನ್ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೇಲ್​ ಸಾವು; ವಕೀಲರಿಂದ ಮಾಹಿತಿ
ಪ್ರಭಾಕರ್ ಸೇಲ್​
Follow us
TV9 Web
| Updated By: shivaprasad.hs

Updated on:Apr 02, 2022 | 12:02 PM

ಬಾಲಿವುಡ್​ ನಟ ಶಾರುಖ್ ಖಾನ್​ ಪುತ್ರ ಆರ್ಯನ್​ ಖಾನ್​ ಸಿಕ್ಕಿಬಿದ್ದಿದ್ದ ಡ್ರಗ್ಸ್​ ಪ್ರಕರಣದಲ್ಲಿ (Aryan Khan case) ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್​ ಸೇಲ್​ ನಿಧನರಾಗಿದ್ದಾರೆ. ಈಗ ಆರು ತಿಂಗಳ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮುಂಬೈನ ಕಾರ್ಡೇಲಿಯಾ ಕ್ರೂಸ್​ ಶಿಪ್​​ ಮೇಲೆ ದಾಳಿ ನಡೆಸಿತ್ತು. ಅದರಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತಿತ್ತು ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. ಹಾಗೇ, ಆರ್ಯನ್ ಖಾನ್​ ಕೂಡ ಸಿಕ್ಕಿಬಿದ್ದಿದ್ದರು. ಇದೆಲ್ಲ ಆಗಿದ್ದು 2021ರ ಅಕ್ಟೋಬರ್​ನಲ್ಲಿ. ನಂತರ ಆರ್ಯನ್ ಖಾನ್​ ಹಲವು ವಾರಗಳ ಕಾಲ ಜೈಲಿನಲ್ಲಿಯೇ ಇದ್ದು, ಸದ್ಯ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್​ ಸೇಲ್​ ಅವರು ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ, ಮುಹುಲ್​ ಏರಿಯಾದಲ್ಲಿರುವ ಚೆಂಬೂರ್​​ನಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸೇಲ್​ ಪರ ವಕೀಲರಾಗಿದ್ದ ತುಷಾರ್​ ಖಂಡಾರೆ ತಿಳಿಸಿದ್ದಾರೆ.

ಆರ್ಯನ್​ ಖಾನ್​ ಸಿಕ್ಕಿಬಿದ್ದ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಭಾಕರ್​ ಅವರನ್ನೂ ಎನ್​ಸಿಬಿ ಅಧಿಕಾರಿಗಳು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದರು.  ಇವರೊಬ್ಬ ಸ್ವತಂತ್ರ ಸಾಕ್ಷಿಯಾಗಿದ್ದಿದ್ದು, ಇನ್ನೊಬ್ಬ ಸಾಕ್ಷಿದಾರ ಕಿರಣ್​ ಗೋಸಾವಿ ಮತ್ತು ಈ ಪ್ರಕರಣ ಬೇಧಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ  ಸಮೀರ್ ವಾಂಖೆಡೆ (ಆಗ ಎನ್​ಸಿಬಿಯ ಅಧಿಕಾರಿಯಾಗಿದ್ದರು) ವಿರುದ್ಧವೂ ಆರೋಪ ಮಾಡಿದ್ದರು. ಎನ್​ಸಿಬಿ ಅಧಿಕಾರಿಗಳು ಸುಮಾರು 10 ಖಾಲಿ ಪೇಪರ್​ಗಳಿಗೆ ನನ್ನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಸುಮಾರು 25 ಕೋಟಿ ರೂಪಾಯಿ ವಸೂಲಿ ಮಾಡಿದ ಬಗ್ಗೆ ನಡೆದ ದೂರವಾಣಿ ಸಂಭಾಷಣೆಯನ್ನೂ ನಾನು ಕೇಳಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲ, ಕಿರಣ್​ ಗೋಸಾವಿಗೆ ತಾನು ಬಾಡಿಗಾರ್ಡ್ ಆಗಿದ್ದೆ, ಆದರೆ ಅವರ ಬಳಿ ಕೆಲಸ ಮಾಡುತ್ತಿದ್ದ ಇನ್ನಿತರರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಪ್ರಭಾಕರ್ ಹೇಳಿಕೊಂಡಿದ್ದರು.

ಕಿರಣ್​ ಗೋಸಾವಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು. ಆದರೆ ನಂತರ ಇವರ ವರುದ್ಧವೇ ಹಣ ಪಡೆದ ಆರೋಪ ಕೇಳಿಬಂದಿತ್ತು. ಮುಂಬೈ ಐಷಾರಾಮಿ ಹಡಗಿನ ಮೇಲೆ ದಾಳಿಯಾಗುತ್ತಿದ್ದಂತೆ ಕಿರಣ್​ ಗೋಸಾವಿ 50 ಲಕ್ಷ ರೂಪಾಯಿ ಪಡೆದಿದ್ದಾಗಿ ಇದೇ ಪ್ರಭಾಕರ್ ಸೇಲ್​ ಆರೋಪ ಮಾಡಿದ್ದರು. ಹೀಗಾಗಿ ಎನ್​ಸಿಬಿ ಪ್ರಭಾಕರ್​ ಅವರನ್ನು ಒಂದು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿಕೊಂಡಿತ್ತು. ಅಂದರೆ ಈ ಪ್ರಕರಣದಲ್ಲಿ ಪ್ರಭಾಕರ್​ ಸೇಲ್​ ತಮ್ಮ ಪರವಾಗಿ ನಿಲ್ಲುತ್ತಾರೆ ಎಂದು ಭಾವಿಸಿದ್ದ ಎನ್​ಸಿಬಿಗೆ ಇವರು ಉಲ್ಟಾ ಹೊಡೆದಿದ್ದರು. ಎನ್​ಸಿಬಿ ವಿರುದ್ಧವೇ ಆರೋಪವನ್ನು ಮಾಡಿದ್ದರು.

ಇದನ್ನೂ ಓದಿ: ವೇದಿಕಾಗೆ ಯಾವ ರೀತಿಯ ಗಂಡ ಬೇಕು? ಮುಕ್ತವಾಗಿ ಹೇಳಿಕೊಂಡ ‘ಹೋಮ್​ ಮಿನಿಸ್ಟರ್​’ ನಾಯಕಿ

Published On - 9:28 am, Sat, 2 April 22

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು