ಲೈಫ್ ಪಾರ್ಟ್ನರ್ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಎಲ್ಲರೂ ಹತ್ತು ಹಲವು ಕಂಡೀಷನ್ ಹಾಕುತ್ತಾರೆ. ಸೆಲೆಬ್ರಿಟಿಗಳು ಕೂಡ ಇದಕ್ಕೆ ಹೊರತಲ್ಲ. ತಮಗೆ ಯಾವ ರೀತಿಯ ಪತಿ ಬೇಕು ಎಂಬ ಬಗ್ಗೆ ನಟಿ ವೇದಿಕಾ
(Vedhika) ಅವರು ಮಾತನಾಡಿದ್ದಾರೆ. ಬಹುಭಾಷೆಯಲ್ಲಿ ವೇದಿಕಾ ಮಿಂಚುತ್ತಿದ್ದಾರೆ. ಸಿನಿಮಾ ಮತ್ತು ಪಾತ್ರಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಸಖತ್ ಚ್ಯೂಸಿ. ಉಪೇಂದ್ರ (Upendra) ಜೊತೆ ವೇದಿಕಾ ನಟಿಸಿರುವ ‘ಹೋಮ್ ಮಿನಿಸ್ಟರ್’ ಸಿನಿಮಾ (Home Minister Movie) ಬಿಡುಗಡೆ ಆಗಿದೆ. ಎಲ್ಲರ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ ಅವರು ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ತಮಗೆ ಯಾವ ರೀತಿಯ ಪತಿ ಬೇಕು ಎಂಬುದನ್ನು ವೇದಿಕಾ ತಿಳಿಸಿದರು. ಇಡೀ ತಂಡದ ಜೊತೆ ಸಿನಿಮಾ ವೀಕ್ಷಿಸಿದ್ದಕ್ಕೆ ಅವರು ಖುಷಿ ಆಗಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯಿಸಿ ಸಿಕ್ಕಿದೆ ಎಂದು ಅವರು ಸಂತವ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಹಿಜಾಬ್ ಗೆಟಪ್ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು ಏಕೆ? ಇದು ‘ಹೋಮ್ ಮಿನಿಸ್ಟರ್’ ವಿಷಯ
‘ಮೊದಲ ಮೆಸೇಜ್ನಲ್ಲೇ ಮದ್ವೆ ಆಗ್ತೀನಿ ಎಂದಿದ್ದೆ’; ಬೆಸ್ಟ್ ಫ್ರೆಂಡ್ನೇ ಮದುವೆ ಆದ ಕಥೆ ಹೇಳಿದ ನಟ ರಕ್ಷ್