ರಾಗಿಣಿ ದ್ವಿವೇದಿ ಯುಗಾದಿ ಸ್ಪೆಷಲ್; ಹಬ್ಬದ ಸಂಭ್ರಮದಲ್ಲಿ ಸೀರೆ ಧರಿಸಿ ಮಿಂಚಿದ ‘ತುಪ್ಪದ ಬೆಡಗಿ’
ಯುಗಾದಿ ಹಬ್ಬದ ಪ್ರಯುಕ್ತ ನಟಿ ರಾಗಿಣಿ ದ್ವಿವೇದಿ ಅವರು ಸೀರೆ ಧರಿಸಿ ಮಿಂಚಿದ್ದಾರೆ. ಫೋಟೋಶೂಟ್ ಸಲುವಾಗಿ ಅವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಎಲ್ಲೆಲ್ಲೂ ಯುಗಾದಿ (Ugadi 2022) ಹಬ್ಬದ ಸಂಭ್ರಮ ಮನೆ ಮಾಡಿದೆ. ಬೇವು-ಬೆಲ್ಲ ತಿಂದು ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತಿದೆ. ಮನೆ ಮನೆಗಳಲ್ಲೂ ತೋರಣಗಳು ಕಂಗೊಳಿಸುತ್ತಿವೆ. ರಂಗು-ರಂಗಾದ ರಂಗೋಲಿಯ ಚಿತ್ತಾರದಿಂದಾಗಿ ಹಬ್ಬದ ಕಳೆ ಹೆಚ್ಚಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಯುಗಾದಿ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಈ ಬಾರಿಯನ್ನು ಹಬ್ಬವನ್ನು ಸಂಭ್ರಮಿಸಿದ್ದಾರೆ. ಸೀರೆ ಧರಿಸಿ ಫೋಟೋಶೂಟ್ ಮಾಡಿಸುವ ಮೂಲಕ ರಾಗಿಣಿ ಅವರು ಖುಷಿಪಟ್ಟಿದ್ದಾರೆ. ಅದರ ಮೇಕಿಂಗ್ ವಿಡಿಯೋ ಇಲ್ಲಿದೆ. ಸದಾ ಕಾಲ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಇರುವ ಕಲಾವಿದರಿಗೆ ಫ್ಯಾಮಿಲಿ ಜೊತೆ ಸಮಯ ಕಳೆಯುವ ಅವಕಾಶ ಸಿಗೋದು ಕಡಿಮೆ. ಆದರೆ ಹಬ್ಬದ ಸಂದರ್ಭದಲ್ಲಿ ಶೂಟಿಂಗ್, ಡಬ್ಬಿಂಗ್ ಇತ್ಯಾದಿ ಕೆಲಸಕ್ಕೆ ಬ್ರೇಕ್ ನೀಡಿ ಬಹುತೇಕ ಸೆಲೆಬ್ರಿಟಿಗಳು ಯುಗಾದಿ ಹಬ್ಬ (Ugadi Festival) ಆಚರಿಸುತ್ತಿದ್ದಾರೆ.
ಇದನ್ನೂ ಓದಿ:
ತಮಿಳು ಸಿನಿಮಾದಲ್ಲಿ ರಾಗಿಣಿ ದ್ವಿವೇದಿ; ತುಪ್ಪದ ಬೆಡಗಿಯ ಹೊಸ ಚಿತ್ರಕ್ಕೆ ಶೂಟಿಂಗ್ ಶುರು