Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?

India Vs Pakistan: ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯವನ್ನು ನೋಡಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಶಾರುಖ್ ಖಾನ್​ ಕೂಡ ತಮ್ಮ ಅನಿಸಿಕೆ ತಿಳಿಸಿದ್ದಾರೆ.

Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
ಶಾರುಖ್ ಖಾನ್, ವಿರಾಟ್ ಕೊಹ್ಲಿ
Follow us
TV9 Web
| Updated By: ಮದನ್​ ಕುಮಾರ್​

Updated on: Oct 24, 2022 | 12:43 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಭರ್ಜರಿ ಕಮ್​ಬ್ಯಾಕ್​ ಮಾಡುವ ಉತ್ಸಾಹದಲ್ಲಿದ್ದಾರೆ. ಅವರಿಗೆ ಕ್ರಿಕೆಟ್​ ಬಗ್ಗೆಯೂ ಸಖತ್​ ಆಸಕ್ತಿ ಇದೆ. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup)​ ನಡೆಯುತ್ತಿದೆ. ಭಾನುವಾರ (ಅ.23) ನಡೆದ ಪಂದ್ಯದಲ್ಲಿ ವಿರಾಟ ಕೊಹ್ಲಿ (Virat Kohli) ಪರಾಕ್ರಮ ಮೆರೆದಿದ್ದಾರೆ. ಅವರು ಬ್ಯಾಟ್​ ಬೀಸಿದ ವೈಖರಿಗೆ ಎಂಥವರೂ ಸೆಲ್ಯೂಟ್​ ಹೊಡೆಯಲೇಬೇಕು. ಇನ್ನೇನು ಕೈ ತಪ್ಪಿಹೋಯಿತು ಎಂಬಂತಿದ್ದ ಪಂದ್ಯವನ್ನು ಗೆಲುವಿನ ದಡಕ್ಕೆ ಸೇರಿಸಿದ ವಿರಾಟ್​ ಕೊಹ್ಲಿಗೆ ಎಲ್ಲರೂ ಭೇಷ್​ ಎಂದಿದ್ದಾರೆ. ಶಾರುಖ್​ ಖಾನ್​ ಕೂಡ ಕೊಹ್ಲಿ ಆಟಕ್ಕೆ ಮನಸೋತಿದ್ದಾರೆ. ಈ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಶಾರುಖ್​ ಖಾನ್​ ಅವರು ಟ್ವಿಟರ್​ನಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಇಂಡಿಯಾ-ಪಾಕಿಸ್ತಾನ ಪಂದ್ಯ ನೋಡಿ ಖುಷಿ ಆಗಿರುವ ಅವರು, ಭಾರತದ ಆಟಗಾರರನ್ನು ಮನಸಾರೆ ಹೊಗಳಿದ್ದಾರೆ. ಭಾರತ ಗೆದ್ದಾಗ ಸ್ಟೇಡಿಯಂನಲ್ಲಿ ಮೊಳಗಿದ ‘ಚಕ್​ ದೇ ಇಂಡಿಯಾ..’ ಹಾಡಿನಿಂದಾಗಿ ಶಾರುಖ್​ಗೆ ಇನ್ನಷ್ಟು ರೋಮಾಂಚನ ಆಗಿದೆ. ಆ ಬಗ್ಗೆಯೂ ಅವರು ಟ್ವೀಟ್​ನಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಇದನ್ನೂ ಓದಿ
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ
Image
Shah Rukh Khan: ಶಾರುಖ್​ ಖಾನ್​ ಮನೆಯಲ್ಲಿ ಗಣೇಶ ಚತುರ್ಥಿ; ಮೋದಕ ತಿಂದು ನಟ ಹೇಳಿದ್ದೇನು?
Image
Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು

‘ಕ್ರಿಕೆಟ್​ನ ಈ ಅತ್ಯುತ್ತಮ ಪಂದ್ಯ ನೋಡಲು ಖುಷಿ ಆಯಿತು. ಭಾರತದ ಗೆಲುವನ್ನು ನೋಡಿ ಅದ್ಭುತ ಎನಿಸಿತು. ವಿರಾಟ್​ ಕೊಯ್ಲಿ ಅವರದ್ದು ಬ್ರಿಲಿಯಂಟ್​ ಬ್ಯಾಟಿಂಗ್​. ಅವರ ನಗು-ಅಳುವನ್ನು ನೋಡುವುದು ಸ್ಫೂರ್ತಿದಾಯಕವಾಗಿತ್ತು. ಹಿನ್ನೆಲೆಯಲ್ಲಿ ಚಕ್​ ದೇ ಇಂಡಿಯಾ ಹಾಡು! ಖುಷಿಯ ದೀಪಾವಳಿ ಈಗ ಶುರು ಆಯಿತು’ ಎಂದು ಶಾರುಖ್​ ಖಾನ್​ ಟ್ವೀಟ್​ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಶಾರುಖ್​ ಖಾನ್​ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಅವರು ನಟಿಸಿದ ‘ಜೀರೋ’ ಸಿನಿಮಾ 2018ರಲ್ಲಿ ಬಿಡುಗಡೆಯಾಗಿ ಸೋತಿತು. ಆ ಬಳಿಕ ಅವರ ಯಾವುದೇ ಚಿತ್ರ ತೆರೆಕಂಡಿಲ್ಲ. ಈಗ ಅವರು ಬ್ಯಾಕ್​ ಟು ಬ್ಯಾಕ್​ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. 2023ರಲ್ಲಿ ಅವರ ಮೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಲಿವೆ. ಹಾಗಾಗಿ 2023ರ ಪೂರ್ತಿ ವರ್ಷ ಶಾರುಖ್​ ಪಾಲಿಗೆ ವಿಶೇಷವಾಗಿರಲಿದೆ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ತುರ್ತಾಗಿ ಒಂದು ಗೆಲುವು ಪಡೆಯಬೇಕು ಎಂಬ ಕಾರಣಕ್ಕೆ ಶಾರುಖ್​ ಖನ್​ ಅವರು ಒಳ್ಳೊಳ್ಳೆಯ ನಿರ್ದೇಶಕ ಜೊತೆ ಕೈ ಜೋಡಿಸುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್​ ಡೈರೆಕ್ಟರ್​ ಅಟ್ಲಿ ಜೊತೆ ‘ಜವಾನ್​’, ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜೊತೆ ‘ಡಂಕಿ’ ಹಾಗೂ ಸಿದ್ದಾರ್ಥ್​ ಆನಂದ್​ ಜೊತೆ ‘ಪಠಾಣ್​’ ಚಿತ್ರವನ್ನು ಶಾರುಖ್ ಮಾಡುತ್ತಿದ್ದಾರೆ. ಈ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ