Ram Setu Twitter Review: ‘ರಾಮ್​ ಸೇತು’ ಟ್ವಿಟರ್​ ವಿಮರ್ಶೆ: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಜನರಿಂದ ಸಿಕ್ತಾ ಪ್ರಶಂಸೆ?

Akshay Kumar | Ram Setu: ಬೆಳಕಿನ ಹಬ್ಬದ ಮೆರುಗು ಹೆಚ್ಚಿಸಲು ‘ರಾಮ್​ ಸೇತು’ ಚಿತ್ರ ಬಿಡುಗಡೆ ಆಗಿದೆ. ಅಕ್ಷಯ್​ ಕುಮಾರ್ ಅಭಿಮಾನಿಗಳು ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Ram Setu Twitter Review: ‘ರಾಮ್​ ಸೇತು’ ಟ್ವಿಟರ್​ ವಿಮರ್ಶೆ: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಜನರಿಂದ ಸಿಕ್ತಾ ಪ್ರಶಂಸೆ?
‘ರಾಮ್ ಸೇತು’ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on:Oct 25, 2022 | 12:10 PM

ದೀಪಾವಳಿ ಹಬ್ಬದ ಪ್ರಯುಕ್ತ ಇಂದು (ಅಕ್ಟೋಬರ್​ 25) ‘ರಾಮ್​ ಸೇತು’ (Ram Setu) ಸಿನಿಮಾ ರಿಲೀಸ್​ ಆಗಿದೆ. ರಾಮಾಯಣದ ಕಥೆಯಲ್ಲಿ ಬರುವ ರಾಮ ಸೇತು ವಿಚಾರವನ್ನೇ ಇಟ್ಟುಕೊಂಡು  ಈ ಸಿನಿಮಾ ಮಾಡಲಾಗಿದೆ. ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಈ ಸಿನಿಮಾದಿಂದ ತುರ್ತಾಗಿ ಗೆಲ್ಲುವ ಅನಿವಾರ್ಯತೆ ಇದೆ. ‘ರಾಮ್​ ಸೇತು’ ಚಿತ್ರಕ್ಕೆ ಹೇಳಿಕೊಳ್ಳುವಷ್ಟು ಒಳ್ಳೆಯ ಮಟ್ಟದಲ್ಲಿ ಅಡ್ವಾನ್ಸ್​ ಬುಕಿಂಗ್​ ಆಗಿರಲಿಲ್ಲ. ಮೊದಲ ದಿನ ಮೊದಲ ಶೋ ನೋಡಿ ಬಂದಿರುವ ಪ್ರೇಕ್ಷಕರು ಟ್ವಿಟರ್​ (Ram Setu Twitter Review) ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಇದು ಬೆಸ್ಟ್​ ಉಡುಗೊರೆ ಎಂದು ಕೆಲವರು ಹೊಗಳುತ್ತಿದ್ದಾರೆ.

ಯಾವುದೇ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ತುಂಬ ಮುಖ್ಯವಾಗುತ್ತದೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿ ಅಭಿಮಾನಿಗಳು ‘ಸಿನಿಮಾ ಚೆನ್ನಾಗಿದೆ’ ಎಂದು ಹೇಳಿದರೆ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ‘ರಾಮ್​ ಸೇತು’ ಚಿತ್ರಕ್ಕೆ ಮೊದಲ ದಿನವೇ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ
Image
Akshay Kumar: ಸತತ ಸೋಲು ಕಂಡರೂ ಅಕ್ಷಯ್​ ಕುಮಾರ್​ ನಂ.1; ಇದು ಯಾವ ಲೆಕ್ಕಾಚಾರ?
Image
Cuttputlli: ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಗೆಲುವು; ಪೂರ್ತಿ ಬದಲಾಗುತ್ತಾ ಸ್ಟಾರ್​ ನಟನ ಭವಿಷ್ಯದ ಪ್ಲ್ಯಾನ್​?
Image
Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು
Image
Cuttputlli: ತಪ್ಪು ತಿದ್ದಿಕೊಂಡ ಅಕ್ಷಯ್​ ಕುಮಾರ್​; ಒಂದು ನಿರ್ಧಾರದಿಂದ ಆಯ್ತು ನೂರಾರು ಕೋಟಿ ರೂ. ಲಾಭ

ಅಭಿಷೇಕ್​ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ಜೊತೆಗೆ ಜಾಕ್ವೆಲಿನ್​ ಫರ್ನಾಂಡಿಸ್​, ನುಸ್ರತ್​ ಬರುಚಾ ಮುಂತಾದವರು ನಟಿಸಿದ್ದಾರೆ. ‘ಈ ಕಥೆ ಅಡ್ವೆಂಚರಸ್​ ಆಗಿದೆ. ಅಕ್ಷಯ್​ ಕುಮಾರ್​ ಅವರ ಎನರ್ಜಿ ಸೂಪರ್​’ ಎಂದು ಅಭಿಮಾನಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.

‘ಅಕ್ಷಯ್​ ಕುಮಾರ್​ ಅವರ ಎಂಟ್ರಿ ಸೂಪರ್​ ಆಗಿದೆ. ಅವರು ಮತ್ತೆ ಮೊದಲಿನ ಟ್ರ್ಯಾಕ್​ಗೆ ಮರಳಿದ್ದಾರೆ. ಈ ಸಿನಿಮಾದಲ್ಲಿ ಗ್ರಾಫಿಕ್ಸ್​ ಗುಣಮಟ್ಟ ಕೂಡ ಚೆನ್ನಾಗಿದೆ’ ಎಂದು ಪ್ರೇಕ್ಷಕರೊಬ್ಬರು ಹೊಗಳಿದ್ದಾರೆ. ಅನೇಕರು ಈ ಚಿತ್ರಕ್ಕೆ 4 ಸ್ಟಾರ್​ ನೀಡಿದ್ದಾರೆ.

ಈವರೆಗೂ ಹಲವು ಬಗೆಯ ಪಾತ್ರಗಳನ್ನು ಮಾಡಿ ಅಕ್ಷಯ್​ ಕುಮಾರ್​ ಸೈ ಎನಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಇತ್ತೀಚೆಗೆ ಅವರ ಸಿನಿಮಾಗಳು ಸತತವಾಗಿ ಸೋತಿದ್ದು ಬೇಸರದ ಸಂಗತಿ. ‘ಬಚ್ಚನ್ ಪಾಂಡೆ’, ‘ರಕ್ಷಾ ಬಂಧನ್​’ ಹಾಗೂ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಿರಲಿಲ್ಲ. ಈಗ ಆ ಬೇಸರವನ್ನು ಮರೆಸುವ ರೀತಿಯಲ್ಲಿ ‘ರಾಮ್​ ಸೇತು’ ಸಿನಿಮಾ ಎಂಟ್ರಿ ನೀಡಿದೆ. ಅಂತಿಮವಾಗಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

‘ರಾಮ್​ ಸೇತು’ ಚಿತ್ರಕ್ಕೆ ಪೈಪೋಟಿ ನೀಡಲು ಅಜಯ್​ ದೇವಗನ್​ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ ನಟನೆಯ ‘ಥ್ಯಾಂಕ್​ ಗಾಡ್​’ ಸಿನಿಮಾ ರಿಲೀಸ್​ ಆಗಿದೆ. ಇದರಿಂದ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್ ಆಗಿದೆ. ದೀಪಾವಳಿ ಹಬ್ಬದ ರಜಾ ದಿನಗಳನ್ನು ಎನ್​ಕ್ಯಾಶ್​ ಮಾಡಿಕೊಳ್ಳಲು ಈ ಸಿನಿಮಾಗಳು ಹಣಾಹಣಿ ನಡೆಸುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:10 pm, Tue, 25 October 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ