Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು

Akshay Kumar | Dowry Controversy: ಅಕ್ಷಯ್​ ಕುಮಾರ್​ ಪಾಲಿಗೆ ಈ ವರ್ಷ ತುಂಬ ನಿರಾಶಾದಾಯಕ ಆಗಿದೆ. ಮಾಡಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಜಾಹೀರಾತುಗಳು ಕೂಡ ವಿವಾದಕ್ಕೆ ಸಿಲುಕಿವೆ.

Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು
ಅಕ್ಷಯ್ ಕುಮಾರ್ ನಟಿಸಿದ ಜಾಹೀರಾತು
Follow us
| Updated By: ಮದನ್​ ಕುಮಾರ್​

Updated on:Sep 13, 2022 | 8:28 AM

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಇತ್ತೀಚೆಗೆ ಗುಟ್ಕಾ ಜಾಹೀರಾತಿನಲ್ಲಿ ನಟಿಸಿ ಜನರಿಂದ ಟೀಕೆಗೆ ಒಳಗಾದ ಘಟನೆ ಇನ್ನೂ ಹಸಿಯಾಗಿದೆ. ಅಷ್ಟರಲ್ಲಾಗಲೇ ಅವರ ಇನ್ನೊಂದು ಜಾಹೀರಾತು (Akshay Kumar Advertisement) ಕೂಡ ವಿವಾದ ಹುಟ್ಟುಹಾಕಿದೆ. ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಒಂದು ಜಾಹೀರಾತು ನಿರ್ಮಾಣ ಮಾಡಲಾಗಿದೆ. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಿರ್ಮಾಣವಾದ ಈ ಜಾಹೀರಾತಿನಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ವಿಪರ್ಯಾಸ ಏನೆಂದರೆ, ಇದು ವರದಕ್ಷಿಣಿ (Dowry) ಪಿಡುಗನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಮೂಡಿಬಂದಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಅಕ್ಷಯ್​ ಕುಮಾರ್​ ಅವರನ್ನು ಹಿಗ್ಗಾಮುಗ್ಗ ಟ್ರೋಲ್​ ಮಾಡಲಾಗುತ್ತಿದೆ.

ರಸ್ತೆ ಸುರಕ್ಷತೆ ಕುರಿತ ಜಾಹೀರಾತಿನಲ್ಲಿ ವರದಕ್ಷಿಣೆ ವಿಚಾರ ಹೇಗೆ ಬಂತು ಪ್ರಶ್ನೆಗೆ ಉತ್ತರ ಇಲ್ಲಿದೆ. ಜಾಹೀರಾತಿನ ಕಾನ್ಸೆಪ್ಟ್​ ಈ ರೀತಿ ಇದೆ. ಮಗಳಿಗೆ ಮದುವೆ ಮಾಡಿ, ಅಳಿಯನ ಜೊತೆ ಕಳಿಸುವಾಗ ತಂದೆ ಕಣ್ಣೀರು ಹಾಕುತ್ತ ನಿಂತಿರುತ್ತಾರೆ. ಆಗ ಅಕ್ಷಯ್​ ಕುಮಾರ್ ಬಂದು ಒಂದು ತಕರಾರು ತೆಗೆಯುತ್ತಾರೆ. ‘ಇಂಥ ಕಾರ್​ನಲ್ಲಿ ಮಗಳು ಮತ್ತು ಅಳಿಯನನ್ನು ಕಳಿಸಿಕೊಟ್ಟರೆ ಕಷ್ಟ ಆಗುತ್ತದೆ. ಯಾಕೆಂದರೆ ಇದರಲ್ಲಿ ಎರಡೇ ಏರ್​ ಬ್ಯಾಗ್​ ಇರುವುದು. 6 ಏರ್​ ಬ್ಯಾಗ್​ ಇರುವ ಕಾರಿನಲ್ಲಿ ಕಳಿಸಿಕೊಟ್ಟರೆ ಚಿಂತೆ ಇರುವುದಿಲ್ಲ’ ಎಂದು ಅಕ್ಷಯ್​ ಕುಮಾರ್​ ಹೇಳುತ್ತಾರೆ.

ಇದನ್ನೂ ಓದಿ
Image
ಅಕ್ಷಯ್​ ಕುಮಾರ್​ಗೆ 3ನೇ ಸೋಲು; ಭಾರತ ಬಿಟ್ಟು ಕೆನಡಾಗೆ ಪಲಾಯನ ಮಾಡುವ ಪ್ಲ್ಯಾನ್​ ನೆನಪಿಸಿದ ನೆಟ್ಟಿಗರು
Image
Akshay Kumar: ಸೋದರಿಯನ್ನು ನೆನೆದು ಎಲ್ಲರ ಎದುರು ಕಣ್ಣೀರು ಹಾಕಿದ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​
Image
Akshay Kumar: ಅತಿ ಹೆಚ್ಚು ಟ್ಯಾಕ್ಸ್​ ಪಾವತಿಸಿದ ಅಕ್ಷಯ್​ ಕುಮಾರ್​; ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ
Image
Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ

ಮದುವೆಯಲ್ಲಿ ಹುಡುಗನಿಗೆ ಕಾರನ್ನು ವರದಕ್ಷಿಣೆ ರೂಪದಲ್ಲಿ ನೀಡುವುದನ್ನು ಈ ಜಾಹೀರಾತು ಪ್ರಚೋದಿಸುತ್ತದೆ ಎಂಬ ಆರೋಪ ಎದುರಾಗಿದೆ. ಜನರು ಈ ಬಗ್ಗೆ ಕಟು ಟೀಕೆ ಮಾಡುತ್ತಿದ್ದಾರೆ. ‘ಸರ್ಕಾರದ ಹಣದಲ್ಲಿ ನಿರ್ಮಾಣ ಆಗುವ ಜಾಹೀರಾತಿನಲ್ಲಿ ಇಂಥ ಕಾನ್ಸೆಪ್ಟ್​ಗಳು ಇರಲು ಹೇಗೆ ಸಾಧ್ಯ’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಜಾಹೀರಾತಿನಿಂದ ಅಕ್ಷಯ್​ ಕುಮಾರ್​ ಅವರ ಇಮೇಜ್​ಗೆ ಪೆಟ್ಟು ಬಿದ್ದಂತಾಗಿದೆ.

2022ರ ವರ್ಷ ಅಕ್ಷಯ್​ ಕುಮಾರ್​ ಪಾಲಿಗೆ ತುಂಬ ನಿರಾಶಾದಾಯಕ ಆಗಿದೆ. ಮಾಡಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ‘ಬಚ್ಚನ್​ ಪಾಂಡೆ’, ‘ಸಾಮ್ರಾಟ್​ ಪೃಥ್ವಿರಾಜ್​’, ‘ರಕ್ಷಾ ಬಂಧನ್​’ ಸಿನಿಮಾಗಳು ಸೋತಿವೆ. ನಟಿಸಿದ ಜಾಹೀರಾತುಗಳು ಕೂಡ ವಿವಾದಕ್ಕೆ ಸಿಲುಕಿವೆ. ಮುಂಬರುವ ದಿನಗಳಲ್ಲಿ ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ.

ಹೆದ್ದಾರಿ ಸಚಿವಾಲಯದಿಂದ ನಿರ್ಮಾಣವಾದ ಈ ಜಾಹೀರಾತಿನ ಉದ್ದೇಶ ಒಳ್ಳೆಯದೇ ಇದೆ. ಆದರೆ ಅದನ್ನು ನಿರೂಪಿಸಲು ಬರೆದ ಸ್ಕ್ರಿಪ್ಟ್​ ವಿವಾದಾತ್ಮಕವಾಗಿದೆ. ಇದಕ್ಕೆ ಅಕ್ಷಯ್​ ಕುಮಾರ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:28 am, Tue, 13 September 22

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ