AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ

Akshay Kumar | Politics: ಅಕ್ಷಯ್​ ಕುಮಾರ್​ ಅವರು ರಾಜಕೀಯಕ್ಕೆ ಎಂಟ್ರಿ ನೀಡುವ ಉದ್ದೇಶ ಹೊಂದಿದ್ದರೋ ಇಲ್ಲವೋ ಎಂಬುದು ಕೌತುಕದ ಪ್ರಶ್ನೆ. ‘ಸಾಮಾಜಿಕ ಕಳಕಳಿಯಿಂದ ಏನೆಲ್ಲ ಸಾಧ್ಯವೋ ಅದನ್ನು ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ
ಅಕ್ಷಯ್ ಕುಮಾರ್
TV9 Web
| Updated By: ಮದನ್​ ಕುಮಾರ್​|

Updated on:Jul 05, 2022 | 7:44 AM

Share

ಖ್ಯಾತ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೂರು ದಶಕಗಳ ಅನುಭವವನ್ನು ಇಟ್ಟುಕೊಂಡು ಅವರು ಮುಂದೆ ಸಾಗುತ್ತಿದ್ದಾರೆ. ಇತ್ತೀಚಿನ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣದಿದ್ದರೂ ಅವರಿಗೆ ಇರುವ ಡಿಮ್ಯಾಂಡ್​ ಕಮ್ಮಿ ಆಗಿಲ್ಲ. ಇನ್ನು ಅಕ್ಷಯ್​ ಕುಮಾರ್​ ಅವರು ಅನೇಕ ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಹಣವನ್ನು ಅವರು ಸಮಾಜಕ್ಕಾಗಿ ದೇಣಿಗೆ ನೀಡಿದ್ದುಂಟು. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ನೋಡಿದಾಗ ಅವರಿಗೆ ರಾಜಕೀಯಕ್ಕೆ (Politics) ಬರುವ ಆಲೋಚನೆ ಏನಾದರೂ ಇದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಅಕ್ಷಯ್​ ಕುಮಾರ್​ ಅವರು ನೇರವಾಗಿ ಉತ್ತರಿಸಿದ್ದಾರೆ. ಸದ್ಯಕ್ಕೆ ತಮಗೆ ಸಿನಿಮಾ ಕೆಲಸಗಳಲ್ಲಿ ಖುಷಿ ಇರುವುದಾಗಿ ಅವರು ತಿಳಿಸಿದ್ದಾರೆ. ಅವರ ಮಾತಿನ ಅರ್ಥ ಏನು? ಮುಂದೆ ಓದಿ..

ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿದ ಬಳಿಕ ರಾಜಕೀಯಕ್ಕೆ ಬಂದು ಯಶಸ್ವಿ ಆದವರು ಅನೇಕರಿದ್ದಾರೆ. ಜನರ ಬಗ್ಗೆ ಕಾಳಜಿ ಇರುವ ಹೀರೋಗಳು ರಾಜಕೀಯಕ್ಕೆ ಎಂಟ್ರಿ ನೀಡಲಿ ಎಂಬ ಆಶಯ ಅವರ ಅಭಿಮಾನಿಗಳಿಗೂ ಇರುತ್ತದೆ. ಆದರೆ ಸದ್ಯಕ್ಕಂತೂ ತಾವು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

‘ನಾನು ಸಿನಿಮಾ ಮಾಡುವುದರಲ್ಲಿ ಖುಷಿಯಾಗಿ ಇದ್ದೇನೆ. ಒಬ್ಬ ನಟನಾಗಿ ಸಾಮಾಜಿಕ ಕಳಕಳಿಯಿಂದ ಏನೆಲ್ಲ ಸಾಧ್ಯವೋ ಅದನ್ನು ಮಾಡುತ್ತೇನೆ. ನಾನು 150 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಅದರಲ್ಲಿ ‘ರಕ್ಷಾ ಬಂಧನ್​’ ಸಿನಿಮಾ ನನ್ನ ಮನಸ್ಸಿಗೆ ಹತ್ತಿರವಾಗಿದೆ. ಸಾಮಾಜಿಕ ಕಳಕಳಿ ಇರುವ ಕಮರ್ಷಿಯಲ್​ ಸಿನಿಮಾಗಳನ್ನೂ ನಿರ್ಮಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್​ ಕುಮಾರ್​; ಇದು ಗುಟ್ಕಾ ಎಫೆಕ್ಟ್​ ಎಂದ ನೆಟ್ಟಿಗರು
Image
ಅಜಯ್​ ದೇವಗನ್​ಗೆ ಅಕ್ಷಯ್​ ಕುಮಾರ್ ಬೆಂಬಲ; ‘ಗುಟ್ಕಾ ಗ್ಯಾಂಗ್​’ ಎಂದು ತಿರುಗೇಟು ನೀಡಿದ ನೆಟ್ಟಿಗರು
Image
ವಿಮಲ್​ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್​ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ
Image
ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

ಹಲವು ಕಾರಣಗಳಿಂದಾಗಿ ‘ರಕ್ಷಾ ಬಂಧನ್’​ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಇತ್ತೀಚೆಗೆ ರಿಲೀಸ್​ ಆದ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡುವಲ್ಲಿ ವಿಫಲ ಆಗಿರುವುದರಿಂದ ಅಕ್ಷಯ್​ ಕುಮಾರ್​ ಅವರಿಗೆ ಬಾಕ್ಸ್​ ಆಫೀಸ್​ನಲ್ಲಿ ತುರ್ತಾಗಿ ಒಂದು ಗೆಲುವು ಬೇಕಿದೆ. ‘ರಕ್ಷಾ ಬಂಧನ್​’ ಸಿನಿಮಾ ಆಗಸ್ಟ್​ 11ರಂದು ಬಿಡುಗಡೆ ಆಗಲಿದೆ. ಅದೇ ದಿನ ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಕೂಡ ಬಿಡುಗಡೆ ಆಗುತ್ತಿರುವುದರಿಂದ ಎರಡೂ ಸಿನಿಮಾಗಳ ನಡುವೆ ಕ್ಲ್ಯಾಶ್​ ಏರ್ಪಡಲಿದೆ.

ಇದನ್ನೂ ಓದಿ: Akshay Kumar: ಅಕ್ಷಯ್​ ಕುಮಾರ್​ ನಕಲಿ ಮೀಸೆಯೇ ‘ಸಾಮ್ರಾಟ್​ ಪೃಥ್ವಿರಾಜ್​’ ಸೋಲಿಗೆ ಕಾರಣ? ಹೊಸ ಆರೋಪ

ಆಗಸ್ಟ್​ 11ಕ್ಕೆ ಆಮಿರ್​ ಖಾನ್​ ವರ್ಸಸ್​ ಅಕ್ಷಯ್​ ಕುಮಾರ್​; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?

Published On - 7:44 am, Tue, 5 July 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ