ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದ ರಣವೀರ್ ಸಿಂಗ್​; ವಿಚಿತ್ರ ಕಾರಣ ವಿವರಿಸಿದ ದೀಪಿಕಾ ಪಡುಕೋಣೆ

ಕೊಂಕಣಿ ಸಮುದಾಯದವರು ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಅವರು ಕೊಂಕಣಿ ಕಲಿಯುವ ವಿಚಾರದ ಕುರಿತು ಹೇಳಿಕೊಂಡರು.

ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದ ರಣವೀರ್ ಸಿಂಗ್​; ವಿಚಿತ್ರ ಕಾರಣ ವಿವರಿಸಿದ ದೀಪಿಕಾ ಪಡುಕೋಣೆ
ರಣವೀರ್-ದೀಪಿಕಾ
TV9kannada Web Team

| Edited By: Rajesh Duggumane

Jul 05, 2022 | 2:36 PM

ನಟಿ ದೀಪಿಕಾ ಪಡುಕೋಣೆ (Deepika Padukone) ಕರ್ನಾಟಕದವರು. ಅವರ ಮಾತೃಭಾಷೆ ಕೊಂಕಣಿ. ಅವರು ಕೊಂಕಣಿಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ದೀಪಿಕಾ ಈಗ ಬಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ. ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಸಂಸಾರವನ್ನೂ ಅವರು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಈಗ ದೀಪಿಕಾ ಪಡುಕೋಣೆ ಅವರು ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ರಣವೀರ್ ಸಿಂಗ್ (Ranveer Singha) ಅವರಿಗೆ ಕೊಂಕಣಿ ಕಲಿಯಬೇಕು ಎನ್ನುವ ಆಸೆ ಇದೆಯಂತೆ. ಇದಕ್ಕೆ ಕಾರಣ ಏನು ಎಂಬುದನ್ನು ದೀಪಿಕಾ ವಿವರಿಸಿದ್ದಾರೆ

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಅಮೆರಿಕದಲ್ಲಿದ್ದಾರೆ. ಕೊಂಕಣಿ ಸಮುದಾಯದವರು ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಅವರು ಕೊಂಕಣಿ ಕಲಿಯುವ ವಿಚಾರದ ಕುರಿತು ಹೇಳಿಕೊಂಡರು. ‘ನಾನು ಕೊಂಕಣಿಯನ್ನು ಅರ್ಥಮಾಡಿಕೊಳ್ಳುತ್ತೇನೆ. ಇದರ ಹಿಂದೆ ಒಂದು ಕಾರಣವಿದೆ. ನನಗೆ ಮಕ್ಕಳು ಹುಟ್ಟಿದ ನಂತರ ದೀಪಿಕಾ ಹಾಗೂ ಮಕ್ಕಳು ಕೊಂಕಣಿಯಲ್ಲಿ ಮಾತನಾಡಿದರೆ ನನಗೆ ಅರ್ಥವಾಗದಿದ್ದರೆ ಎನ್ನುವ ಭಯ ಅಷ್ಟೇ’ ಎಂದಿದ್ದಾರೆ ರಣವೀರ್ ಸಿಂಗ್.

ನಂತರ ದೀಪಿಕಾ ಮಾತು ಮುಂದುವರಿಸಿದರು. ‘ರಣವೀರ್ ನನ್ನ ಬಳಿ ಬಂದು ನನಗೆ ಕೊಂಕಣಿ ಕಲಿಯಬೇಕು ಎಂಬ ಆಸೆ ಇದೆ ಎಂದರು. ನಾನು ಖುಷಿಪಟ್ಟೆ. ಆದರೆ, ಇದಕ್ಕೆ ಅವರು ಕಾರಣ ವಿವರಿಸಿದ್ದು ಅಚ್ಚರಿ ಮೂಡಿಸಿತ್ತು. ರಣವೀರ್​ಗೆ ನಿಜಕ್ಕೂ ಕೊಂಕಣಿ ಕಲಿಯಬೇಕು ಎಂಬುದಿಲ್ಲ. ಆದರೆ, ನಮ್ಮ ಮಕ್ಕಳು ಅವರ ವಿರುದ್ಧ ತಿರುಗಿಬೀಳದೇ ಇರಲಿ ಎಂಬ ಉದ್ದೇಶ ಅಷ್ಟೇ’ ಎಂದಿದ್ದಾರೆ ದೀಪಿಕಾ.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 2018ರಲ್ಲಿ ಮದುವೆ ಆದರು. ಇಟಲಿಯಲ್ಲಿ ಇಬ್ಬರು ಹಸೆಮಣೆ ಏರಿದರು. ಅವರು ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಮದುವೆ ಆದರು. ದೀಪಿಕಾ ಪಡುಕೋಣೆ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘83’ ಚಿತ್ರದಲ್ಲಿ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಕೂಡ ನಟಿಸಿದ್ದರು. ಆದರೆ, ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಫೈಟರ್’ ಚಿತ್ರದಲ್ಲಿ ದೀಪಿಕಾ ಅವರು ಹೃತಿಕ್​ ರೋಷನ್​ಗೆ ಜತೆಯಾಗಿ ನಟಿಸುತ್ತಿದ್ದಾರೆ. ರಣವೀರ್ ಸಿಂಗ್ ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ?

ಇದನ್ನೂ ಓದಿ

ಹೈದರಾಬಾದ್​ನಲ್ಲಿ ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ಓಡಿದ ದೀಪಿಕಾ ಪಡುಕೋಣೆ; ಅಂಥದ್ದೇನಾಯ್ತು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada