AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brahmastra: ಮಾಜಿ ಪ್ರೇಮಿಯ ಸಿನಿಮಾದಲ್ಲಿ ದೀಪಿಕಾ ಕದ್ದುಮುಚ್ಚಿ ನಟನೆ? ಝೂಮ್​ ಮಾಡಿ ಸಾಕ್ಷಿ ತೋರಿಸಿದ ನೆಟ್ಟಿಗರು

Brahmastra 4k Trailer | Deepika Padukone:‘ಬ್ರಹ್ಮಾಸ್ತ್ರ’ ಟ್ರೇಲರ್​ನ 4k ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರಿಗೆ ದೀಪಿಕಾ ಪಡುಕೋಣೆ ಕಾಣಿಸಿದ್ದಾರೆ ಎನ್ನಲಾಗುತ್ತಿದೆ.

Brahmastra: ಮಾಜಿ ಪ್ರೇಮಿಯ ಸಿನಿಮಾದಲ್ಲಿ ದೀಪಿಕಾ ಕದ್ದುಮುಚ್ಚಿ ನಟನೆ? ಝೂಮ್​ ಮಾಡಿ ಸಾಕ್ಷಿ ತೋರಿಸಿದ ನೆಟ್ಟಿಗರು
‘ಬ್ರಹ್ಮಾಸ್ತ್ರ’ ಟ್ರೇಲರ್​ನ ಸ್ಕ್ರೀನ್ ಶಾಟ್
TV9 Web
| Updated By: ಮದನ್​ ಕುಮಾರ್​|

Updated on:Jun 20, 2022 | 12:08 PM

Share

ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ವೈಯಕ್ತಿಕ ಜೀವನದ ಅನೇಕ ವಿಚಾರಗಳು ಗುಟ್ಟಾಗಿ ಉಳಿದಿಲ್ಲ. ರಣಬೀರ್​ ಕಪೂರ್​ ಜೊತೆ ಪ್ರೀತಿಯಲ್ಲಿ ಮುಳುಗಿದ್ದ ಅವರು ನಂತರ ಬ್ರೇಕಪ್​ ಮಾಡಿಕೊಂಡರು. ಬಳಿಕ ರಣವೀರ್​ ಸಿಂಗ್ ಜೊತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಾಗಂತ ಮಾಜಿ ಪ್ರಿಯಕರ ರಣಬೀರ್​ ಕಪೂರ್​ (Ranbir Kapoor) ಬಗ್ಗೆ ಅವರಿಗೆ ಯಾವುದೇ ವೈಮನಸ್ಸು ಇಲ್ಲ. ಅಚ್ಚರಿ ಏನೆಂದರೆ ಈಗ ಅವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದಾರಾ ಎಂಬ ಅನುಮಾನ ಸೃಷ್ಟಿ ಆಗಿದೆ. ಅದು ಕೂಡ ಕದ್ದು ಮುಚ್ಚಿ ಅಭಿನಯಿಸಿದ್ದಾರೆ ಎಂಬ ಗುಮಾನಿ ಶುರುವಾಗಿದೆ. ಅದಕ್ಕೆಲ್ಲ ಕಾರಣ ಆಗಿರುವುದು ‘ಬ್ರಹ್ಮಾಸ್ತ್ರ’ (Brahmastra) ಚಿತ್ರದ ಟ್ರೇಲರ್​. ರಣಬೀರ್ ಕಪೂರ್​ ಹೀರೋ ಆಗಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ ಎಂದು ಚಿತ್ರತಂಡ ಈವರೆಗೂ ಬಹಿರಂಗವಾಗಿ ಹೇಳಿಲ್ಲ. ಆದರೆ ಟ್ರೇಲರ್​ನಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ ಎಂಬುದನ್ನು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.

‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಫ್ಯಾಂಟಸಿ ಕಥೆ ಇದೆ. ಮೂರು ಪಾರ್ಟ್​ಗಳಲ್ಲಿ ಇದು ಮೂಡಿಬರುತ್ತಿದೆ. ಮೊದಲ ಪಾರ್ಟ್​ಗೆ ‘ಬ್ರಹ್ಮಾಸ್ತ್ರ ಪಾರ್ಟ್​ 1: ಶಿವ’ ಎಂದು ಹೆಸರು ಇಡಲಾಗಿದೆ. ಈ ಚಿತ್ರದಲ್ಲಿ ಶಿವನಾಗಿ ರಣಬೀರ್​ ಕಪೂರ್​ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಇದರ ಟ್ರೇಲರ್​ ಬಿಡುಗಡೆ ಆಗಿತ್ತು. ಆಗ ಅದರಲ್ಲಿ ಯಾರಿಗೂ ದೀಪಿಕಾ ಪಡುಕೋಣೆ ಕಾಣಿಸಿರಲಿಲ್ಲ. ಈಗ ಇದೇ ಟ್ರೇಲರ್​ನ 4k ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರಿಗೆ ದೀಪಿಕಾ ಪಡುಕೋಣೆ ಕಣ್ಣಿಗೆ ಬಿದ್ದಿದ್ದಾರೆ.

ಇದನ್ನೂ ಓದಿ
Image
​‘ಬ್ರಹ್ಮಾಸ್ತ್ರ’ ಟ್ರೇಲರ್​ನಲ್ಲಿ ಗಮನ ಸೆಳೆದ ಪಾತ್ರವರ್ಗ; ಆಲಿಯಾ, ರಣಬೀರ್​ ಜತೆ ಬಚ್ಚನ್​, ನಾಗಾರ್ಜುನ ಮಿಂಚಿಂಗ್​
Image
Brahmastra Trailer: ಬೆಂಕಿಯೂ ಸುಡಲಾರದ ವ್ಯಕ್ತಿಯ ಪಾತ್ರದಲ್ಲಿ ರಣಬೀರ್​ ಕಪೂರ್​; ಹೇಗಿದೆ ‘ಬ್ರಹ್ಮಾಸ್ತ್ರ’ ಟ್ರೇಲರ್​?
Image
ಆಲಿಯಾ-ರಣಬೀರ್​ ಜತೆಯಾಗಿ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪಡೆದ ಸಂಬಳ 42 ಕೋಟಿ ರೂ; ಇದರಲ್ಲಿ ಯಾರ ಪಾಲು ಹೆಚ್ಚು?
Image
ಕನ್ನಡದಲ್ಲಿ ಟ್ವೀಟ್​ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್​ ಡೇಟ್​ ತಿಳಿಸಿದ ಆಲಿಯಾ ಭಟ್​; ಶಿವನ ಗೆಟಪ್​ನಲ್ಲಿ ರಣಬೀರ್​

ಈ ಸಿನಿಮಾದಲ್ಲಿ ಜಲ, ವಾಯು ಮತ್ತು ಅಗ್ನಿಯ ಪಾತ್ರಗಳು ಇವೆ. ಒಂದೊಂದು ಶಕ್ತಿಯನ್ನು ಒಬ್ಬೊಬ್ಬರು ಪ್ರತಿನಿಧಿಸುತ್ತಾರೆ. ಜಲದ ಬಗ್ಗೆ ಪ್ರಸ್ತಾಪಿಸುವಾಗ ದೂರದಲ್ಲಿ ನಟಿಯೊಬ್ಬರು ನಡೆದುಬರುತ್ತಿರುವುದು ಕಾಣಿಸಿದೆ. ಆ ದೃಶ್ಯ ಅಸ್ಪಷ್ಟವಾಗಿದೆ. ಅದರಲ್ಲಿ ಇರುವುದು ದೀಪಿಕಾ ಪಡುಕೋಣೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಇದೊಂದು ಬಹುತಾರಾಗಣದ ಸಿನಿಮಾ. ಅಮಿತಾಭ್​ ಬಚ್ಚನ್​, ಅಕ್ಕಿನೇನಿ ನಾಗಾರ್ಜುನ, ಶಾರುಖ್​ ಖಾನ್​, ಮೌನಿ ರಾಯ್​ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಅದೇ ರೀತಿ ದೀಪಿಕಾ ಪಡುಕೋಣೆ ಕೂಡ ಅಭಿನಯಿಸಿರಬಹುದು. ಅವರ ಪಾತ್ರವನ್ನು ನಿರ್ದೇಶಕ ಅಯಾನ್​ ಮುಖರ್ಜಿ ಗುಟ್ಟಾಗಿ ಇಟ್ಟಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಸದ್ಯ ಈ ಟ್ರೇಲರ್​ನ ಸ್ಕ್ರೀನ್​ ಶಾಟ್​ಗಳು ವೈರಲ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:08 pm, Mon, 20 June 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!