ಸತತ ಸೋಲಿನ ಬೆನ್ನಲ್ಲೇ ಹಾದಿ ಬದಲಿಸಿದ ನಟ ಅಕ್ಷಯ್ ಕುಮಾರ್; ಹೊಸ ಚಿತ್ರಕ್ಕೆ ಹಳೆಯ ಥಿಯರಿ
ನೂರಾರು ಕೋಟಿ ಬಜೆಟ್ನಲ್ಲಿ ರೆಡಿ ಆದ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಲಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟ ಉಂಟಾಗಿದೆ. ಹೀಗಾಗಿ, ಹಳೆಯ ಥಿಯರಿ ಫಾಲೋ ಮಾಡಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ.
ಅಕ್ಷಯ್ ಕುಮಾರ್ ಅವರು ಬಾಲಿವುಡ್ನ (Bollywood) ಖ್ಯಾತ ನಾಮರಲ್ಲಿ ಒಬ್ಬರು. ಅವರ ಸಿನಿಮಾಗಳಿಗೆ ದುಡ್ಡು ಹಾಕಿದರೆ ಲಾಸ್ ಆಗುವುದೇ ಇಲ್ಲ ಎನ್ನುವ ಕಾಲ ಒಂದು ಇತ್ತು. ಆದರೆ, ಇತ್ತೀಚೆಗೆ ಈ ಥಿಯರಿ ಯಾಕೋ ಕೆಲಸ ಮಾಡುತ್ತಿಲ್ಲ. ಅಕ್ಷಯ್ ಕುಮಾರ್(Akshay Kumar) ಸಿನಿಮಾಗಳು ಸತತ ಸೋಲು ಕಾಣುತ್ತಿವೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡ ಚಿತ್ರಗಳು ಕೆಲವೇ ಕೋಟಿ ಕಲೆಕ್ಷನ್ ಮಾಡಿ ಪ್ರದರ್ಶನ ನಿಲ್ಲಿಸುತ್ತಿವೆ. ಇದು ನಿರ್ಮಾಪಕರ ಚಿಂತೆಗೆ ಕಾರಣವಾಗಿದೆ. ಈಗ ಸತತ ಸೋಲಿನ ಬೆನ್ನಲ್ಲೇ ಅಕ್ಷಯ್ ಟ್ರ್ಯಾಕ್ ಬದಲಿಸಿದ್ದಾರೆ. ಈ ಮೊದಲು ಗೆಲುವು ಕಂಡಿದ್ದ ಸಿನಿಮಾಗಳ ರೀತಿಯ ಪ್ರಾಜೆಕ್ಟ್ಗಳನ್ನು ಅವರು ಒಪ್ಪಿಕೊಳ್ಳಲು ಮುಂದಾಗಿದ್ದಾರೆ.
ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ‘ಅತ್ರಂಗಿ ರೇ’ ವಿಮರ್ಶಕರಿಂದ ನೆಗೆಟಿವ್ ವಿಮರ್ಶೆ ಪಡೆಯಿತು. ಚಿತ್ರಮಂದಿರದಲ್ಲಿ ರಿಲೀಸ್ ಆದ ‘ಬಚ್ಚನ್ ಪಾಂಡೆ’ ಸಿನಿಮಾ ಸೋಲು ಕಂಡಿತು. ನೂರಾರು ಕೋಟಿ ಬಜೆಟ್ನಲ್ಲಿ ರೆಡಿ ಆದ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಲಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟ ಉಂಟಾಗಿದೆ. ಹೀಗಾಗಿ, ಹಳೆಯ ಥಿಯರಿ ಫಾಲೋ ಮಾಡಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ.
ಈಗಾಗಲೇ ಅಕ್ಷಯ್ ಕುಮಾರ್ ಅವರು ಸೇನಾಧಿಕಾರಿ ಹಾಗೂ ನೌಕಾಪಡೆಯ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಜನರು ಇಷ್ಟಪಟ್ಟಿದ್ದರು. ಈ ಬಾರಿ ಅವರು ವಾಯುಪಡೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಅನ್ನೋದು ವಿಶೇಷ.
ಇದನ್ನೂ ಓದಿ: ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್ ಟ್ರೋಲ್ ಆದ ಅಕ್ಷಯ್ ಕುಮಾರ್ ಚಿತ್ರ ‘ಸಾಮ್ರಾಟ್ ಪೃಥ್ವಿರಾಜ್’
‘ಸ್ತ್ರೀ’ ನಿರ್ದೇಶಕ ದಿನೇಶ್ ವಿಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರ 2023ರ ಮೊದಲಾರ್ಧದಲ್ಲಿ ಸೆಟ್ಟೇರಲಿದೆ. ಈಗಾಗಲೇ ಅಕ್ಷಯ್ ಕುಮಾರ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಮುಂದಿನ ವರ್ಷ ಈ ಚಿತ್ರದ ಕೆಲಸ ಆರಂಭಿಸಲಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸಿದ ದಕ್ಷ ಅಧಿಕಾರಿಯ ಕಥೆ ಇದಾಗಿರಲಿದೆ ಎಂಬ ಮಾಹಿತಿಯಷ್ಟೇ ಸದ್ಯ ರಿವೀಲ್ ಆಗಿದೆ.
ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅದಾದ ಬಳಿಕ ‘ರಾಮ್ ಸೇತು’ ಸಿನಿಮಾ ತೆರೆಗೆ ಬರಲಿದೆ. ಇನ್ನೂ ಹಲವು ಚಿತ್ರಗಳ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.