ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್​ ಟ್ರೋಲ್​ ಆದ ಅಕ್ಷಯ್​ ಕುಮಾರ್​ ಚಿತ್ರ ‘ಸಾಮ್ರಾಟ್​ ಪೃಥ್ವಿರಾಜ್​’

Samrat Prithviraj: ಅಕ್ಷಯ್​ ಕುಮಾರ್​ ಅವರು ಇತ್ತೀಚಿನ ದಿನಗಳಲ್ಲಿ ಅನೇಕ ವಿಚಾರಗಳಿಗೆ ಟ್ರೋಲ್​ ಆಗುತ್ತಿದ್ದಾರೆ. ಈಗ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಟಾರ್ಗೆಟ್​ ಆಗಿದೆ.

ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್​ ಟ್ರೋಲ್​ ಆದ ಅಕ್ಷಯ್​ ಕುಮಾರ್​ ಚಿತ್ರ ‘ಸಾಮ್ರಾಟ್​ ಪೃಥ್ವಿರಾಜ್​’
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Jun 05, 2022 | 8:11 AM

ಅಕ್ಷಯ್​ ಕುಮಾರ್​ ನಟನೆಯ ‘ಸಾಮ್ರಾಟ್​ ಪೃಥ್ವಿರಾಜ್​’ (Samrat Prithviraj) ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಜೂನ್​ 3ರಂದು ಬಿಡುಗಡೆ ಆದ ಈ ಸಿನಿಮಾ ಮೊದಲ ದಿನ 10.70 ಕೋಟಿ ರೂಪಾಯಿ ಗಳಿಕೆ ಮಾಡುವಲ್ಲಿ ಯಶಸ್ವಿ ಆಗಿದೆ. ಆದರೆ ಅಕ್ಷಯ್​ ಕುಮಾರ್ (Akshay Kumar) ಅವರಂತಹ ಸ್ಟಾರ್​ ನಟರ ಸಿನಿಮಾಗೆ ಇದು ಚಿಕ್ಕ ಮೊತ್ತ. ಹಾಗಾಗಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಆಗಿಲ್ಲ ಎಂಬ ಬೇಸರ ಅವರ ಅಭಿಮಾನಿಗಳಿಗೆ ಇದೆ. ಅದರ ಜೊತೆಗೆ ಕೆಲವು ಕಾರಣಗಳಿಂದಾಗಿ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಟ್ರೋಲ್​ (Troll) ಆಗುತ್ತಿದೆ. ಅಕ್ಷಯ್​ ಕುಮಾರ್​ ಅವರನ್ನು ಕಟ್ಟಿಹಾಕಿರುವ ಒಂದು ಪೋಸ್ಟರ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅದನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ತುಂಬ ಅಚ್ಚುಕಟ್ಟಾಗಿ ಸಿನಿಮಾ ಮಾಡುವುದಾಗಿ ಹೇಳಿಕೊಳ್ಳುವ ಅಕ್ಷಯ್​ ಕುಮಾರ್, ಇಷ್ಟು ಸಿಲ್ಲಿ ಮಿಸ್ಟೇಕ್​ ಯಾಕೆ ಮಾಡಿದ್ರು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಈ ಪೋಸ್ಟರ್​ನಲ್ಲಿ ಅಕ್ಷಯ್​ ಕುಮಾರ್​ ಅವರನ್ನು ಕಟ್ಟಿ ಹಾಕಲಾಗಿದೆ. ಸರಪಳಿಗಳಿಂದ ಬಿಗಿಯಲಾಗಿದೆ. ಆದರೆ ತುಂಬ ಸುಲಭವಾಗಿ ಅವರು ಬಿಡಿಸಿಕೊಳ್ಳಬಹುದಾದ ರೀತಿಯಲ್ಲಿ ಬಲಗೈ ಅನ್ನು ಕಟ್ಟಲಾಗಿದೆ. ಇದನ್ನು ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ. ಇತಿಹಾಸದ ಬಗ್ಗೆ ಸರಿಯಾದ ಪಾಠ ಮಾಡ್ತೀವಿ ಅಂತ ಹೇಳಿಕೊಂಡು ಬೀಗುವ ಈ ಚಿತ್ರತಂಡದವರು ಇಷ್ಟು ಸಿಲ್ಲಿ ಮಿಸ್ಟೇಕ್​ ಮಾಡಿದ್ದಾರಲ್ಲ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ಕಿಂಚಿತ್ತೂ ಚೆನ್ನಾಗಿಲ್ಲ ಎಂದು ನೆಗೆಟಿವ್​ ಪ್ರಚಾರ; ಇದರ ಹಿಂದೆ ಯಾರ ಹುನ್ನಾರ?

ಅಷ್ಟೇ ಅಲ್ಲ, ಅಕ್ಷಯ್​ ಕುಮಾರ್​ ಅವರು ಇತ್ತೀಚಿನ ದಿನಗಳಲ್ಲಿ ಅನೇಕ ವಿಚಾರಗಳಿಗೆ ಟ್ರೋಲ್​ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಅವರನ್ನು ಜನರು ಟೀಕಿಸಿದರು. ಈಗ ಅವರ ಸಿನಿಮಾಗಳಲ್ಲಿ ನಾಯಕಿಯ ಆಯ್ಕೆ ಬಗ್ಗೆ ನೆಟ್ಟಿಗರು ತಕರಾರು ತೆಗೆದಿದ್ದಾರೆ. ಹೌದು, ಅಕ್ಷಯ್​ ಕುಮಾರ್​ ಅವರು ತೀರಾ ಚಿಕ್ಕ ವಯಸ್ಸಿನ ಹುಡುಗಿಯರ ಜೊತೆ ಹೀರೋ ಆಗಿ ನಟಿಸುತ್ತಾರೆ ಎಂಬ ಕಾರಣಕ್ಕೆ ಟ್ರೋಲ್​ ಮಾಡಲಾಗುತ್ತಿದೆ.

‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾದಲ್ಲಿ ಮಾನುಷಿ ಚಿಲ್ಲರ್​ ಅವರು ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ಅಕ್ಷಯ್​ ಕುಮಾರ್​ ಅವರಿಗೆ 54 ವರ್ಷ ವಯಸ್ಸು. ಮಾನುಷಿ ಚಿಲ್ಲರ್​ ಅವರಿಗೆ ಈಗಷ್ಟೇ 25ರ ಪ್ರಾಯ. ಹಾಗಾಗಿ ಇಬ್ಬರ ಜೋಡಿಯೇ ಸೂಕ್ತವಲ್ಲ ಎಂದು ಕೂಡ ಒಂದು ವರ್ಗದ ನೆಟ್ಟಿಗರು ಕಾಲೆಳೆದಿದ್ದಾರೆ. ಈ ಮಧ್ಯೆ, ಯೋಗಿ ಆದಿತ್ಯನಾಥ್​, ಅಮಿತ್​ ಶಾ ಮುಂತಾದ ರಾಜಕಾರಣಿಗಳು ಈ ಸಿನಿಮಾವನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ