AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಣ್​ ಜೋಹರ್​ ಬರ್ತ್​ಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್​? ಶಾಕಿಂಗ್​ ಸುದ್ದಿ ವೈರಲ್​

Karan Johar: ಪ್ರತಿ ಬಾರಿ ಕರಣ್​ ಜೋಹರ್​ ಪಾರ್ಟಿ ಆಯೋಜನೆ ಮಾಡಿದಾಗಲೂ ಒಂದಲ್ಲಾ ಒಂದು ಆರೋಪ ಕೇಳಿಬರುತ್ತದೆ. ಈಗ ಕೊರೊನಾ ಕಳಂಕ ಎದುರಾಗಿದೆ.

ಕರಣ್​ ಜೋಹರ್​ ಬರ್ತ್​ಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್​? ಶಾಕಿಂಗ್​ ಸುದ್ದಿ ವೈರಲ್​
ಕರಣ್ ಜೋಹರ್
TV9 Web
| Edited By: |

Updated on: Jun 05, 2022 | 9:03 AM

Share

ಈ ವರ್ಷ ಕರಣ್​ ಜೋಹರ್​ ಅವರು ಹೆಚ್ಚು ಖುಷಿಯಿಂದ ಬರ್ತ್​ಡೇ (Karan Johar Birthday) ಆಚರಿಸಿಕೊಂಡರು. ಇದು ಅವರ 50ನೇ ವರ್ಷದ ಹುಟ್ಟುಹಬ್ಬ ಆದ್ದರಿಂದ ಸಖತ್​ ಅದ್ದೂರಿಯಾಗಿ ಸೆಲೆಬ್ರೇಟ್​ ಮಾಡಲಾಯಿತು. ಮೇ 25ರಂದು ನಡೆದ ಬರ್ತ್​ಡೇ ಪಾರ್ಟಿಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಬಾಲಿವುಡ್​ನಲ್ಲಿ ಕರಣ್​ ಜೋಹರ್​ (Karan Johar) ಅವರು ಪ್ರಭಾವಿ ವ್ಯಕ್ತಿ ಆಗಿದ್ದಾರೆ. ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಅವರು ಸಿಕ್ಕಾಪಟ್ಟೆ ಫೇಮಸ್​. ‘ಧರ್ಮ ಪ್ರೊಡಕ್ಷನ್ಸ್​’ ಮೂಲಕ ಅವರು ಅನೇಕರಿಗೆ ಅವಕಾಶ ನೀಡಿದ್ದಾರೆ. ಅವರ ಆಹ್ವಾನಕ್ಕೆ ಓಗೊಟ್ಟು ಅನೇಕ ಸೆಲೆಬ್ರಿಟಿಗಳು ಬರ್ತ್​ಡೇ ಪಾರ್ಟಿಗೆ ಬಂದಿದ್ದರು. ಆ ಪೈಕಿ ಹಲವರಿಗೆ ಈಗ ಕೊರೊನಾ ಪಾಸಿಟಿವ್​ ಆಗಿದೆ ಎಂದು ‘ಬಾಲಿವುಡ್​ ಹಂಗಾಮ’ ವರದಿ ಮಾಡಿದೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಈ ಕುರಿತು ಕರಣ್​ ಜೋಹರ್​ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

ಪ್ರತಿ ಬಾರಿ ಕರಣ್​ ಜೋಹರ್​ ಪಾರ್ಟಿ ಆಯೋಜನೆ ಮಾಡಿದಾಗಲೂ ಒಂದಲ್ಲಾ ಒಂದು ಆರೋಪ ಕೇಳಿಬರುತ್ತದೆ. ಈಗ ಕೊರೊನಾ ಕಳಂಕ ಎದುರಾಗಿದೆ. ಯಶ್​ ರಾಜ್​ ಸ್ಟುಡಿಯೋದ ಒಳಗಡೆ ಈ ಪಾರ್ಟಿ ನಡೆದಿತ್ತು. ಸಲ್ಮಾನ್​ ಖಾನ್​, ಆಮಿರ್​ ಖಾನ್​, ಶಾರುಖ್​ ಖಾನ್​, ಸೈಫ್​ ಅಲಿ ಖಾನ್​, ರಶ್ಮಿಕಾ ಮಂದಣ್ಣ, ಅನನ್ಯಾ ಪಾಂಡೆ, ಜಾನ್ವಿ ಕಪೂರ್​, ವಿಕ್ಕಿ ಕೌಶಲ್​, ಮಲೈಕಾ ಅರೋರಾ, ಟ್ವಿಂಕಲ್​ ಖನ್ನಾ, ಟಬು, ಸೊನಾಲಿ ಬೇಂದ್ರೆ, ಮಾಧುರಿ ದೀಕ್ಷಿತ್​, ರವೀನಾ ಟಂಡನ್​, ಜೂಹಿ ಚಾಚ್ಲಾ ಸೇರಿದಂತೆ ಅನೇಕ ಹಿರಿ-ಕಿರಿಯ ಸೆಲೆಬ್ರಿಟಿಗಳು ಪಾ​ರ್ಟಿಗೆ ಬಂದಿದ್ದರು.

ಇದನ್ನೂ ಓದಿ: ‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

ಇದನ್ನೂ ಓದಿ
Image
‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​
Image
‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?
Image
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​
Image
ಕರಣ್​ ಜೋಹರ್​ ಅದ್ದೂರಿ ಬರ್ತ್​ಡೇ ಪಾರ್ಟಿಗೆ ಕನ್ನಡದ ಸೆಲೆಬ್ರಿಟಿಗಳಿಗೂ ಆಹ್ವಾನ; ಬದಲಾಯ್ತು ಕಾಲ

‘ಬಾಲಿವುಡ್​ ಹಂಗಾಮ’ ವರದಿ ಪ್ರಕಾರ, ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅಂದಾಜು 55 ಮಂದಿಗೆ ಕೊರೊನಾ ವೈರಸ್​ ಅಂಟಿದೆ. ಆದರೆ ಯಾರೂ ಕೂಡ ಅಸಲಿ ವಿಚಾರವನ್ನು ಬಾಯಿ ಬಿಡುತ್ತಿಲ್ಲ. ಯಾವೆಲ್ಲ ಸೆಲೆಬ್ರಿಟಿಗೆ ಕೊವಿಡ್​ ಪಾಸಿಟಿವ್​ ಆಗಿದೆ ಎಂಬುದನ್ನು ಈ ವರದಿಯಲ್ಲಿ ಬಹಿರಂಗ ಪಡಿಸಲಾಗಿಲ್ಲ.

ಇದನ್ನೂ ಓದಿ: ಮತ್ತೆ ಪ್ರಾರಂಭವಾಗುವುದಿಲ್ಲ ಕಾಫಿ ವಿತ್ ಕರಣ್​; ಭಾವನಾತ್ಮಕ ಸಾಲುಗಳ ಮೂಲಕ ವಿಷಯ ತಿಳಿಸಿದ ಕರಣ್​ ಜೋಹರ್​ !

ಈ ಹಿಂದಿನ ವರ್ಷಗಳಲ್ಲಿ ಕರಣ್​ ಜೋಹರ್​ ಅವರು ಪಾರ್ಟಿ ಮಾಡಿದ್ದಾಗ ಕೆಲವು ಗಂಭೀರ ಆರೋಪಗಳು ಎದುರಾಗಿದ್ದವು. ಆಗ ಕರಣ್​ ಅವರು ತುಂಬ ಖಡಕ್​ ಆಗಿ ಉತ್ತರ ನೀಡಿದ್ದರು. ಈ ಬಾರಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!