ಶೂ ಧರಿಸಿ ರಣಬೀರ್ ದೇವಸ್ಥಾನಕ್ಕೆ ಬಂದಿರಲಿಲ್ಲ; ‘ಬ್ರಹ್ಮಾಸ್ತ್ರ’ ತಂಡದಿಂದ ಬಂತು ಸ್ಪಷ್ಟನೆ

‘ಬ್ರಹ್ಮಾಸ್ತ್ರ’ ಸಿನಿಮಾದ ಕಥೆ ಏನು ಎಂಬುದರ ಸುಳಿವನ್ನು ಈ ಟ್ರೇಲರ್​ನಲ್ಲಿ ಬಿಟ್ಟುಕೊಡಲಾಗಿದೆ. ಅವರು ಶೂ ಧರಿಸಿ ದೇವಸ್ಥಾನದ ಒಳಗೆ ಪ್ರವೇಶಿಸುತ್ತಿರುವ ದೃಶ್ಯ ಕೂಡ ಟ್ರೇಲರ್​ನಲ್ಲಿ ಕಾಣಿಸಿದೆ.

ಶೂ ಧರಿಸಿ ರಣಬೀರ್ ದೇವಸ್ಥಾನಕ್ಕೆ ಬಂದಿರಲಿಲ್ಲ; ‘ಬ್ರಹ್ಮಾಸ್ತ್ರ’ ತಂಡದಿಂದ ಬಂತು ಸ್ಪಷ್ಟನೆ
ರಣಬೀರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 19, 2022 | 10:04 PM

‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಹಲವು ಕಾರಣದಿಂದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ತೆರೆಗೆ ಬರುತ್ತಿದೆ. ಈ ವರ್ಷ ತೆರೆಗೆ ಬರಲಿರುವುದು ಮೊದಲ ಭಾಗ. ಈಗಾಗಲೇ ಟೀಸರ್ ಮೂಲಕ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಟ್ರೇಲರ್​ನಲ್ಲಿ ರಣಬೀರ್ ಕಪೂರ್ (Ranbir Kapoor) ಅವರು ಶೂ ಧರಿಸಿ ದೇವಸ್ಥಾನದ ಒಳಗೆ ಪ್ರವೇಶಿಸುತ್ತಿರುವ ಕ್ಲಿಪ್ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ಸಾಕಷ್ಟು ಮಂದಿ ವಿರೋಧ ಕೂಡ ವ್ಯಕ್ತಪಡಿಸಿದ್ದರು. ಈಗ ಈ ವಿಚಾರದಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ (Ayan Mukerji) ಅವರು ಮೌನ ಮುರಿದಿದ್ದಾರೆ.

‘ಬ್ರಹ್ಮಾಸ್ತ್ರ’ ಸಿನಿಮಾದ ಕಥೆ ಏನು ಎಂಬುದರ ಸುಳಿವನ್ನು ಈ ಟ್ರೇಲರ್​ನಲ್ಲಿ ಬಿಟ್ಟುಕೊಡಲಾಗಿದೆ. ಸೂಪರ್​ ಹೀರೋ ರೀತಿ ಇರುವ ಶಿವ ಎಂಬ ವ್ಯಕ್ತಿಯಾಗಿ ರಣಬೀರ್​ ಕಪೂರ್​ ಕಾಣಿಸಿಕೊಳ್ಳಲಿದ್ದಾರೆ. ಅವರು ಶೂ ಧರಿಸಿ ದೇವಸ್ಥಾನದ ಒಳಗೆ ಪ್ರವೇಶಿಸುತ್ತಿರುವ ದೃಶ್ಯ ಕೂಡ ಟ್ರೇಲರ್​ನಲ್ಲಿ ಕಾಣಿಸಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಈ ಬಗ್ಗೆ ಅಯಾನ್ ಮಾತನಾಡಿದ್ದಾರೆ.

‘ಬ್ರಹ್ಮಾಸ್ತ್ರ ಟ್ರೇಲರ್‌ನ ಒಂದು ದೃಶ್ಯದಿಂದ ಕೆಲವರು ಅಸಮಾಧಾನಗೊಂಡಿದ್ದಾರೆ. ರಣಬೀರ್ ಗಂಟೆ ಬಾರಿಸುವಾಗ ಶೂ ಧರಿಸಿದ್ದರು. ಈ ಚಿತ್ರದ ನಿರ್ದೇಶಕನಾಗಿ ನಾನು ಈ ಬಗ್ಗೆ ವಿವರಿಸುತ್ತೇನೆ. ನನ್ನ ಕುಟುಂಬ ಕಳೆದ 75 ವರ್ಷಗಳಿಂದ ದುರ್ಗಾ ಪೂಜೆ ಮಾಡುತ್ತಾ ಬಂದಿದೆ. ನನ್ನ ಬಾಲ್ಯದಿಂದಲೂ ನಾನು ಇದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
ಆಲಿಯಾ-ರಣಬೀರ್​ ಜತೆಯಾಗಿ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪಡೆದ ಸಂಬಳ 42 ಕೋಟಿ ರೂ; ಇದರಲ್ಲಿ ಯಾರ ಪಾಲು ಹೆಚ್ಚು?
Image
‘ರಣಬೀರ್​-ಆಲಿಯಾ ಒಟ್ಟಾಗಿ ನನ್ನ ಸಿನಿಮಾವನ್ನು ಹಾಳು ಮಾಡುತ್ತಿದ್ದಾರೆ ಅನಿಸುತ್ತಿತ್ತು; ‘ಬ್ರಹ್ಮಾಸ್ತ್ರ’ ನಿರ್ದೇಶಕ 
Image
ಕನ್ನಡದಲ್ಲಿ ಟ್ವೀಟ್​ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್​ ಡೇಟ್​ ತಿಳಿಸಿದ ಆಲಿಯಾ ಭಟ್​; ಶಿವನ ಗೆಟಪ್​ನಲ್ಲಿ ರಣಬೀರ್​
Image
Ranbir Kapoor: ಅಂಗಾಂಗ ದಾನ ಮಾಡಲು ನಿರ್ಧರಿಸಿದ ಬ್ರಹ್ಮಾಸ್ತ್ರ ಚಿತ್ರತಂಡ

ಇದನ್ನೂ ಓದಿ: ಬೆಂಕಿಯೂ ಸುಡಲಾರದ ವ್ಯಕ್ತಿಯ ಪಾತ್ರದಲ್ಲಿ ರಣಬೀರ್​ ಕಪೂರ್​; ಹೇಗಿದೆ ‘ಬ್ರಹ್ಮಾಸ್ತ್ರ’ ಟ್ರೇಲರ್​?

‘ನಮ್ಮ ಸಿನಿಮಾದಲ್ಲಿ ರಣಬೀರ್ ಪ್ರವೇಶಿಸುತ್ತಿರುವುದು ದೇವಸ್ಥಾನ ಅಲ್ಲ. ಅದು ದೇವಸ್ಥಾನಕ್ಕಿಂತಲೂ ಮೊದಲು ಬರುವ ಆವರಣ. ನನ್ನ ಅನುಭವದ ಪ್ರಕಾರ ನಮ್ಮ ಪಾದರಕ್ಷೆಗಳನ್ನು ದೇವಿ ಇರುವ ಭಾಗದಲ್ಲಿ ಮಾತ್ರ ತೆಗೆಯುತ್ತೇವೆಯೇ ಹೊರತು ದೇವಸ್ಥಾನದ ಹೊರ ಭಾಗದಲ್ಲಿ ಅಲ್ಲ’ ಎಂದಿದ್ದಾರೆ ಅಯಾನ್. ಅವರ ಸ್ಪಷ್ಟನೆ ಅನೇಕರಿಗೆ ಸಮಾಧಾನ ನೀಡಿಲ್ಲ.

ರಣಬೀರ್​ ಕಪೂರ್​, ಆಲಿಯಾ ಭಟ್​ ಮಾತ್ರವಲ್ಲದೇ ಅಕ್ಕಿನೇನಿ ನಾಗಾರ್ಜುನ, ಅಮಿತಾಭ್​ ಬಚ್ಚನ್​, ಮೌನಿ ರಾಯ್​ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಚಿತ್ರದ ಟ್ರೇಲರ್​ನಲ್ಲಿ ಗ್ರಾಫಿಕ್ಸ್​ ದೃಶ್ಯಗಳು ಹೈಲೈಟ್​ ಆಗಿವೆ. ಆದರೆ ಗ್ರಾಫಿಕ್ಸ್​ ಗುಣಮಟ್ಟ ಕಳಪೆ ಆಗಿದೆ ಎಂಬ ಕಾರಣದಿಂದಲೂ ಚಿತ್ರತಂಡವನ್ನು ಟ್ರೋಲ್​ ಮಾಡಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್