AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranbir Kapoor: ಅಂಗಾಂಗ ದಾನ ಮಾಡಲು ನಿರ್ಧರಿಸಿದ ಬ್ರಹ್ಮಾಸ್ತ್ರ ಚಿತ್ರತಂಡ

ಬ್ರಹ್ಮಾಸ್ತ ನಿರ್ದೇಶಕಿ ಅಯಾನ್ ಮುಖರ್ಜಿ ಅವರ ಸಾಮಾಜಿಕ ಕಳಕಳಿಯ ಅಂಗಾಂಗ ದಾನ ಮಾಡುವ ಯೋಜನೆಗೆ ರಣಬೀರ್ ಕಪೂರ್ ಕೈಜೋಡಿಸಿದ್ದಾರೆ.

Ranbir Kapoor: ಅಂಗಾಂಗ ದಾನ ಮಾಡಲು ನಿರ್ಧರಿಸಿದ ಬ್ರಹ್ಮಾಸ್ತ್ರ ಚಿತ್ರತಂಡ
ಬ್ರಹ್ಮಾಸ್ತ್ರ ಚಿತ್ರತಂಡ ಮಾಡಿರುವ ಘೋಷಣೆಯೇನು?
Follow us
guruganesh bhat
|

Updated on:Mar 09, 2021 | 3:14 PM

ಬಾಲಿವುಡ್​ನ ಬಹು ನಿರೀಕ್ಷಿತ ಚಿತ್ರ ‘ಬ್ರಹ್ಮಾಸ್ತ್ರ’ ಸಾಮಾಜಿಕ ಕಳಕಳಿ ಮೆರೆದಿದೆ. ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಕರಣ್ ಜೋಹರ್​​ ಅವರಂತಹ ಬೃಹತ್ ತಾರಾಗಣವನ್ನೇ ಹೊಂದಿರುವ ಬ್ರಹ್ಮಾಸ್ತ್ರದ ಪವರ್​ಗೆ ಇದೀಗ ಇನ್ನೊಂದು ಬಾಣ ಕೂಡಿಕೊಂಡಿದೆ.  ಬ್ರಹ್ಮಾಸ್ತ್ರ ನಿರ್ದೇಶಕಿ ಅಯಾನ್ ಮುಖರ್ಜಿ ಅವರ ಸಾಮಾಜಿಕ ಕಳಕಳಿಯ ಅಂಗಾಂಗ ದಾನ ಮಾಡುವ ಯೋಜನೆಗೆ ರಣಬೀರ್ ಕಪೂರ್ ಕೈಜೋಡಿಸಿದ್ದಾರೆ. ಬ್ರಹ್ಮಾಸ್ತ್ರ ತಂಡದ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಕರಣ್ ಜೋಹರ್ ಸಹ ಈ ಯೋಜನೆಗೆ ಕೈಜೋಡಿಸಿ ಅಂಗಾಂಗ ದಾನ ಮಾಡುವುದಾಗಿ ಹೇಳಿದ್ದಾರೆ.​​

ಕಳೆದ ವರ್ಷವೇ ಅಮರ್ ಗಾಂಧಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರಣಬೀರ್ ಕಪೂರ್ ತಮ್ಮ ಕಿಡ್ನಿ ಮತ್ತು ಇತರ ಅಂಗಾಂಗಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಅಂಗಾಂಗ ದಾನ ಮಾಡುವ ಯೋಜನೆ ಕುರಿತು ರಣಬೀರ್ ಕಪೂರ್ ಮತ್ತು ಬ್ರಹ್ಮಾಸ್ತ ನಿರ್ದೇಶಕಿ ಅಯಾನ್ ಮುಖರ್ಜಿ ಇಬ್ಬರೂ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಇತರರಿಗೆ ತಮ್ಮ ಅಂಗಾಂಗ ದಾನ ಮಾಡಿ ಜೀವ ಉಳಿಸುವವರೇ ನಿಜವಾದ ಹೀರೋ’ ಎಂದು ಅವರು ವಿಡಿಯೋದಲ್ಲಿ ಕಳಕಳಿ ಮೆರೆದಿದ್ದಾರೆ.

ಅಷ್ಟಕ್ಕೇ ನಿಲ್ಲಿಸದ ಇವರಿಬ್ಬರು, ‘ಒಬ್ಬರ ಅಂಗಾಂಗದಿಂದ ಇಬ್ಬರ ಜೀವ ಉಳಿಸಬಹುದು. ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿ. ಇದರಿಂದ ಸಮಾಜದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ’ ಎಂದು ಸಂದೇಶ ಸಾರಿದ್ದಾರೆ.

ಬ್ರಹ್ಮಾಸ್ತ್ರ; ಬಹು ನಿರೀಕ್ಷಿತ ಸಿನಿಮಾ ‘ನನ್ನ ಜೀವನದ ಬಹುಮುಖ್ಯ ಸಂಗತಿಯೊಂದರ ಮುಂದೆ ಸದ್ಯದಲ್ಲೇ ಟಿಕ್ ಮಾರ್ಕ್ ಮಾಡಲಿದ್ದೇನೆ’ ಎಂದು ರಣಬೀರ್ ಸೂಚ್ಯವಾಗಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.  ಕೊರೊನಾ ಸಾಂಕ್ರಾಮಿಕ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಅಧಿಕೃತ ಜೋಡಿಯಾಗಿರುತ್ತಿದ್ದೆವು. ಆದರೂ ಕೊರೊನಾ ನಮ್ಮ ಬಾಂಧವ್ಯಕ್ಕೆ ತೀರಾ ಧಕ್ಕೆಯನ್ನೇನೂ ಮಾಡಿಲ್ಲ. ಅತಿ ಶೀಘ್ರದಲ್ಲೇ ನಾವಿಬ್ಬರೂ ದಂಪತಿಗಳಾಗಲಿದ್ದೇವೆ ಎಂದು ಅವರು ರಾಜೀವ್ ಮಸಂದ್ ಅವರ ಜೊತೆಗಿನ ಸಂದರ್ಶನದಲ್ಲಿ  ಹೇಳಿದ್ದರು.

ಸಂದರ್ಶನದಲ್ಲಿ ಆಲಿಯಾರನ್ನು ತಮ್ಮ ‘ಗರ್ಲ್ ಫ್ರೆಂಡ್’ ಎಂದು ಸಂಬೋಧಿಸಿರುವ ಅವರು, ಆಕೆ ಮಹತ್ವಾಕಾಂಕ್ಷಿ. ಲಾಕ್ ಡೌನ್​​ನಲ್ಲಿ ಗಿಟಾರ್ ಕ್ಲಾಸ್​ನಿಂದ ಹಿಡಿದು ಸ್ಕ್ರೀನ್ ಪ್ಲೇ ಬರವಣಿಗೆಯವರೆಗೂ ಆಲಿಯಾ ಆನ್ ಲೈನ್ ಕ್ಲಾಸ್​ಗೆ ಹಾಜರಾಗಿದ್ದಾಳೆ. ಅವಳ ಸಾಧನೆ ಮುಂದೆ ನನ್ನದು ಕಳಪೆ ಪ್ರದರ್ಶನ ಎಂದು ತುಂಟ ಉತ್ತರ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಶುಭಸುದ್ದಿ  ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಗಿದೆ. ಈ ಜೋಡಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಪರದೆಯ ಮೇಲೂ ಜೊತೆಯಾಗಲಿದ್ದಾರೆ.

ರಣಬೀರ್ ಕಪೂರ್​ಗೆ ಕೊವಿಡ್-19 ಪಾಸಿಟಿವ್ ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್​ಗೆ ಕೊವಿಡ್-19 ಪಾಸಿಟಿವ್ ವರದಿ ಬಂದಿದೆ ಎಂದು ರಣಬೀರ್ ತಾಯಿ ನೀತು ಕಪೂರ್ ತಿಳಿಸಿದ್ದಾರೆ. ರಣಬೀರ್​ಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಅವರ ತಾಯಿ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಇಂದು (ಮಾರ್ಚ್ 9) ಖಚಿತಪಡಿಸಿದ್ದಾರೆ. 38 ವರ್ಷದ ನಟ, ರಣಬೀರ್ ಕಪೂರ್ ಸದ್ಯ ಮನೆಯಲ್ಲೇ ಕ್ವಾರಂಟೈನ್​ನಲ್ಲಿ ಇದ್ದಾರೆ. ವೈದ್ಯಕೀಯ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದು ರಣಬೀರ್ ಕಪೂರ್ ತಾಯಿ ನೀತು ಕಪೂರ್ ಹೇಳಿದ್ದಾರೆ.

ರಣಬೀರ್ ಕಪೂರ್ ಗುಣಮುಖರಾಗಲಿ ಎಂಬ ಅಭಿಮಾನಿಗಳ ಶುಭಹಾರೈಕೆಗೆ ಧನ್ಯವಾದಗಳನ್ನು ತಿಳಿಸಿರುವ ತಾಯಿ ನೀತು ಕಪೂರ್, ರಣಬೀರ್ ಸೆಲ್ಫ್ ಕ್ವಾರಂಟೈನ್​ನಲ್ಲಿ ಇದ್ದಾರೆ. ಕೊವಿಡ್-19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನೀತು ಕಪೂರ್ ಕೂಡ ಈ ಹಿಂದೆ ಕೊವಿಡ್-19 ಪಾಸಿಟಿವ್ ಆಗಿದ್ದರು. ಡಿಸೆಂಬರ್​ನಲ್ಲಿ ಕೊರೊನಾ ಸೋಂಕಿನಿಂದ ಅವರು ಗುಣಮುಖರಾಗಿದ್ದರು.

ಇದನ್ನೂ ಓದಿ: ಡ್ರಗ್ಸ್‌ ಟೆಸ್ಟ್ ತೆಗೆದುಕೊಳ್ಳುವಂತೆ ರಣಬೀರ್‌, ರಣವೀರ್‌, ವಿಕ್ಕಿಗೆ ಕಂಗನಾ ಸಖತ್ ಚಾಲೆಂಜ್​

ಬಾಲಿವುಡ್ ನಟ ರಣಬೀರ್ ಕಪೂರ್​ಗೆ ಕೊರೊನಾ ಪಾಸಿಟಿವ್; ಹೋಮ್ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದ ನೀತು ಕಪೂರ್

Published On - 3:08 pm, Tue, 9 March 21

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ