AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook Reels | ರೀಲ್ಸ್​ ಆಯ್ಕೆ ಪರಿಚಯಿಸಿದ ಫೇಸ್​ಬುಕ್​; ಮಾಡೋದು ಹೇಗೆ? ಇಲ್ಲಿದೆ ಉತ್ತರ

ಈಗ ಫೇಸ್​ಬುಕ್​ ಸಣ್ಣ ವಿಡಿಯೋಗಳನ್ನು ಪರಿಚಯಿಸುತ್ತಿದೆ. ಇಂದಿನಿಂದ ರೀಲ್ಸ್​ ಆಯ್ಕೆಯನ್ನು ತರುವುದಾಗಿ ಫೇಸ್​ಬುಕ್​ ಹೇಳಿದೆ.

Facebook Reels | ರೀಲ್ಸ್​ ಆಯ್ಕೆ ಪರಿಚಯಿಸಿದ ಫೇಸ್​ಬುಕ್​; ಮಾಡೋದು ಹೇಗೆ? ಇಲ್ಲಿದೆ ಉತ್ತರ
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 09, 2021 | 3:29 PM

ಚೀನಾ ಮೂಲದ ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಆದ ನಂತರದಲ್ಲಿ ಫೇಸ್​ಬುಕ್​ ಒಡೆತನದ ಇನ್​ಸ್ಟಾಗ್ರಾಂ ರೀಲ್ಸ್​ ಪರಿಚಯಿಸಿತ್ತು. ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಹಾಕುವ ಅವಕಾಶವನ್ನು ರೀಲ್ಸ್​ ನೀಡುತ್ತದೆ. ಕೆಲವೇ ದಿನಗಳಲ್ಲಿ ರೀಲ್ಸ್​ ತುಂಬಾನೇ ಖ್ಯಾತಿ ಪಡೆದುಕೊಂಡಿತ್ತು. ಈಗ ಫೇಸ್​ಬುಕ್​ ಕೂಡ ಇನ್​ಸ್ಟಾಗ್ರಾಂ ಹಾದಿಯನ್ನು ತುಳಿಯುತ್ತಿದೆ. ಅಂದರೆ, ಇನ್ಮುಂದೆ ಫೇಸ್​ಬುಕ್​​ನಲ್ಲೂ ರೀಲ್ಸ್​ ಆಯ್ಕೆ ಸಿಗಲಿದೆ. ಸಾಕಷ್ಟು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳಲು ಫೇಸ್​ಬುಕ್​ ಉತ್ತಮ ತಾಣವಾಗಿ ಮಾರ್ಪಟ್ಟಿದೆ. ಬಳಕೆದಾರರು ಸಾಕಷ್ಟು ಸಮಯವನ್ನು ಫೇಸ್​ಬುಕ್​ನಲ್ಲಿ ವಿಡಿಯೋ ನೋಡಲು ಕಳೆಯುತ್ತಿದ್ದಾರೆ. ಇದನ್ನು ಫೇಸ್​ಬುಕ್​ ಕೂಡ ಒಪ್ಪಿಕೊಂಡಿದೆ. ಈಗ ಫೇಸ್​ಬುಕ್​ ಸಣ್ಣ ವಿಡಿಯೋಗಳನ್ನು ಪರಿಚಯಿಸುತ್ತಿದೆ. ಇಂದಿನಿಂದ ರೀಲ್ಸ್​ ಆಯ್ಕೆಯನ್ನು ತರುವುದಾಗಿ ಫೇಸ್​ಬುಕ್​ ಹೇಳಿದೆ. ಫೇಸ್​ಬುಕ್​ನಲ್ಲಿ ರೀಲ್ಸ್​ ಮಾಡೋದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

*ಫೇಸ್​ಬುಕ್​ ಆ್ಯಪ್​ ಓಪನ್​ ಮಾಡಿಕೊಂಡ ನಂತರ ಅಲ್ಲಿ ರೀಲ್ಸ್​ ಅಥವಾ ಶಾರ್ಟ್​ ವಿಡಿಯೋ ಎನ್ನುವ ಆಯ್ಕೆ ಸಿಗಲಿದೆ. ಅದನ್ನು ಕ್ಲಿಕ್​ ಮಾಡಿ. * ರೀಲ್ಸ್​ ಕ್ಲಿಕ್​ ಮಾಡಿದ ನಂತರ ನೀವು ವಿಡಿಯೋ ರೆಕಾರ್ಡ್​ ಮಾಡಬಹುದು ಅಥವಾ ನಿಮ್ಮ ಕ್ಯಾಮೆರಾದಲ್ಲಿರುವ ವಿಡಿಯೋಗಳನ್ನು ಬಳಕೆ ಮಾಡಿಕೊಂಡು ಸಣ್ಣ ಸಣ್ಣ ವಿಡಿಯೋಗಳನ್ನು ಸಿದ್ಧಪಡಿಸಬಹುದು. * ಸಣ್ಣ ವಿಡಿಯೋಗಳನ್ನು ಮಾತ್ರ ಇಲ್ಲಿ ಕ್ರಿಯೇಟ್​ ಮಾಡಬಹುದು. ಇದಕ್ಕೆ ಸಮಯ ಮಿತಿಯನ್ನು ಫೇಸ್​ಬುಕ್​ ವಿಧಿಸಿದೆ. * ಫೇಸ್​ಬುಕ್​ ಮ್ಯೂಸಿಕ್​ ಲೈಬ್ರರಿಯಿಂದ ಆಡಿಯೋ ಆಯ್ಕೆ ಮಾಡಬಹುದು. ಇಲ್ಲವೇ ನಿಮ್ಮದೇ ಆಡಿಯೋವನ್ನು ಕೂಡ ಹಾಕಬಹುದು. * ಈ ವಿಡಿಯೋಗೆ ನೀವು ಎಫೆಕ್ಟ್​ಗಳನ್ನು ಕೂಡ ಹಾಕಬಹುದು. * ಆಯ್ಕೆ ಮಾಡಿಕೊಂಡ ವಿಡಿಯೋದ ವೇಗವನ್ನು ಕಡಿಮೆ ಮಾಡಬಹುದು ಇಲ್ಲವೇ ವಿಡಿಯೋದ ವೇಗವನ್ನು ಹೆಚ್ಚಿಸುವ ಆಯ್ಕೆ ಕೂಡ ಇದರಲ್ಲಿ ಸಿಗಲಿದೆ. * ಸಂಪೂರ್ಣ ಎಡಿಟ್​ ಆದ ನಂತರದಲ್ಲಿ ವಿಡಿಯೋವನ್ನು ಶೇರ್​ ಮಾಡಬೇಕು. ಇದನ್ನು ಗೆಳೆಯರಿಗಷ್ಟೇ ಕಾಣುವಂತೆ ಹಾಕಬಹುದು. ಪಬ್ಲಿಕ್​ ಆಯ್ಕೆಯನ್ನು ಸೆಲೆಕ್ಟ್​ ಮಾಡಿದರೆ, ಎಲ್ಲರಿಗೂ ಈ ವಿಡಿಯೋ ಕಾಣಿಸಲಿದೆ.

ಇದನ್ನೂ ಓದಿ: Women’s Day 2021: ಮಹಿಳೆಯರೇ ಸುರಕ್ಷಿತವಾಗಿರಲಿ ನಿಮ್ಮ ಫೇಸ್​ಬುಕ್, ಇನ್​ಸ್ಟಾಗ್ರಾಂ ಖಾತೆ

ಅಲೆಗಳ ಅಬ್ಬರ ಕಂಡು ಮೀನುಗಾರರರೂ ಸಮುದ್ರಕ್ಕಿಳಿಯುತ್ತಿಲ್ಲ
ಅಲೆಗಳ ಅಬ್ಬರ ಕಂಡು ಮೀನುಗಾರರರೂ ಸಮುದ್ರಕ್ಕಿಳಿಯುತ್ತಿಲ್ಲ
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ