Women’s Day 2021: ಮಹಿಳೆಯರೇ ಸುರಕ್ಷಿತವಾಗಿರಲಿ ನಿಮ್ಮ ಫೇಸ್​ಬುಕ್, ಇನ್​ಸ್ಟಾಗ್ರಾಂ ಖಾತೆ

Safety tips: ಫೇಸ್​ಬುಕ್​ನಲ್ಲಿ ಫೋಟೊ ಅಪ್ ಲೋಡ್ ಮಾಡುವಾಗಲೂ ಜಾಗರೂಕರಾಗಿರಬೇಕು. ನಿಮ್ಮ ಫೋಟೊಗಳು ಪಬ್ಲಿಕ್ ಮಾಡುವುದಕ್ಕಿಂತ ನಿಮ್ಮ ಫ್ರೆಂಡ್​ಲಿಸ್ಟ್​ನವರಿಗೆ ಮಾತ್ರ ಕಾಣುವಂತೆ ಇಟ್ಟರೆ ಒಳ್ಳೆಯದು

Women’s Day 2021: ಮಹಿಳೆಯರೇ ಸುರಕ್ಷಿತವಾಗಿರಲಿ ನಿಮ್ಮ ಫೇಸ್​ಬುಕ್, ಇನ್​ಸ್ಟಾಗ್ರಾಂ ಖಾತೆ
ಫೇಸ್​ಬುಕ್ ಇನ್​ಸ್ಟಾಗ್ರಾಂ
Follow us
ರಶ್ಮಿ ಕಲ್ಲಕಟ್ಟ
| Updated By: Lakshmi Hegde

Updated on:Mar 08, 2021 | 10:28 AM

ತಡರಾತ್ರಿ ಫೇಸ್​ಬುಕ್​ನಲ್ಲಿ ಆ್ಯಕ್ಟಿವ್ ಆಗಿ ಕಾಣಿಸಿಕೊಂಡರೆ ಹಾಯ್.. ಹಲೋ ಎನ್ನುವ ಗಂಡಸರು ಒಂದೆಡೆ, ಗುರುತು ಪರಿಚಯ ಇಲ್ಲದಿದ್ದರೂ ಫೇಸ್​ಬುಕ್ ಫ್ರೆಂಡ್ ಲಿಸ್ಟ್​ನಲ್ಲಿ ಸೇರಿಸಿಕೊಂಡಿದ್ದರಿಂದ ಊಟ ಆಯ್ತಾ, ತಿಂಡಿ ಆಯ್ತಾ, ನಿಮಗೆ ನೀಲಿ ಬಣ್ಣದ ಸೀರೆ ಚೆನ್ನಾಗಿ ಒಪ್ಪುತ್ತೆ, ನಿದ್ದೆ ಬಂದಿಲ್ವಾ ಎಂದು ಅನಗತ್ಯ ಸಂದೇಶಗಳನ್ನು ಕಳುಹಿಸುವವರು ಇನ್ನೊಂದೆಡೆ. ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಇಲ್ಲವೇ ಮೆಸೆಂಜರ್ ಕರೆ ಮಾಡಿ ಕಿರಿಕಿರಿ ಮಾಡುವವರು ಕೆಲವರಾದರೆ, ಮಹಿಳೆಯರ ಫೋಟೊಗಳನ್ನು ಅಶ್ಲೀಲ ಗ್ರೂಪ್​ಗಳಲ್ಲಿ ಶೇರ್ ಮಾಡುವವರೂ ನಮ್ಮ ಮಧ್ಯೆ ಇರುತ್ತಾರೆ. ಇಂಥಾ ಕಿರಿಕಿರಿಗೆ ಅಂಜಿ ಸಾಮಾಜಿಕ ಮಾಧ್ಯಮಗಳಿಂದ ದೂರ ಸರಿದ ಎಷ್ಟೋ ಮಹಿಳೆಯರಿದ್ದಾರೆ. ಲಾಕ್​ಡೌನ್ ಹೊತ್ತಲ್ಲಿ ಹಲವಾರು ಮಹಿಳೆಯರು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ತಮ್ಮ ಗೃಹೋದ್ಯಮವನ್ನು ವಿಸ್ತರಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಹೀಗಿರುವಾಗ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ಖಾತೆಗಳನ್ನು ಸುರಕ್ಷಿತವಾಗಿಡುವುದು ಹೇಗೆ? ಆನ್​ಲೈನ್ ಕಿರಿಕಿರಿಗಳಿಂದ ದೂರವಿರುವುದು ಹೇಗೆ ಎಂಬುದನ್ನು ನೋಡೋಣ.

ಫೇಸ್​ಬುಕ್ ಖಾತೆಯನ್ನು ಸುರಕ್ಷಿತವಾಗಿಡುವುದು ಹೇಗೆ? ನಿಮ್ಮ ಫೇಸ್​ಬುಕ್ ಖಾತೆಯ ಪಾಸ್​ವರ್ಡ್ ಸ್ಟ್ರಾಂಗ್ ಆಗಿರಲಿ. ಪದೇಪದೆ ಬಳಸಿದ ಪಾಸ್​ವರ್ಡ್, ಮೊಬೈಲ್ ಸಂಖ್ಯೆ ಇಲ್ಲವೇ ನೆನಪಿನಲ್ಲಿರಿಸಲು ಸುಲಭ ಎಂದು ಮಕ್ಕಳ ಅಥವಾ ಗಂಡನ ಹೆಸರು, ನಿಮ್ಮ ನೆಚ್ಚಿನ ಪ್ರಾಣಿಯ ಹೆಸರು ಇದು ಯಾವುದನ್ನೂ ಪಾಸ್​​ವರ್ಡ್ ಆಗಿರಿಸಬೇಡಿ.

ಲಾಗಿನ್ ಆಗಲು 2-Factor authentication ಬಳಸಿ ನಿಮ್ಮ ಫೇಸ್​ಬುಕ್ ಖಾತೆ ಸೆಟ್ಟಿಂಗ್ಸ್​​ನಲ್ಲಿ Privacy Shortcuts ಅಡಿಯಲ್ಲಿ Account Security ಕ್ಲಿಕ್ ಮಾಡಿ. ಅಲ್ಲಿ Use two Factor authentication ಕ್ಲಿಕ್ ಮಾಡಿ. Select a Security Method ಕೆಳಗಡೆ Authentication App ಮತ್ತು Text Message (SMS) ಎಂಬ ಆಯ್ಕೆಗಳಿರುತ್ತವೆ. ಇಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಿ. ಬೇರೆ ಯಾರಾದರೂ ನಿಮ್ಮ ಖಾತೆಗೆ ಲಾಗಿನ್ ಆದರೆ ಫೇಸ್​ಬುಕ್ ಮೊಬೈಲ್ ಆ್ಯಪ್ ಅಥವಾ ಎಸ್ಎಂಎಸ್ ಮೂಲಕ ನಿಮಗೆ ಸಂದೇಶ ರವಾನೆಯಾಗುತ್ತದೆ. ನಿಮ್ಮ ಖಾತೆಗೆ ಲಾಗಿನ್ ಆಗುವ ಪ್ರಯತ್ನ ಮಾಡಲಾಗಿದೆ. ಅದು ನೀವೇನಾ? ಎಂದು ಫೇಸ್​ಬುಕ್ ನಿಮ್ಮಲ್ಲಿ ಕೇಳುತ್ತದೆ. ಅದು ನಾವೇ ಎಂದು ಖಾತ್ರಿ ಪಡಿಸಿಕೊಂಡ ನಂತರವೇ ಫೇಸ್​ಬುಕ್ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತದೆ. ಈ ರೀತಿ two Factor authentication ಎನೇಬಲ್ ಮಾಡಿದರೆ ನೀವು ಯಾವುದೇ ಕಂಪ್ಯೂಟರ್ ಅಥವಾ ಮೊಬೈಲ್​ನಲ್ಲಿ ಲಾಗಿನ್ ಆಗುವ ಮುನ್ನ ಸೆಕ್ಯುರಿಟಿ ಪ್ರಶ್ನೆ ಕೇಳಲಾಗುತ್ತದೆ. ಅಕಸ್ಮಾತ್ ಬೇರೆ ಯಾರಾದರೂ ನಿಮ್ಮ ಖಾತೆಗೆ ಲಾಗಿನ್ ಆಗಿದ್ದರೆ ಎಷ್ಟು ಗಂಟೆಗೆ ಯಾವ ಪ್ರದೇಶದಿಂದ ಅವರು ಲಾಗಿನ್ ಆಗಿದ್ದಾರೆ ಎಂಬುದರ ಬಗ್ಗೆಯೂ ಫೇಸ್​ಬುಕ್ ಮಾಹಿತಿ ನೀಡುತ್ತದೆ. ಅದಕ್ಕಾಗಿ Get alerts about unrecognized logins ಎನೇಬಲ್ ಮಾಡಿಟ್ಟುಕೊಳ್ಳಿ. ಈ ಸೌಲಭ್ಯ ಬಳಸಲು ಫೇಸ್ ಬುಕ್ Settings & Privacy > Privacy shortcuts > Account Security > Get alerts about unrecognized logins ಕ್ಲಿಕ್ ಮಾಡಿ ನೋಟಿಫಿಕೇಶನ್, ಮೆಸೆಂಜರ್, ಇಮೇಲ್ ಮೂಲಕ ನಿಮಗೆ Alert ಸಿಗುತ್ತದೆ.

ಪ್ರೊಫೈಲ್ ಲಾಕ್ ಮಾಡಿ ಫೇಸ್​ಬುಕ್​ನಲ್ಲಿ ಫೋಟೊ ಅಪ್​ಲೋಡ್ ಮಾಡುವಾಗಲೂ ಜಾಗರೂಕರಾಗಿರಬೇಕು. ನಿಮ್ಮ ಫೋಟೊಗಳು ಪಬ್ಲಿಕ್ ಮಾಡುವುದಕ್ಕಿಂತ ನಿಮ್ಮ ಫ್ರೆಂಡ್​ಲಿಸ್ಟ್​ನವರಿಗೆ ಮಾತ್ರ ಕಾಣುವಂತೆ ಇಟ್ಟರೆ ಒಳ್ಳೆಯದು. ಕೆಲವರು ನಿಮ್ಮ ಟೈಮ್​ಲೈನ್​​ನಲ್ಲಿರುವ ಫೋಟೊಗಳನ್ನು ಡೌನ್​ಲೋಡ್ ಮಾಡಿಕೊಂಡು ಅಶ್ಲೀಲ ಗುಂಪುಗಳಲ್ಲಿ ಅಪ್​ಲೋಡ್ ಮಾಡುತ್ತಾರೆ ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ನಿಮ್ಮ ಪ್ರೊಫೈಲ್ ಲಾಕ್ ಮಾಡಿಡಿ. ಹೀಗೆ ಮಾಡಿದರೆ ನಿಮ್ಮ ಫ್ರೆಂಡ್​ಲಿಸ್ಟ್​ನಲ್ಲಿರುವ ಜನರು ಹೊರತು ಪಡಿಸಿ ಬೇರೆ ಯಾರಿಗೂ ನಿಮ್ಮ ಫೋಟೊಗಳು ಕಾಣುವುದಿಲ್ಲ.

ಪ್ರೊಫೈಲ್ ಲಾಕ್ ಮಾಡುವುದು ಹೇಗೆ? ಮೊಬೈಲ್ ಆ್ಯಪ್​ನಲ್ಲಿ ನಿಮ್ಮ ಪ್ರೊಫೈಲ್ ಓಪನ್ ಮಾಡಿ. ನಿಮ್ಮ ಪ್ರೊಫೈಲ್ ಫೋಟೊ ಕೆಳಗಡೆ Add to Story ಬಲಗಡೆಯಿರುವ ಮೂರು ಚುಕ್ಕಿಗಳನ್ನು ಒತ್ತಿ. ಅಲ್ಲಿ ಪ್ರೊಫೈಲ್ ಸೆಟ್ಟಿಂಗ್ಸ್ ಕೆಳಗಡೆ Lock Profile ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ಲಾಕ್ ಮಾಡಬಹುದು.

ಪ್ರೊಫೈಲ್ ಫೋಟೊಗಳಿಗೆ Picture Guard ಬಳಸಿ ನಿಮ್ಮ ಪ್ರೊಫೈಲ್ ಫೋಟೊಗಳನ್ನು ಯಾರೂ ಡೌನ್​ಲೋಡ್ ಮಾಡದಂತೆ, ಶೇರ್ ಮಾಡದಂತೆ ತಡೆಯಲು Picture Guard ಬಳಸಿ. ಫೇಸ್ ಬುಕ್ ಖಾತೆಯಲ್ಲಿ ಪ್ರೊಫೈಲ್ ಫೋಟೊ ಅಪ್ ಲೋಡ್ ಮಾಡಿದ ನಂತರ Turn on Profile Guard ಆಪ್ಶನ್ ಕ್ಲಿಕ್ ಮಾಡಿದರೆ ಸಾಕು.

ಇನ್​ಸ್ಟಾಗ್ರಾಂನಲ್ಲಿ ಹುಷಾರು ಇನ್​ಸ್ಟಾಗ್ರಾಂನಲ್ಲಿ ಸುರಕ್ಷಿತವಾಗಿರಬೇಕು ಎಂದು ಬಯಸುವವರು ನೀವಾಗಿದ್ದರೆ ನಿಮ್ಮ ಖಾತೆಯನ್ನು Private ಆಗಿಟ್ಟುಕೊಳ್ಳಿ. ಅಂದರೆ ನಿಮ್ಮ ಖಾತೆ ಫಾಲೋ ಮಾಡಲು ಅನುಮತಿ ನೀಡಿದವರು ಮಾತ್ರ ನಿಮ್ಮ ಪೋಸ್ಟ್ ಗಳನ್ನು ನೋಡಬಹುದು. ನಿಮ್ಮ ಖಾತೆ ಫಾಲೋ ಮಾಡುವುದಕ್ಕಾಗಿ ಇತರರು ರಿಕ್ವೆಸ್ಟ್ ಕಳಿಸಬೇಕು. ಪ್ರೈವೇಟ್ ಖಾತೆಯಾಗಿದ್ದರೆ ನಿಮ್ಮ ಖಾತೆಗೆ ಯಾರು ಕಾಮೆಂಟ್ ಮಾಡಬಹುದು ಎಂಬುದನ್ನೂ ನೀವು ನಿಯಂತ್ರಿಸಬಹುದು. ಅ ಷ್ಟೇ ಅಲ್ಲದೆ Show Activity Status ಆಫ್ ಮಾಡಬಹುದು. ಇದರಿಂದ ನೀವು ಆನ್​ಲೈನ್​ನಲ್ಲಿದ್ದರೂ ನೀವು ಆನ್​ಲೈನ್​ನಲ್ಲಿದ್ದೀರಿ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.

ಇನ್​ಸ್ಟಾಗ್ರಾಂ ಖಾತೆ ಪ್ರೈವೇಟ್ ಮಾಡುವುದು ಹೇಗೆ? ಇನ್​ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅಲ್ಲಿ Privacy ಕ್ಲಿಕ್ ಮಾಡಿ -Private account ಎನೇಬಲ್ ಮಾಡಿ.

ಇನ್​ಸ್ಟಾ ಸ್ಟೋರಿಗಳನ್ನು close friends ಜತೆ ಶೇರ್ ಮಾಡಿ ನಿಮ್ಮ ಇನ್​ಸ್ಟಾ ಸ್ಟೋರಿಗಳನ್ನು ನಿರ್ದಿಷ್ಟ ಜನರ ಜತೆ ಮಾತ್ರ ಶೇರ್ ಮಾಡಬೇಕು ಎಂದು ಬಯಸಿದರೆ ಆ ಜನರನ್ನು close friends ಲಿಸ್ಟ್ ಗೆ ಸೇರಿಸಿಕೊಳ್ಳಿ. ನಿಮ್ಮ ಇನ್​ಸ್ಟಾಗ್ರಾಂ ಸ್ಟೋರಿಗಳನ್ನು ಶೇರ್ ಮಾಡುವಾಗ close friends ಜತೆ ಮಾತ್ರ ಶೇರ್ ಮಾಡಿ. ನಿಮಗೆ ಯಾವಾಗ ಬೇಕಾದರೂ ಯಾರನ್ನು ಬೇಕಾದರೂ close friends ಲಿಸ್ಟ್ ನಿಂದ ತೆಗೆದು ಹಾಕಬಹುದು ಇಲ್ಲವೇ ಸೇರಿಸಿಕೊಳ್ಳಬಹುದು. ನೀವು ಪಟ್ಟಿಯಲ್ಲಿ ಸೇರಿಸಿದ ಅಥವಾ ತೆಗೆದುಹಾಕಿದ ವ್ಯಕ್ತಿಗಳಿಗೆ ಯಾವುದೇ ನೋಟಿಫಿಕೇಶನ್ ಹೋಗುವುದಿಲ್ಲ

ಕಿರಿಕಿರಿ ಜನರನ್ನು ದೂರವಿರಿಸಿ ಯಾವುದೇ ವ್ಯಕ್ತಿ ನಿಮ್ಮ ಪೋಸ್ಟ್​ಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು, ಸಂದೇಶ ಕಳುಹಿಸಿ ಕಿರಿಕಿರಿ ಮಾಡುತ್ತಿದ್ದರೆ ಅವರನ್ನು ಬ್ಲಾಕ್ ಮಾಡಿ.

ಇದನ್ನೂ ಓದಿ: How to | ವಾಟ್ಸ್ಆ್ಯಪ್ ಸಂದೇಶ ಹೋಮ್ ಸ್ಕ್ರೀನ್​ನಲ್ಲಿ ಪೂರ್ತಿಯಾಗಿ ಕಾಣಿಸದಂತೆ ಮಾಡುವುದು ಹೇಗೆ?

Published On - 10:20 am, Mon, 8 March 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ