How to | ವಾಟ್ಸ್ಆ್ಯಪ್ ಸಂದೇಶ ಹೋಮ್ ಸ್ಕ್ರೀನ್​ನಲ್ಲಿ ಪೂರ್ತಿಯಾಗಿ ಕಾಣಿಸದಂತೆ ಮಾಡುವುದು ಹೇಗೆ?

ವಾಟ್ಸ್​ಆ್ಯಪ್​ ಚಾಟ್ ಗೌಪ್ಯವಾಗಿಡುವಂತೆ ನಿಮಗೆ ಬರುವ ಸಂದೇಶಗಳು ಹೋಮ್ ಸ್ಕ್ರೀನ್​ನಲ್ಲಿ ಪೂರ್ಣವಾಗಿ ತೆರೆದುಕೊಳ್ಳದಂತೆ ಕಾಪಾಡುವುದು ಗೌಪ್ಯತೆಯ ವಿಷಯವೇ ಆಗಿದೆ. ಸಂದೇಶಗಳಲ್ಲಿನ ಒಕ್ಕಣೆ ಹೋಮ್​ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳದಂತೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

How to | ವಾಟ್ಸ್ಆ್ಯಪ್ ಸಂದೇಶ ಹೋಮ್ ಸ್ಕ್ರೀನ್​ನಲ್ಲಿ ಪೂರ್ತಿಯಾಗಿ ಕಾಣಿಸದಂತೆ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 05, 2021 | 9:51 PM

ವಾಟ್ಸ್​ಆ್ಯಪ್​ನಲ್ಲಿ ನೀವು ಚಾಟ್ ಮಾಡುತ್ತಿರುವುದನ್ನು ಬೇರೆ ಯಾರಾದರೂ ನೋಡಿದರೆ ಕಿರಿಕಿರಿಯಾಗುತ್ತದೆ. ಇದು ಗೌಪ್ಯತೆಯ ವಿಷಯ. ಚಾಟ್ ಮಾಡುವ ವ್ಯಕ್ತಿ ಯಾರೇ ಆಗಿರಲಿ ಅಥವಾ ಯಾವುದೇ ವಿಷಯ ಆಗಿರಲಿ ಅದನ್ನು ಇನ್ನೊಬ್ಬರು ಓದುವುದು ಅಥವಾ ನೋಡುವುದು ಒಳ್ಳೆಯ ಸ್ವಭಾವ ಅಲ್ಲ. ಸಾಮಾನ್ಯವಾಗಿ ವಾಟ್ಸ್ಆ್ಯಪ್ ಸಂದೇಶದ preview ಮೊಬೈಲ್ ಹೋಮ್ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೀತಿ ಕಾಣಿಸಿಕೊಳ್ಳುವ ಸಂದೇಶಗಳು ಕೆಲವೊಮ್ಮೆ ಕುಟುಂಬ ಅಥವಾ ಸ್ನೇಹಿತರ ಕಣ್ಣಿಗೆ ಬಿದ್ದು ಮುಜುಗರ ಅಥವಾ ತಮಾಷೆಯ ವಸ್ತುವಾಗಿ ಬಿಡುತ್ತವೆ. ಈ ರೀತಿ ಸಂದೇಶಗಳು ಹೋಮ್ ಸ್ಕ್ರೀನ್​ನಲ್ಲಿ ಕಾಣಿಸದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ನೋಡೋಣ.

ಅಂಡ್ರಾಯ್ಡ್ ಫೋನ್​ಗಳಲ್ಲಿ ಸೆಟ್ಟಿಂಗ್ಸ್ ಬದಲಿಸಲು ಹೀಗೆ ಮಾಡಿ 1. ವಾಟ್ಸ್​ಆ್ಯಪ್ ತೆರೆದು ಬಲ ಭಾಗದಲ್ಲಿ ಮೇಲೆ ಇರುವ ಮೂರು ಚುಕ್ಕಿ ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಆಯ್ಕೆ ಮಾಡಿ. 2. ಅಕೌಂಟ್ ಆಪ್ಶನ್​ನಲ್ಲಿ ಪ್ರೈವೆಸಿ ಕ್ಲಿಕ್​ ಮಾಡಿ 3. ಕೆಳಗಡೆ Fingerprint lock ಎಂದಿರುತ್ತದೆ. ಅದನ್ನು ಕ್ಲಿಕ್ ಮಾಡಿ unlock with finger print ಎನೇಬಲ್ ಮಾಡಿ. 4. ಇಲ್ಲಿ ಎಷ್ಟು ಅವಧಿಯಲ್ಲಿ ಲಾಕ್ ಆಗಬೇಕು ಎಂಬ ಆಯ್ಕೆಯ ಕೆಳಗಡೆ Show content in notification ಎಂಬ ಆಪ್ಶನ್ ಇರುತ್ತದೆ. ಇದನ್ನು ಡಿಸೇಬಲ್ ಮಾಡಿ.

ಈ ರೀತಿ ಮಾಡಿದರೆ ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಎಷ್ಟು ಸಂದೇಶ ಬಂದಿದೆ ಎಂಬುದು ಮಾತ್ರ ಹೋಮ್ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುತ್ತದೆಯೇ ಹೊರತು ಸಂದೇಶದಲ್ಲಿರುವ ವಿಷಯ ಕಾಣಿಸಿಕೊಳ್ಳುವುದಿಲ್ಲ. ಸಂದೇಶವನ್ನು ಪೂರ್ತಿ ಓದಬೇಕಾದರೆ ವಾಟ್ಸ್ಆ್ಯಪ್ ಚಾಟ್ ವಿಂಡೊದಲ್ಲಿಯೇ ನೋಡಬೇಕು.

How to | ಇನ್​​ಸ್ಟಾ​ಗ್ರಾಮ್ ಖಾತೆ ಹ್ಯಾಕ್ ಆಗದಂತೆ ಕಾಪಾಡುವುದು ಹೇಗೆ?

Published On - 8:03 pm, Mon, 4 January 21

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ