ಡ್ರಗ್ಸ್‌ ಟೆಸ್ಟ್ ತೆಗೆದುಕೊಳ್ಳುವಂತೆ ರಣಬೀರ್‌, ರಣವೀರ್‌, ವಿಕ್ಕಿಗೆ ಕಂಗನಾ ಸಖತ್ ಚಾಲೆಂಜ್​

  • Publish Date - 1:34 pm, Wed, 2 September 20 Edited By: sadhu srinath Follow us -
ಡ್ರಗ್ಸ್‌ ಟೆಸ್ಟ್ ತೆಗೆದುಕೊಳ್ಳುವಂತೆ ರಣಬೀರ್‌, ರಣವೀರ್‌, ವಿಕ್ಕಿಗೆ ಕಂಗನಾ ಸಖತ್ ಚಾಲೆಂಜ್​

ಮುಂಬೈ: ಡ್ರಗ್ಸ್‌ ವಿವಾದ ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಬಾಲಿವುಡ್‌ಗೂ ಕಂಟಕವಾಗುತ್ತಿದೆ. ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ನಂತರ ದಿನಕ್ಕೊಂದು ತಿರುವು ಪಡೆಯುತ್ತಿರುವ ಡ್ರಗ್ಸ್‌ ಪ್ರಕರಣ ಈಗ ಬಾಲಿವುಡ್‌ನ ಟಾಪ್‌ ಸ್ಟಾರ್‌ಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ.

ಬಾಲಿವುಡ್‌ನ ನಟಿ ಕಂಗನಾ ರನಾವತ್‌ ಈಗ ಬಾಲಿವುಡ್‌ನ ಸೂಪರ್ ‌ಸ್ಟಾರ್‌ಗಳಾದ ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌ ಮತ್ತು ವಿಕ್ಕಿ ಕೌಶಾಲ್‌ರ ಮೇಲೆ ಡ್ರಗ್ಸ್‌ ಸೇವನೆಯ ಪರೋಕ್ಷ ಆರೋಪ ಮಾಡಿದ್ದು, ಡ್ರಗ್ಸ್‌ ಟೆಸ್ಟ್‌ಗೆ ಒಳಗಾಗುವಂತೆ ಅವರಿಗೆ ಚಾಲೆಂಜ್‌ ಮಾಡಿದ್ದಾಳೆ. ಈ ಸಂಬಂಧ ತನ್ನ ಟ್ವೀಟರ್ ಅಕೌಂಟ್‌ನಲ್ಲಿ ಕಂಗನಾ ಪೋಸ್ಟ್‌ ಮೂಲಕ ಈ ನಟರ ಮೇಲೆ ಗದಾ ಪ್ರಹಾರ ಮಾಡಿದ್ದಾಳೆ.

ಕಂಗನಾ ಕೇವಲ ಬಾಲಿವುಡ್‌ ನಟರ ಮೇಲೆ ಮಾತ್ರ ಗದಾ ಪ್ರಹಾರ ಮಾಡಿಲ್ಲ, ಮುಂಬೈ ಪೊಲೀಸರ ಮೇಲೂ ಡ್ರಗ್ಸ್‌ ದಂದೆ ಕುರಿತು ಆರೋಪ ಮಾಡಿದ್ದಾಳೆ. ಪೊಲೀಸ್‌ ಹೆಸರಿಗೆ ನೀವೊಬ್ಬ ಕಳಂಕ ಎಂದು ತನ್ನ ಟ್ವೀಟರ್‌ನಲ್ಲಿ ಮುಂಬೈ ಪೊಲೀಸ್‌ ಡಿಪಾರ್ಟ್‌ಮೆಂಟ್‌ಗೆ ಛೀಮಾರಿ ಹಾಕಿದ್ದಾಳೆ.

ಕಂಗನಾಳ ಈ ಓಪನ್‌ ಚಾಲೆಂಜ್‌ ಈಗ ಬಾಲಿವುಡ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹಲವಾರು ನೆಟ್ಟಿಗರು ಕಂಗನಾಳ ಈ ಓಪನ್‌ ಚಾಲೆಂಜ್‌ಗೆ ಬೆಂಬಲ ಕೂಡಾ ವ್ಯಕ್ತಪಡಿಸುತ್ತಿದ್ದಾರೆ. ಈ ಮೊದಲು ಸುಶಾಂತ್‌ ಸಾವಿನಲ್ಲಿ ಡ್ರಗ್ಸ್‌ ಪಾತ್ರವೂ ಇದೆ ಎಂಬ ಕಾರಣಕ್ಕೆ ಎನ್‌ಸಿಬಿ ಅಧಿಕಾರಿಗಳು ಹಲವರ ವಿಚಾರಣೆ ನಡೆಸುತ್ತಿದ್ದು, ಒಬ್ಬನನ್ನು ಅರೆಸ್ಟ್‌ ಕೂಡಾ ಮಾಡಿದ್ದಾರೆ.

ಈಗ ಕಂಗನಾ ರನವಾತ್‌ಳಂಥ ಟಾಪ್‌ ನಟಿ ನೇರವಾಗಿ ಸೂಪರ್‌ ಸ್ಟಾರ್‌ಗಳಿಗೆ ಚಾಲೆಂಜ್‌ ಮಾಡಿರೋದು ಬಾಲಿವುಡ್‌ನಲ್ಲಿ ಕೂಡಾ ಡ್ರಗ್ಸ್‌ ದಂಧೆ ಬೇರು ಮಟ್ಟದಲ್ಲಿ ನಡೆಯುತ್ತಿರೋದು ಈಗ ಕನ್ಫರ್ಮ್‌ ಆಗಿದೆ. ಯಾಕಂದ್ರೆ ಇದುವರೆಗೆ ಗುಸುಗುಸು ಮಾತಾಗಿದ್ದ ಡ್ರಗ್ಸ್‌ ಹಾವಳಿ ಈಗ ಖುಲ್ಲಂ ಖುಲ್ಲಾ ಆಗಿದ್ದು ಇನ್ನು ಯಾವ ಯಾವ ತಿಮಿಂಗಲುಗಳ ಹೆಸರು ಹೊರಗೆ ಬರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Click on your DTH Provider to Add TV9 Kannada