ಭಯ ಬೀಳಿಸುವಂತಿದೆ ರಣಬೀರ್ ಕಪೂರ್ ಹೊಸ ಲುಕ್; ಯಾವ ಸಿನಿಮಾ?

‘ಬ್ರಹ್ಮಾಸ್ತ್ರ’ ಸಿನಿಮಾ ಕೆಲಸಗಳಲ್ಲಿ ರಣಬೀರ್ ಕಪೂರ್ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮಧ್ಯೆ ‘ಶಂಷೇರಾ’ ಸಿನಿಮಾ ಕೆಲಸಗಳನ್ನು ಮುಗಿಸಿದ್ದಾರೆ ರಣಬೀರ್​.

ಭಯ ಬೀಳಿಸುವಂತಿದೆ ರಣಬೀರ್ ಕಪೂರ್ ಹೊಸ ಲುಕ್; ಯಾವ ಸಿನಿಮಾ?
ರಣಬೀರ್
TV9kannada Web Team

| Edited By: Rajesh Duggumane

Jun 18, 2022 | 8:08 PM

ನಟ ರಣಬೀರ್ ಕಪೂರ್ ಅವರಿಗೆ (Ranbir Kapoor) ‘ಸಂಜು’ ಸಿನಿಮಾ ದೊಡ್ಡ ಮಟ್ಟದ ಹಿಟ್ ಕೊಟ್ಟಿತ್ತು. ಈ ಚಿತ್ರದಲ್ಲಿ ಹಲವು ಗೆಟಪ್​ನಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆರೆಕಂಡ ಬಳಿಕ ರಣಬೀರ್ ಕಪೂರ್ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಈ ನಿರೀಕ್ಷೆಗೆ ತಕ್ಕಂತೆಯೇ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗಲಿರುವ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಮೂಲಕ ರಣಬೀರ್ ಫ್ಯಾಂಟಸಿ ಕಥೆ ಹೇಳುತ್ತಿದ್ದಾರೆ. ಈಗ ಅವರ ನಟನೆಯ ‘ಶಂಷೇರಾ’ ಸಿನಿಮಾದ (Shamshera) ಲುಕ್ ಅನಾವರಣಗೊಂಡಿದೆ. ಈ ಲುಕ್ ಭಯ ಬೀಳಿಸುವಂತಿದೆ. ಅವರ ಟ್ರಾನ್ಸ್​ಫಾರ್ಮೇಷನ್ ನೋಡಿ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.

ಸದ್ಯ, ‘ಬ್ರಹ್ಮಾಸ್ತ್ರ’ ಸಿನಿಮಾ ಕೆಲಸಗಳಲ್ಲಿ ರಣಬೀರ್ ಕಪೂರ್ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮಧ್ಯೆ ‘ಶಂಷೇರಾ’ ಸಿನಿಮಾ ಕೆಲಸಗಳನ್ನು ಮುಗಿಸಿದ್ದಾರೆ ರಣಬೀರ್​. ವಾಣಿ ಕಪೂರ್ ಹಾಗೂ ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಕೆಲ ಫ್ಯಾನ್​ ಮೇಡ್ ಪೋಸ್ಟರ್​ಗಳು ಕೂಡ ವೈರಲ್ ಆಗಿತ್ತು. ಈಗ ನಿರ್ದೇಶಕ ಕರಣ್ ಮಲ್ಹೋತ್ರಾ ಅವರು ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿ, ಚಿತ್ರದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ರಣಬೀರ್ ಅವರ ‘ಶಂಷೇರಾ’ ಲುಕ್ ಭಯಾನಕವಾಗಿದೆ. ರಣಬೀರ್ ಉದ್ದನೆಯ ಕೂದಲು ಬಿಟ್ಟಿದ್ದಾರೆ. ಅವರ ಗಡ್ಡ ಕೂಡ ಹೇಗೇಗೋ ಬೆಳೆದುಕೊಂಡಿದೆ. ಕೈಯಲ್ಲಿ ಕೊಡಲಿ ರೀತಿಯ ಆಯುಧ ಒಂದನ್ನು ಹಿಡಿದಿದ್ದಾರೆ. ಅವರ ಮುಖ ತುಂಬಾನೇ ಸಿಟ್ಟಿನಿಂದ ಕೂಡಿದೆ. ಈ ಚಿತ್ರ ಜುಲೈ 22 ರಂದು ತೆರೆಗೆ ಬರುವ ಬಗ್ಗೆಯೂ ಈ ಪೋಸ್ಟರ್​ನಲ್ಲಿ ಘೋಷಣೆ ಮಾಡಲಾಗಿದೆ.

‘ಮತ್ತೊಂದು ಬ್ಲಾಕ್​ಬಸ್ಟರ್​ ಸಿನಿಮಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಆರ್​ಕೆ ಅವರು ಕಂಬ್ಯಾಕ್ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟರ್​ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ನಿಜ.

ಇದನ್ನೂ ಓದಿ: ಶಿವ ಎಂಬ ಪಾತ್ರ ಮಾಡಿ, ಶೂ ಧರಿಸಿ ದೇವಸ್ಥಾನ ಪ್ರವೇಶಿಸಿದ ರಣಬೀರ್​; ಇದು ‘ಬ್ರಹ್ಮಾಸ್ತ್ರ’ ಎಡವಟ್ಟು

2018ರಲ್ಲಿ ತೆರೆಗೆ ಬಂದ ‘ಸಂಜು’ ಸಿನಿಮಾ ಬಳಿಕ ರಣಬೀರ್ ಸಿನಿಮಾ ಒಪ್ಪಿಕೊಳ್ಳಲು ಆತುರ ಮಾಡಲಿಲ್ಲ. ತುಂಬಾನೇ ಆಲೋಚಿಸಿ ಸಿನಿಮಾ ಒಪ್ಪಿಕೊಂಡರು. ಈಗ ‘ಬ್ರಹ್ಮಾಸ್ತ್ರ’ ಚಿತ್ರ ತೆರೆಗೆ ಬರುವುದಕ್ಕೂ ಮೊದಲೇ ‘ಶಂಷೇರಾ’ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada