Urfi Javed: ‘ಫ್ಲವರ್​ ಅಂದುಕೊಂಡ್ಯಾ? ಅಲ್ಲ.. ಫೈರ್’​; ಬಿಕಿನಿಗೆ ಹೂವು ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​

Urfi Javed Photo: ಬಟ್ಟೆಗಳ ವಿಚಾರದಲ್ಲಿ ಉರ್ಫಿ ಜಾವೇದ್​ ಅವರಿಗೆ ಏನೋ ಒಂಥರಾ ಕ್ರೇಜ್​. ಚಿತ್ರ-ವಿಚಿತ್ರ ಪ್ರಯೋಗಗಳನ್ನು ಅವರು ಮಾಡುತ್ತಾರೆ.

Urfi Javed: ‘ಫ್ಲವರ್​ ಅಂದುಕೊಂಡ್ಯಾ? ಅಲ್ಲ.. ಫೈರ್’​; ಬಿಕಿನಿಗೆ ಹೂವು ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​
ಉರ್ಫಿ ಜಾವೇದ್
Follow us
TV9 Web
| Updated By: ಮದನ್​ ಕುಮಾರ್​

Updated on: Jun 18, 2022 | 11:35 AM

ನಟಿ ಉರ್ಫಿ ಜಾವೇದ್​ (Urfi Javed) ಅವರು ಮಾಡದ ಅವತಾರಗಳೇ ಇಲ್ಲ. ಕಾಸ್ಟ್ಯೂಮ್​ ವಿಚಾರದಲ್ಲಿ ಅವರು ಪ್ರತಿ ದಿನವೂ ಸುದ್ದಿ ಆಗುತ್ತಾರೆ. ಬಗೆಬಗೆಯ ಬಟ್ಟೆ ಧರಿಸಿಕೊಂಡು ಬಂದು ಪಾಪರಾಜಿ ಕ್ಯಾಮೆರಾಗಳ ಮುಂದೆ ಪೋಸ್​ ನೀಡುವುದೇ ಅವರ ಕಸುಬು ಆದಂತಿದೆ. ಸೋಶಿಯಲ್​ ಮೀಡಿಯಾದಲ್ಲಂತೂ ಉರ್ಫಿ ಜಾವೇದ್​ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತವೆ. ನಟನೆಗಿಂತಲೂ ಹೆಚ್ಚಾಗಿ ಅವರು ಈ ರೀತಿಯ ಬಟ್ಟೆ ಧರಿಸಿಯೇ ಫೇಮಸ್​ ಆಗಿದ್ದಾರೆ. ಇನ್ನು ಅವರಿಗೆ ಟ್ರೋಲ್​ ಕಾಟವೂ ತಪ್ಪಿದ್ದಲ್ಲ. ಉರ್ಫಿ ಜಾವೇದ್​ ಅವರ ಫೋಟೋ (Urfi Javed Photo) ಮತ್ತು ವಿಡಿಯೋಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡ್ತಾರೆ. ಕೆಲವರು ಹಿಗ್ಗಾಮುಗ್ಗಾ ಟ್ರೋಲ್​ ಮಾಡ್ತಾರೆ. ಆದರೆ ಅದಕ್ಕೆಲ್ಲ ಈ ನಟಿ ತಲೆ ಕೆಡಿಸಿಕೊಂಡಿಲ್ಲ. ದಿನದಿನಕ್ಕೂ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಈಗ ಅವರು ಬಿಕಿನಿಗೆ (Bikini) ಹೂವು ಅಂಟಿಸಿಕೊಂಡು ಬಂದಿದ್ದಾರೆ. ಆ ಮೂಲಕ ಪಡ್ಡೆಗಳ ನಿದ್ದೆ ಕದಿಯಲು ಪ್ರಯತ್ನಿಸಿದ್ದಾರೆ.

‘ಪುಷ್ಪ ಅಂದ್ರೆ ಫ್ಲವರ್​ ಅಂದುಕೊಂಡ್ಯಾ? ಫೈರ್​..!’ ಎಂದು ಅಲ್ಲು ಅರ್ಜುನ್​ ಡೈಲಾಗ್​ ಹೊಡೆದಿದ್ದನ್ನು ನೆಟ್ಟಿಗರು ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಉರ್ಫಿ ಜಾವೇದ್​ ಹಾಗೆಯೇ ಡ್ರೆಸ್​ ಮಾಡಿಕೊಂಡು ಬಂದಿದ್ದಾರೆ. ಬಿಕಿನಿಗೆ ಫ್ಲವರ್​ ಅಂಟಿಸಿಕೊಂಡು ಬಂದಿದ್ದಾರೆ. ಆದರೆ ಅವರ ಮಾದಕತೆ ಫೈರ್ ರೀತಿ ಇದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ
Image
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Image
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
Image
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
Image
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಇದನ್ನೂ ಓದಿ: ಭಗವದ್ಗೀತೆ ಹಿಡಿದು ಬಂದ ಮುಸ್ಲಿಂ ನಟಿ ಉರ್ಫಿ; ‘​ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ’ ಎಂದಿದ್ದೇಕೆ?

ಬಟ್ಟೆ ಮಾತ್ರವಲ್ಲದೇ ಬೇರೆ ವಿಚಾರಗಳಿಂದಲೂ ಊರ್ಫಿ ಜಾವೇದ್​ ಅವರು ಆಗಾಗ ಸುದ್ದಿ ಆಗುತ್ತಾರೆ. ‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಅವರು ಭಾಗವಹಿಸಿದ್ದರು. ಕಿರುತೆರೆಯಲ್ಲಿ ತಮಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂಬ ಬೇಸರ ಕೂಡ ಅವರಿಗೆ ಇದೆ. ಈ ಹಿಂದೆ ನೀಡಿದ ಸಂದರ್ಶನಗಳಲ್ಲಿ ಅವರು ಅದನ್ನು ನೇರವಾಗಿ ಹೇಳಿಕೊಂಡಿದ್ದರು. ಕಿರುತೆರೆಯ ಸೆಲೆಬ್ರಿಟಿಗಳಿಂದಲೇ ತಮಗೆ ಅವಮಾನ ಆಗಿದೆ ಎಂದು ಉರ್ಫಿ ಹೇಳಿದ್ದರು.

View this post on Instagram

A post shared by Uorfi (@urf7i)

‘ನನ್ನ ಫೋಟೋಗಳು ಅಪ್​ಲೋಡ್​ ಆದಾಗ ಅಥವಾ ವೈರಲ್​ ಆದಾಗ ಬ್ಲೂ ಟಿಕ್​ ಇರುವ ಕಿರುತೆರೆಯ ಸೆಲೆಬ್ರಿಟಿಗಳು ಕೆಟ್ಟದಾಗಿ ಕಮೆಂಟ್​ ಮಾಡುತ್ತಾರೆ. ಇವರಿಗೆಲ್ಲ ನಾನೇನು ಅನ್ಯಾಯ ಮಾಡಿದ್ದೇನೆ? ಯಾಕೆ ಈ ರೀತಿಯಾಗಿ ಕೆಟ್ಟ ಕಮೆಂಟ್​ ಮಾಡ್ತಾರೆ’ ಎಂದು ಉರ್ಫಿ ಜಾವೇದ್​ ಬೇಸರ ವ್ಯಕ್ತಪಡಿಸಿದ್ದರು. ಅದೇನೇ ಇರಲಿ, ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ 32 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.