AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VG Siddhartha Biopic: ಸಿನಿಮಾ ಆಗ್ತಿದೆ ಕಾಫಿ ಡೇ ಸಿದ್ದಾರ್ಥ​ ಬದುಕಿನ ಕಥೆ; ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಯಾರು?

Cafe Coffee Day | VG Siddhartha: ‘ಕೆಫೆ ಕಾಫಿ ಡೇ’ ಮಾಲಿಕ ಸಿದ್ದಾರ್ಥ ಜೀವನದ ಏಳು-ಬೀಳಿನ ವಿವರಗಳಿಗೆ ಸಿನಿಮಾ ರೂಪ ಸಿಗುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆಗಳು ಇದಕ್ಕಾಗಿ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ.

VG Siddhartha Biopic: ಸಿನಿಮಾ ಆಗ್ತಿದೆ ಕಾಫಿ ಡೇ ಸಿದ್ದಾರ್ಥ​ ಬದುಕಿನ ಕಥೆ; ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಯಾರು?
ವಿ.ಜಿ. ಸಿದ್ದಾರ್ಥ
TV9 Web
| Edited By: |

Updated on:Jun 17, 2022 | 1:06 PM

Share

ಅನೇಕ ಬಯೋಪಿಕ್​ಗಳು ಜನರ ಮನಗೆದ್ದಿವೆ. ಸಾಧಕರ ಕಥೆಯನ್ನು ಬೆಳ್ಳಿಪರದೆ ಮೇಲೆ ನೋಡುವುದರಿಂದ ಪ್ರೇಕ್ಷಕರಿಗೆ ಸ್ಫೂರ್ತಿ ಹೆಚ್ಚುತ್ತದೆ. ಹಲವಾರು ಮಹಾನ್​ ವ್ಯಕ್ತಿಗಳ ಜೀವನದ ವಿವರವನ್ನು ಇಟ್ಟುಕೊಂಡು ಈಗಾಗಲೇ ಸಿನಿಮಾ ಮಾಡಲಾಗಿದೆ. ಬಾಲಿವುಡ್​ನಲ್ಲಿ ಬಯೋಪಿಕ್​ ಟ್ರೆಂಡ್​ ಜೋರಾಗಿದೆ. ಈಗ ‘ಕೆಫೆ ಕಾಫಿ ಡೇ’ (Cafe Coffee Day) ಸಂಸ್ಥಾಪಕ ವಿ.ಜಿ. ಸಿದ್ದಾರ್ಥ ಅವರ ಕುರಿತು ಬಯೋಪಿಕ್​ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದೆ. ಉದ್ಯಮ ಲೋಕದಲ್ಲಿ ಸಾಧನೆ ಮಾಡಿದ ಸಿದ್ದಾರ್ಥ (VG Siddhartha) ಅವರ ಜೀವನ ದುರಂತ ಅಂತ್ಯ ಕಂಡಿದ್ದು ಮಾತ್ರ ನೋವಿನ ಸಂಗತಿ. ಆದರೆ ಅವರು ಸಾಗಿ ಬಂದ ಹಾದಿ ನಿಜಕ್ಕೂ ಕೋಟ್ಯಂತರ ಜನರಿಗೆ ಮಾದರಿ ಆಗುವಂಥದ್ದು. ಹಾಗಾಗಿ ಅವರ ಬಯೋಪಿಕ್​ (VG Siddhartha Biopic) ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆಬಂದಿವೆ.

ವಿ.ಜಿ. ಸಿದ್ದಾರ್ಥ ಅವರ ಜೀವನದ ಕುರಿತು ‘ಕಾಫಿ ಕಿಂಗ್​’ ಪುಸ್ತಕ ಸಿದ್ಧವಾಗುತ್ತಿದೆ. ಈ ಪುಸ್ತಕದಲ್ಲಿನ ವಿವರಗಳನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್​ ರೆಡಿಯಾಗಿದೆ. ‘ಟಿ-ಸಿರೀಸ್​’ ಮತ್ತು ‘ಆಲ್​ಮೈಟಿ ಮೋಷನ್​ ಪಿಕ್ಚರ್​’ ಸಂಸ್ಥೆಗಳು ಈ ಸಿನಿಮಾಗೆ ಬಂಡವಾಳ ಹೂಡಲಿವೆ. ಅದರ ಜೊತೆಗೆ ‘ಕರ್ಮ ಮೀಡಿಯಾ ಎಂಟರ್​ಟೇನ್​ಮೆಂಟ್​’ ಕೂಡ ಕೈ ಜೋಡಿಸುತ್ತಿದೆ. ಈ ಕುರಿತು ಟಿ-ಸಿರೀಸ್​ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ​ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.

‘ಸಾಕಷ್ಟು ಅಧ್ಯಯನ ನಡೆಸಿ ‘ಕಾಫಿ ಕಿಂಗ್​’ ಪುಸ್ತಕವನ್ನು ಬರೆಯಲಾಗಿದೆ. ಮಹಾನ್​ ಉದ್ಯಮಿ ಸಿದ್ದಾರ್ಥ ಬದುಕಿನ ಬಗ್ಗೆ ಗೊತ್ತಿರದ ಅನೇಕ ವಿಚಾರಗಳನ್ನು ಇದು ಒಳಗೊಂಡಿದೆ’ ಎಂದು ನಿರ್ಮಾಪಕ ಪ್ರಭಲೀನ್​ ಕೌರ್​ ಸಂಧು ಹೇಳಿದ್ದಾರೆ. ಈ ಸಿನಿಮಾದಲ್ಲಿ ವಿ.ಜಿ. ಸಿದ್ದಾರ್ಥ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಸಿದ್ದಾರ್ಥ ಬದುಕಿನ ದುರಂತ ಅಂತ್ಯ:

‘ಕೆಫೆ ಕಾಫಿ ಡೇ’ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಸಿದ್ದಾರ್ಥ ಅವರು ಸಾಲದ ಸುಳಿಗೆ ಸಿಲುಕಿದ್ದರು. ಬಿಸ್ನೆಸ್​ನಲ್ಲಿ ನಷ್ಟ ಆಗಿದ್ದರಿಂದ ಅವರು ಆತ್ಯಹತ್ಯೆ ಮಾಡಿಕೊಂಡರು. 2019ರ ಜುಲೈ 31ರಂದು ತಮ್ಮ 59ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅವರ ಜೀವನದ ಏಳು-ಬೀಳಿನ ವಿವರಗಳಿಗೆ ಸಿನಿಮಾ ರೂಪ ಸಿಗುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆಗಳು ಇದಕ್ಕಾಗಿ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:06 pm, Fri, 17 June 22

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ